ಮಧುಗಿರಿ: ಮಾದಾರ ಮಹಾಸಭಾ ಅಧ್ಯಕ್ಷರಾಗಿ ಜನಾಂಗದ ಎಲ್ಲಾ ಮುಖಂಡರು ಸೇರಿ ಒಮ್ಮತದಿಂದ ವಕೀಲ ಬಾಣದರಂಗಯ್ಯನವರನ್ನು ಇಂದು ಆಯ್ಕೆ ಮಾಡಿಕೊಳ್ಳಲಾಗಿದ್ದು ಈ ಕಾರ್ಯಕ್ಕೆ ಸಹಕರಿಸಿದ ಸಮುದಾಯದ ಎಲ್ಲರಿಗೂ ಅಭಿನಂದನೆಗಳು ಎಂದು ದಲಿತ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಡಿ.ಟಿ.ಸಂಜೀವಮೂರ್ತಿ ತಿಳಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಧುಗಿರಿ ಮಾದಾರ ಮಹಸಭಾ ಹಾಗೂ ಸಮುದಾಯದ ವಿವಿಧ ಸಂಘಟನೆಗಳು,ಹಿರಿಯ ರಾಜಕಾರಣಿಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಜನಾಂಗದ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ತಾಲ್ಲೂಕಿನ ಮಾದಾರ ಮಹಸಭಾ ವಿಚಾರದಲ್ಲಿ ಹಲವು ಗೊಂದಲಗಳು ಸೃಷ್ಟಿ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಜನಾಂಗದ ಪ್ರಜ್ಞಾವಂತರು ಇದರ ಬಗ್ಗೆ ಸರಿಮಾಡಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಕರೆದುಕೊಂಡು ಹೋಗಬೇಕೆಂಬ ನಿರ್ಣಯವನ್ನು ತೆಗೆದುಕೊಂಡು ಮಧುಗಿರಿ ಮಾದಾರ ಮಹಾಸಭಾಗೆ ಅಧ್ಯಕ್ಷರಾಗಿ ವಕೀಲ ಬಾಣದರಂಗಯ್ಯನವರನ್ನು ಒಕ್ಕೊರಲಿನಿಂದ ಆಯ್ಕೆ ಮಾಡಲಾಗಿದ್ದು ನಮ್ಮ ಜನಾಂಗದ ಅಭಿವೃದ್ಧಿಗೆ ಇದು ಪ್ರೇರಕವಾದ ತೀರ್ಮಾನ, ಇನ್ನು ಮುಂದೆ ಬಾಣದರಂಗಯ್ಯನವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನರಸಿಂಹಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ನಮ್ಮ ಸಮುದಾಯವು ಹೆಚ್ಚಿದ್ದು ಕೆಲವು ಅಧಿಕಾರಗಳು ಉಳ್ಳವರ ಪಾಲಿಗೆ ಹೋಗುತ್ತಿರುವುದು ದುರದೃಷ್ಟಕರ, ಸಮುದಾಯದ ಹಿತ ಬಯಸುವ ಮುಖಂಡರನ್ನು ದಾರಿ ತಪ್ಪಿಸಿ ಯಾವುದೇ ಸೇವೆ ಮಾಡದ ಕೆಲವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುತ್ತಿರುವುದು ಸಮುದಾಯಕ್ಕೆ ಒಳ್ಳೆಯದಲ್ಲ ಎಂದರು. ಮಾಜಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಾಪುರ ರಾಮಣ್ಣ ಮಾತನಾಡಿ, ಇಲ್ಲಿ ಸೇರಿರುವ ಅನೇಕ ಹಿರಿಯ ಮುಖಂಡರ ಗಮನಕ್ಕೆ ಬಾರದೇ ಕೆಲವರಿಗೆ ಅಧಿಕಾರ ನೀಡುವ ವಿಧಾನ ಸರಿಯಲ್ಲ ಮೂರ್ನಾಲ್ಕು ದಶಕಗಳಿಂದ ರಾಜಕಾರಣ ಮಾಡುತ್ತ ಜೊತೆಗೆ ಸಮುದಾಯದ ಸೇವೆಗಳನ್ನು ಮಾಡುತ್ತ ಬರುತ್ತಿರುವ ನಮ್ಮಂತಹ ಹಿರಿಯರನ್ನು ಕಡೆಗಣಿಸಿ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲೂ ಒಂದು ಕಡೆ ಜನಾಂಗವನ್ನು ವ್ಯವಸ್ಥಿತವಾಗಿ ಹಿನ್ನೆಡೆಗೊಳಿಸಿದಂತಾಗುತ್ತಿದೆ ಮುಂಚೆಯೆಲ್ಲಾ ನಮ್ಮನ್ನು ಕರೆದು ಎಲ್ಲರೂ ಒಂದು ಕಡೆ ಸೇರಿ ಜನಾಂಗದ ಪರವಾಗಿ ತೀರ್ಮಾನಗಳು ತೆಗೆದುಕೊಳ್ಳುವ ವಾತಾವರಣವಿತ್ತು ಈಗ ಇದೆಲ್ಲಾ ಮಾಯವಾಗಿ ಕೆಲವೇ ಕೆಲವರು ಸೇರಿಕೊಂಡು ತೀರ್ಮಾನಿಸುವುದು ಸರಿಯಾದ ವ್ಯವಸ್ಥೆಯಲ್ಲ ಇದನ್ನೆಲ್ಲಾ ನೋಡಿದ ನಂತರವೇ ನಾವೆಲ್ಲರೂ ಸೇರಿ ಬಾಣದರಂಗಯ್ಯನವರನ್ನು ಮಾದಾರ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಹೋಗಬೇಕೆಂದು ಈ ಕಾರ್ಯಗಾರದ ಉದ್ದೇಶವಾಗಿದೆ ಎಂದರು.ಪ್ರಗತಿಪರ ಚಿಂತಕ ಡಾ. ಕಾಳೇನಹಳ್ಳಿ ನರಸಿಂಹಯ್ಯ ಮಾತನಾಡಿ ನಮ್ಮ ಜನಾಂಗದ ರಾಜ್ಯ ಮುಖಂಡರು ಹಾಗೂ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿ ಬರುತ್ತಿರುವ ಹಿರಿಯರಾದ ಆಹಾರ ಮತ್ತು ನಾಗರೀಕ ಸಚಿವರಾದ ಕೆ.ಎಚ್. ಮುನಿಯಪ್ಪಾಜೀಯವರು ಇಡೀ ರಾಜ್ಯದಲ್ಲಿ ಜನಾಂಗದ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಾದಾರ ಮಹಾಸಭಾ ಸಂಘಟನೆ ಮಾಡಿದ್ದು ನಮ್ಮ ತಾಲ್ಲೂಕಿನಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳನ್ನು ಅವರ ಗಮನಕ್ಕೆ ತರಲಾಗಿದೆ ಜನಾಂಗದ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುವವರಿಗೆ ಮಧುಗಿರಿಯಲ್ಲಿ ಜವಾಬ್ದಾರಿ ನೀಡಲಾಗುವುದು ಇಂದಿನ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ಬಾಣದರಂಗಯ್ಯನವರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದರು. ಮಾದಾರ ಮಹಸಭಾ ನೂತನ ಅಧ್ಯಕ್ಷ ಬಾಣದ ರಂಗಯ್ಯ ಮಾತನಾಡಿದರು.
ಸಭೆಯಲ್ಲಿ ಮಾಜಿ ತಾಪಂ ಸದಸ್ಯ ಸಿದ್ದಗಂಗಪ್ಪ, ಹಿರಿಯ ಮುಖಂಡರಾದ ಕೆ.ಎಚ್.ಶಿವಕುಮಾರ್.ಬೆಲ್ಲದ ಮಡು ಭರತ್ ಕುಮಾರ್ ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖಂಡರಾದ, ಸಮುದಾಯ ಸಣ್ಣರಾಮಯ್ಯ,ಕೃಷಿ ಇಲಾಖೆ ಹನುಮಂತರಾಯಪ್ಪ, ಗುತ್ತಿಗೆದಾರ ಹನುಮಂತರಾಯಪ್ಪ,ಪೆಟ್ರೋಲ್ ಬಂಕ್ ರಮೇಶ್, ಎಸ್.ಸಿ/ಎಸ್.ಟಿ.ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಚಿಕ್ಕರಂಗಪ್ಪ, ಬಸವನಹಳ್ಳಿ ನಾಗರಾಜು, ಮಾದೇನಹಳ್ಳಿ ರಾಜಣ್ಣ,ಮಾಜಿ ಗ್ರಾ.ಪಂ.ಸದಸ್ಯರುಗಳಾದ ಕಾಕಪ್ಪ.ದೊಡ್ಡರಿ ಲಿಂಗರಾಜು, ಕೊಡಗದಾಲ ಮೂರ್ತಿ, ಜಯರಾಂ, ನರಸಿಂಹಮೂರ್ತಿ (ಆರ್.ಟಿ.ಓ) ಸಮತ ಸೈನಿಕ ದಳದ ಅಂಜಿನಪ್ಪ,ತಿಪ್ಪಾಪುರ ಮೈಲಾರಪ್ಪ, ಸಿದ್ದಾಪುರ ರಂಗನಾಥ್.-ಎಸ್.ಸAಜೀವಯ್ಯ, ಐಡಿಹಳ್ಳಿ ಬಸ್ತಪ್ಪ, ಎಂ.ಸಿ.ರಾಮಣ್ಣ, ಎಂ.ವೈ.ಶಿವಕುಮಾರ್, ರಾಜಶೇಖರ್, ಭೀಮ್ ಅರ್ಮಿ ನಟರಾಜ್ ಮೌರ್ಯ, ಸಾಹಿತಿ ಹನುರಾಜ್, ರಂಟವಳಲು ಕೃಷ್ಣಪ್ಪ, ಡಿಜೆಎಸ್ ಕೋಟೆಕಲ್ಲಪ್ಪ, ಎಂ.ಎನ್. ರಾಜಣ್ಣ, ವಿಜಯ್ ಕುಮಾರ್, ಶ್ರಾವಂಡನಹಳ್ಳಿ ಸಿದ್ದಲಿಂಗಪ್ಪ,ಸುನಿಲ್, ಭಾಗ್ಯಮ್ಮ, ಗೋವಿಂದರಾಜು, ನರಸಪ್ಪ,ಕೊಡಿಗೇನಹಳ್ಳಿ ಕೃಷ್ಣಪ್ಪ, ಹಾಗೂ ಸಮುದಾಯದ ಸಂಘಟನೆಗಳ ಪದಾಧಿಕಾರಿಗಳು ಹಿರಿಯ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ಮಾದಾರ ಮಹಾಸಭಾ ಅಧ್ಯಕ್ಷರಾಗಿ ವಕೀಲ ಬಾಣದ ರಂಗಯ್ಯ ಆಯ್ಕೆ



