ಬೆಂಗಳೂರು: ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆಸಿರುವವರ ಬಗ್ಗೆ ಮುಂದಿನ ಕ್ರಮ ಜರುಗಿಸುವುದು ನಮಗೆ ಬಿಟ್ಟ ವಿಷಯ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವುದು ನಿಮ್ಮ ಕೆಲಸ ಎಂದು ಬಿಜೆಪಿಯ ರಾಷ್ಟ್ರೀಯ ವರಿಷ್ಠರು ರಾಜ್ಯ ನಾಯಕರಿಗೆ ಸಲಹೆ ಮಾಡಿದ್ದಾರೆ. ನಿನ್ನೆ ದೆಹಲಿಯಲ್ಲಿ ವಿಧಾನಪರಿಷತ್ ಚುನಾವಣೆ ಸಂಬAಧ ನಡೆದ ಘಟಾನವಳಿಗಳ ಬಗ್ಗೆ ವರದಿ ನೀಡಲು ತೆರಳಿದ್ದ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರು ಸೇರಿದಂತೆ ಹಲವು ಮುಖಂಡರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 18ರಂದು ನಡೆದ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ವರದಿ ನೀಡಲು ನಿನ್ನೆ ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕ ಮತ್ತು ಇತರೆ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ವರದಿ ನೀಡಲು ಮುಂದದಾಗ ನಮಗೆ ಎಲ್ಲವೂ ಗೊತ್ತಿದೆ. ಬೇರೆ ಏನಾದರೂ ಇದ್ದರೆ ಹೇಳಿ ಎಂದು ರಾಷ್ಟ್ರೀಯ ಅಧ್ಯಕ್ಷರು ಈ ನಾಯಕರಿಗೆ ಕೇಳಿದ್ದಾರೆ.
ಆಗ ರಾಜ್ಯ ನಾಯಕರು ತಮ್ಮ ಬಳಿಯಿರುವ ಮಾಹಿತಿಯನ್ನು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಾಯಕರ ಮಾಹಿತಿ ಪ್ರತಿಯಾಗಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರು ಪರಿಷತ್ ಚುನಾವಣೆಯಲ್ಲಿ ಯಾರು ಯಾರು ಏನು ಮಾಡಿದ್ದಾರೆ. ಏನೇನು ನಡೆದಿದೆ ಎಂಬುದು ನಮಗೆ ತಿಳಿದಿದೆ. ಪಕ್ಷದ ಸಂಘಟನೆಯ ಬಗ್ಗೆ ಏನಾದರೂ ಇದ್ದರೆ ತಿಳಿಸಿ ಎಂದಿದ್ದಾರೆ.
ತಪ್ಪೆಸಗಿರುವವರನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಪಕ್ಷ ಈ ಪ್ರಕರಣವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಶಿಸ್ತ ಕ್ರಮ ಜರುಗಿಸುವುದಲ್ಲದೆ ಪಕ್ಷ ಏನು ಮಾಡಬೇಕು ಅದನ್ನೇ ಮಾಡುತ್ತದೆ. ಯಾವುದೇ ಕಾರಣಕ್ಕೂ ಅವರನ್ನು ಬಿಡುವುದೇ ಇಲ್ಲ. ನೀವುಗಳು ರಾಜ್ಯದಲ್ಲಿ ಪಕ್ಷದ ಕೆಲಸ ಮಾಡಿ ಪಕ್ಷವನ್ನು ಮುಂದಿನ ಚುನಾವಣೆ ವೇಳೆಗೆ ಸದೃಢವಾಗಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರಲು ಕೆಲಸ ಮಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕ್ರಮ ನಮ್ಮದು ಕೆಲಸ ನಿಮ್ಮದು!? ಅಡ್ಡಮತದಾನದ ಬಗ್ಗೆ ಕೇಂದ್ರದ ವರಿಷ್ಠರಿಂದ ರಾಜ್ಯ ನಾಯಕರಿಗೆ ಸಲಹೆ



