ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ‘ಬೆಂಗಳೂರು ಇನ್’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಚಿತ್ರ ಈ ವಾರ ತೆರೆ ಕಾಣುತ್ತಿದೆ. ಅಹಿಂಸಾ ಚೇತನ್ ಟ್ರೈಲರ್ ಬಿಡುಗಡೆ ಮಾಡಿದರು.
ಫುಡ್ ಡೆಲಿವರಿ ಏಜೆಂಟ್ ಸುತ್ತ ಕಥೆ ಹೆಣೆಯುವ ಈ ಚಿತ್ರ, ಆಧುನಿಕ ನಗರದ ಅಂಧಕಾರವನ್ನು ಬಯಲಿಗೆಳೆಯುವ ಪ್ರಯತ್ನದಲ್ಲಿದೆ. ಕಾರ್ತಿಕ್ ಕೆ. ಮೂರ್ತಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಧರ್ಮ ಕೀರ್ತಿರಾಜ್ ಈ ಚಿತ್ರದ ನಾಯಕನಾಗಿದ್ದರೆ, ರಿಷಾ ಗೌಡ ಮತ್ತು ಅನುಷಾ ರೈ ನಾಯಕಿಯರಾಗಿದ್ದಾರೆ. ಹಿರಿಯ ನಟ ಶಶಿಕುಮಾರ್ ಚಿತ್ರದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷಾ ರೈ ಈ ಚಿತ್ರದಲ್ಲಿ ಪತ್ರಿಕಾ ವರದಿಗಾರ್ತಿಯಾಗಿ ಅಭಿನಯಿಸಿದ್ದಾರೆ. ಚಿತ್ರ ಈ ವಾರ ತೆರೆಗೆ ಬರುತ್ತಿದೆ.
ನಿರ್ಮಾಪಕ ವೆಂಕಟೇಶಮೂರ್ತಿ ಮಾತನಾಡಿದರು.
ನಿಜ ಜೀವನದ ಘಟನೆ ಸ್ಕ್ರಿಪ್ಟ್ ಗೆ ಸ್ಫೂರ್ತಿ ನೀಡಿತು ಎಂದರು ನಿರ್ದೇಶಕ ಕಾರ್ತಿಕ. ಚಿತ್ರದ ನಾಯಕ ಧರ್ಮ ಕೀರ್ತಿರಾಜ್ ನಾಯಕಿ ರಿಷಾ ಗೌಡ, ಅನುಷಾ ರೈ ಮಾತನಾಡಿದರು.
ಬೆಂಗಳೂರು ಇನ್: ಟ್ರೈಲರ್ ಬಿಡುಗಡೆ



