ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷಿ÷್ಮಯೋಜನೆಯ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿಪಕ್ಷದ ಜಿ ಲ್ಲಾ ವಕ್ತಾರ ನಾಗರಾಜ್ ಬೇದ್ರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಗೃಹಲಕ್ಷ್ಮೀಯರ ಹೆಸರಿನಲ್ಲಿ ಸರ್ಕಾರದ ಬೊಕ್ಕಸಬರಿದಾಗು
ತ್ತಿದ್ದು,ಕಾಂಗ್ರೆ ಸಿಗರ ಖಜಾನೆ ತುಂಬುತ್ತಿರುವುದೇ ಈ ಸರ್ಕಾರದ ಸಾಧನೆ ಎಂದು ಅವ ರು ಲೇವಡಿ ಮಾಡಿದ್ದಾರೆ.ಸುಮಾರು 19,020 ಗೃಹಲಕ್ಷಿ÷್ಮ ಫಲಾನುಭವಿ ಗಳ ಮಾಸಿಕ ಹಣವು ಕೇವಲ ಒಂದೇ ಒಂದು ಬ್ಯಾಂಕ್ ಖಾತೆಗೆ ಜಮಾ ವಾಗುತ್ತಿದೆ.ಇದು ವ್ಯವಸ್ಥಿತವಾಗಿ ನಡೆದಿರುವ ದೊಡ್ಡ ಮಟ್ಟದ ಹಗರಣ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಅವರು ಆರೋಪಿಸಿ, ಯಾವು ದೇ ಬ್ಯಾಂಕ್ ಖಾತೆಯ ಸರಿಯಾದ ವಿವರಗಳೇ ಇಲ್ಲದ 23,262 ಖಾತೆ ಗಳಿಗೆ ಬರೋಬ್ಬರಿ 46.52 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿ ದೆ. ಈ ಹಣ ಯಾರ ಪಾಲಾಗಿದೆ. ಈ ಖಾತೆಗಳ ಅಸಲಿ ಮಾಲೀಕರು ಯಾರು ಎಂದು ಪ್ರಶ್ನಿಸಿದ್ದಾರೆ.ಕಳೆದ ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಬಾಕಿ ಇರುವ ಕುರಿತು ಬೆಳಗಾವಿ ಅಧಿವೇಶನದಲ್ಲೇ ನಮ್ಮ ಪಕ್ಷದ ಮುಖಂಡರು ಪ್ರಶ್ನೆ ಮಾಡಿದ್ದರೂ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಇದಕ್ಕೆ ಸಂಬಂಧ ಪಟ್ಟ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಮಾಯವಾಗಿದ್ದರೆ. ಗೃಹಲಕ್ಷ್ಮೀ 5,000 ಕೋಟಿ ರೂಪಾಯಿ ಹಣ ಎಲ್ಲಿ ಮಾಯವಾಗಿದೆ ಎಂದು ಅವರು ಆಕ್ರೋ ಶ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ತಾನು ಹೇಳಿಕೊಳ್ಳುವಂತೆ ಪ್ರಾಮಾಣಿಕವಾಗಿದ್ದರೆ, ತಕ್ಷಣವೇಈ ಯೋಜನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು (ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು) ತನಿಖೆಗೆ ಒದಗಿಸಬೇಕು.ಇಲ್ಲವಾದಲ್ಲಿ, ಸಿಎಜಿ ಇದೊಂದು ಲೂಟಿ ಸರ್ಕಾರ ಎನ್ನುವುದು ಯಾವುದೇ ಅ ನುಮಾನವಿಲ್ಲದೆ ಸಾಬೀತಾಗುತ್ತದೆ ಎಂದು ದೂರಿದರು.
ಗೃಹಲಕ್ಷ್ಮೀಯ 5,000ಸಾವಿರ ಕೋಟಿ ಹಣ ಎಲ್ಲಿ ಮಾಯವಾಗಿದೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ನಾಗರಾಜ್ ಬೇದ್ರೆ ಪ್ರಶ್ನೆ



