ಗುಂಡ್ಲುಪೇಟೆ: ಕಾಡುಹಂದಿ ದಾಳಿ ನಡೆಸಿ ವ್ಯಕ್ತಿಯೊಬ್ಬರ ಕಾಲಿಗೆ ಗಂಭೀರ ಗಾಯವಾಗಿರುವ ಘಟನೆ ತಾಲ್ಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ನಡೆದಿದೆ.
ತೆಂಕಲಹುಂಡಿ ಗ್ರಾಮದ ಬೆಳ್ಳೆಗೌಡ(72) ಗಾಯಗೊಂಡ ರೈತ.
ಈತ ತಮ್ಮ ಜಮೀನಿನಲ್ಲಿ ಕೆಲಸ ಮಾಡುತಿದ್ದ ಸಮಯದಲ್ಲಿ ಕಾಡುಹಂದಿ ಏಕಾಏಕಿ ದಾಳಿ ನಡೆಸಿ ಬೆಳ್ಳೇಗೌಡನ ಬಲಗಾಲಿಗೆ ಗುದ್ದಿದೆ ಇದರಿಂದ ತೊಡೆ ಹಾಗೂ ಮೊಣಕಾಲು ಭಾಗಕ್ಕೆ ತೀವ್ರತರವಾದ ಗಾಯಗಳಾಗಿದೆ ಈ ವೇಳೆ ಗಾಯಗೊಂಡ ರೈತ ಕೂಗಿಕೊಂಡ ಹಿನ್ನೆಲೆ ಕಾಡುಹಂದಿ ಓಡಿಹೋಗಿದೆ.ಸುತ್ತಮುತ್ತಲಿನ ರೈತರು ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ.
ಈ ಕುರಿತು ಡಿ.ಆರ್.ಎಫ್.ಓ ಭರತ್ ಪ್ರತಿಕ್ರಿಯೆ ನೀಡಿ ತೆಂಕಲಹುಂಡಿ ಗ್ರಾಮದ ರೈತ ಬೆಳ್ಳೇಗೌಡನ ಮೇಲೆ ಕಾಡುಹಂದಿ ದಾಳಿ ನಡೆಸಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲಾಗಿದೆ ಜೊತೆಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.