ಕನಕಪುರ: ಸೋಮವಾರ ಲಿಂಗೈಕ್ಯರಾದ ತಾಲ್ಲೂಕಿನ ಪ್ರಸಿದ್ಧ ಶ್ರೀ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ದೇಗುಲ ಮಠದ ಆವರಣದಲ್ಲಿ ಅಂತಿಮ ನಮನ ಸಲ್ಲಿಸಿದರು.
ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಮುಖ್ಯಮಂತ್ರಿಯವರು ನಂತರ ಪಾದುಕೆಗಳಿಗೆ ನಮಸ್ಕರಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು, ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಷ್ಟ್ರಧ್ವಜವನ್ನು ದೇಗುಲ ಮಠದ ಕಿರಿಯ ಸ್ವಾಮೀಜಿಗಳಿಗೆ ಧ್ವಜ ಹಸ್ತಾಂತರ ಮಾಡುವ ವೇಳೆ ಭಾವುಕರಾದ ಸಿಎಂ ಶಿವಕುಮಾರ್ ಅವರು ಬಿಕ್ಕಿ, ಬಿಕ್ಕಿ ಅಳುತ್ತಲೇ ರಾಷ್ಟ್ರಧ್ವಜವನ್ನು ಕಿರಿಯ ಸ್ವಾಮೀಜಿಗೆ ನೀಡಿದರು ನಂತರ ಲಿಂಗೈಕ್ಯ ಮಹಾಸ್ವಾಮಿ ಗಳ ಪಾದುಕೆಗಳಿಗೆ ನಮಸ್ಕರಿಸಿ ಕಿರಿಯ ಶ್ರೀಗಳಿಗೆ ನಮಿಸಿದರು. ಇದು ಶ್ರೀಗಳ ಅಂತಿಮ ದರ್ಶನಕ್ಕೆ ನೆರೆದಿದ್ದ ಮಠದ ಭಕ್ತಾಧಿಗಳ ಕಣ್ಣುಗಳನ್ನು ತೇವಗೊಳಿಸಿತು. ನಂತರ ಶ್ರೀಗಳ ಗದ್ದುಗೆ ಸ್ಥಳಕ್ಕೆ ತೆರಳಿ ವಿಭೂತಿ ಗಟ್ಟಿ ಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಭಕ್ತನಿಗೂ ಹಾಗೂ ಭಗವಂತನಿಗೂ ಇರುವ ಸಂಬಂಧ ಇದು” ಎಂದರು.ಮಠದ ಆವರಣದಲ್ಲಿ ನೆರೆದಿದ್ದ ಮಠದ ಭಕ್ತರು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಸಿ ಎಂ ಡಿ.ಕೆ.ಶಿವಕುಮಾರ್ ಅವರು, `ಶ್ರೀಗಳು ಅತ್ಯಂತ ಕಡಿಮೆ ಮಾತನಾಡುತ್ತಿದ್ದರು,ಆದರೆ ಮೌನವಾಗಿಯೇ ಅಚ್ಚು ಕಟ್ಟಾಗಿ ಕೆಲಸಗಳನ್ನು ನೆರವೇರಿಸುತ್ತಿದ್ದರು,ಚುನಾವಣೆ ಮುಂಚಿತವಾಗಿ ಅವರ ಆಶೀರ್ವಾದ ಪಡೆಯಲು ಹೋದ ಸಂದರ್ಭದಲ್ಲಿ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದರೂ ಸಹ ತಮಗೆ ಹಣದ ಕಟ್ಟನ್ನು ನೀಡಿ `ಇದು ಚುನಾವಣಾ ಖರ್ಚಿಗೆ ಸಣ್ಣ ಕೊಡುಗೆ’ ಎಂದು ಹೇಳಿ ಆಶೀರ್ವಾದ ಮಾಡಿದ್ದರು ಅವರಿಗೆ ಭವಿಷ್ಯದಲ್ಲಿ ಏನಾಗುತ್ತದೆ ಎಂದು ಮೊದಲೇ ತಿಳಿದಿತ್ತು’ ಎಂದು ಭಾವುಕರಾದರು.`ನನಗೆ ಕೆಂಪೇಗೌಡ ಎಂದು ನಾಮಕರಣ ಮಾಡಿದ್ದರೂ ಶಿವಗಿರಿ ಕ್ಷೇತ್ರದ ಅನುಗ್ರಹ ಇದ್ದ ಕಾರಣಕ್ಕೆ ಶಿವಕುಮಾರ್ ಎಂದು ನಾಮಕರಣ ಮಾಡಲಾಯಿತು ಎಂದು ನಮ್ಮ ತಾಯಿ ಹೇಳುತ್ತಿರುತ್ತಾರೆ, ನನಗೂ ಮಠ-ಮಾನ್ಯಗಳಿಗೂ ಅವಿನಾಭಾವ ಸಂಬAಧವಿದೆ,ಮನೆ ಹುಷಾರು, ಮಠ ಹುಷಾರು ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ನಮ್ಮ ಮಠಗಳನ್ನೂ ನಾವು ಉಳಿಸಿ ಬೆಳೆಸಬೇಕು. ಸಾವಿಗೆ ಗಳಿಗೆಯಿಲ್ಲ, ಸಾವು ಯಾರನ್ನೂ ಕೇಳಿ ಬರುವುದಿಲ್ಲ, ಅತಿಥಿಗಳಿಗೆ ನಾಳೆ ಬನ್ನಿ ಎನ್ನಬಹುದು. ಆದರೆ ಸಾವಿಗೆ ನಾಳೆ ಬಾ ಎನ್ನಲು ಸಾಧ್ಯವಿಲ್ಲ. ಆದರೆ ನಿರ್ವಾಣ ಸ್ವಾಮಿಗಳ ಆದರ್ಶ ಸದಾ ಶಾಶ್ವತ’ ಎಂದರು.ನಮ್ಮ ಕುಟುಂಬಕ್ಕೂ ಶ್ರೀ ಮಠಕ್ಕೂ ನೂರಾರು ವರ್ಷಗಳ ಒಡನಾಟ: `ಶ್ರೀಮಠ ಹಾಗೂ ನಮ್ಮ ಕುಟುಂಬಕ್ಕೆ ನೂರಾರು ವರ್ಷ ಗಳ ಭವ್ಯ ಅವಿನಾಭಾವ ಒಡನಾಡವಿದೆ,ನಮ್ಮ ಅಜ್ಜನ ಕಾಲದಿಂದಲೂ ಮನೆಯಲ್ಲಿ ಯಾವುದೇ ಕಾರ್ಯಗಳು ನಡೆದರೂ ಇವರಿಗಿಂತ ಮೊದಲು ಇದ್ದಂತಹ ಹಿರಿಯ ಸ್ವಾಮೀಜಿಯವರು ಬಂದು ಆಶೀರ್ವಾದ ಮಾಡುತ್ತಿದ್ದರು. ಯಾವುದೇ ಶುಭಕಾರ್ಯಗಳಿದ್ದರೂ ನಮಗೆ ಅವರ ಅಭಯ ಹಸ್ತ ಇದ್ದೇ ಇರುತ್ತಿತ್ತು,ಪ್ರತಿಯೊಂದು ಸಂದರ್ಭ ದಲ್ಲಿಯೂ ಅವರು ನಮಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರು,ಅವರ ಚಿಂತನೆಗಳು ನಮಗೆ ದಾರಿದೀಪ ವಾಗಿದ್ದವು’ ಎಂದು ತಿಳಿಸಿದರು. ನಮ್ಮ ಜಿಲ್ಲೆಗೆ ಆಧ್ಯಾತ್ಮಿಕವಾದ ದೀಪ. ಅನ್ನ, ಅಕ್ಷರ, ಆಶ್ರಯವನ್ನು ಸರ್ಕಾರ ನೀಡುವುದಕ್ಕಿಂತ ಮೊದಲು ಇವರು ಹಾಗೂ ಸಿದ್ದಗಂಗಾ ಮಠ ನೀಡಿದ್ದವು, 84 ವರ್ಷ ಬಾಳಿ ಬದುಕಿ ಮಾರ್ಗದರ್ಶನ ನೀಡಿದವರು, 700 ವರ್ಷಗಳಿಂದ ಜಾತಿ, ಧರ್ಮ ಮಾಡದೇ ಮೈಸೂರು ಮಹಾರಾಜರ ಕಾಲದಿಂದಲೂ ಈ ಮಠ ಅಚಲವಾಗಿ ನಿಂತಿದೆ. ಕರಿಯಪ್ಪನವರ ವಿದ್ಯಾಸಂಸ್ಥೆಗೂ ಮೊದಲು ಅಕ್ಷರ ದಾನ ಮಾಡಿದವರು, ದೊಡ್ಡ ಅಧಿಕಾರಿಗಳು, ಜನಪ್ರತಿನಿಧಿಗಳು,ಉದ್ಯಮಿಗಳು ಈ ಮಠದಲ್ಲಿ ಕಲಿತಿದ್ದು ಈ ಮಠದಲ್ಲಿ ಕಲಿತವರು ಪ್ರಪಂಚದಾದ್ಯಂತ ಜೀವನವನ್ನ ನಡೆಸುತ್ತಿರುವುದು ಶ್ರೀ ಮಠದ ಶೈಕ್ಷಣಿಕ ಕೊಡುಗೆ ಎದ್ದು ಕಾಣುತ್ತದೆ ಎಂದರು. ಈ ಮಠದ ಆಶೀರ್ವಾದಿಂದ ಬೆಳೆದವರು ಎಲ್ಲರೂ ಒಟ್ಟಾಗಿ ಇನ್ನೊಮ್ಮೆ ಸೇರಿ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲು ಚಿಂತನೆ ನಡೆಸ ಲಾಗುವುದು ಹೊರ ಜಿಲ್ಲೆಗಳು, ತಮಿಳುನಾಡಿನಿಂದಲೂ ಭಕ್ತಾಧಿಗಳು ಬಂದಿದ್ದು ಸುತ್ತೂರು ಶ್ರೀಗಳು ಈ ಮಠಕ್ಕೆ ಯಾವಾಗಲೂ ಆಧಾರಸ್ತಂಭವಾಗಿದ್ದರು,ಸಿದ್ದಗಂಗಾ ಮಠಕ್ಕೆ ಎಷ್ಟು ಹಿರಿತನ ಇದೆಯೋ ಅಷ್ಟೇ ಹಿರಿತನ ಹಳೇ ಮೈಸೂರು ಭಾಗದ ಈ ಮಠಕ್ಕೂ ಇದೆ,ಮರಣ ದೇಹಕ್ಕೆ ಹೊರತು ಜಂಗಮಕ್ಕಲ್ಲ, ಬಸವಣ್ಣವರ ತತ್ವ, ಚಿಂತನೆ ಆದರ್ಶಗಳನ್ನು ಮುನ್ನಡೆಸುತ್ತಿದ್ದರು,ಅಕ್ಷರ ದಾಸೋಹ, ಅನ್ನ ದಾಸೋಹ ನಡೆಸುತ್ತಿದ್ದರು. ಕಿರಿಯ ಶ್ರೀಗಳ ಮಾರ್ಗ ದರ್ಶನದಂತೆ ಈ ಮಠದ ಸೇವೆಯನ್ನು ನಾವು ಮುಂದುವರೆಸುತ್ತೇವೆ. ಕನಕಪುರ ತಾಲ್ಲೂಕಿನ ಜನರ ಕಣ ಕಣದಲ್ಲೂ ದೇಗುಲ ಮಠವಿದೆ ಎಂದರು. ನಿರ್ವಾಣ ಮಹಾಸ್ವಾಮಿಯವರಿಗೆ ಸರ್ಕಾರಿ ಗೌರವ ಸಲ್ಲಿಸುವ ಗೌರವ ಸಿಕ್ಕಿದ್ದು ನನ್ನ ಭಾಗ್ಯ. ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮ ಸುಖವಯ್ಯಾನಾವೆಲ್ಲರೂ ಹಾಗೂ ಕಿರಿಯ ಶ್ರೀಗಳು ಸೇರಿ ಮಠದ ತತ್ವ, ಪರಂಪರೆಯನ್ನು ಉಳಿಸಿ ಕೊಂಡು ಹೋಗುವುದಾಗಿ ತಿಳಿಸಿದ ಅವರು ಇದು ನಮ್ಮ ಮಠ’ ಎಂಬುದು ಹೆಗ್ಗಳಿಕೆ ಎಂದರು. ಈ ವೇಳೆ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಎಂಎಲ್ಸಿ ಎಸ್. ರವಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸರ್ಕಾರಿ ಗೌರವಗಳೊಂದಿಗೆ ಸ್ವಾಮೀಜಿಗಳಿಗೆ ಅಶ್ರುತರ್ಪಣ



