ಕರ್ನಾಟಕದ ಟಿ20 ಲೀಗ್ ಮಹಾರಾಜ ಟ್ರೋಫಿ ಟೂರ್ನಿಯ 5ನೇ ಸೀಸನ್ಗೆ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಬಿಕರಿಯಾಗದೇ ಉಳಿದಿದ್ದಾರೆ. 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜು ಪಟ್ಟಿಯಲ್ಲಿದ್ದ ರಾಹುಲ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿರಲಿಲ್ಲ.ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಅನ್ಸೋಲ್ಡ್ ಸುದ್ದಿ ಮಹತ್ವ ಪಡೆದುಕೊಂಡಿತು. ಆದರೆ ಅವರ ಬಿಕರಿಯಾಗದೇ ಉಳಿಯಲು ಮುಖ್ಯ ಕಾರಣ ಮುಂಬರುವ ಸರಣಿಗಳು. ಅಂದರೆ ಮಹಾರಾಜ ಟ್ರೋಫಿ ಟಿ20 ಟೂರ್ನಿಗೆ ಕೆಎಲ್ಆರ್ ಅಲಭ್ಯರಾಗುವುದು ಖಚಿತ. ಹೀಗಾಗಿಯೇ ಯಾವುದೇ ಫ್ರಾಂಚೈಸಿ ಅವರ ಖರೀದಿಗೆ ಮುಂದಾಗಲಿಲ್ಲ.ಅಲಭ್ಯರಾಗುವುದು ಯಾಕೆ?ಟೆಸ್ಟ್ ಪಂದ್ಯ: ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಕೆ.ಎಲ್. ರಾಹುಲ್ ಭಾರತ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.ಏಕದಿನ ಸರಣಿ: ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಬೆನ್ನಲ್ಲೇ ಮೂರು ಮ್ಯಾಚ್ಗಳ ಏಕದಿನ ಸರಣಿ ಶುರುವಾಗಲಿದೆ.ಇಂಗ್ಲೆಂಡ್ ಸರಣಿ: ಅಘ್ಘಾನ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಸರಣಿಗಾಗಿ ತೆರಳಲಿದೆ. ಈ ಸರಣಿಯು ಜುಲೈ 1 ರಿಂದ ಆರಂಭವಾಗಲಿದೆ.ಅಂದರೆ ಕೆಎಲ್ ರಾಹುಲ್ ಜೂನ್-ಜುಲೈ ತಿಂಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವುದು ಖಚಿತ. ಇತ್ತ ಮಹಾರಾಜ ಟ್ರೋಫಿ ಟಿ20 ಟೂರ್ನಿ ನಡೆಯಲಿರುವುದು ಜೂನ್ 20 ರಿಂದ ಜುಲೈ 12 ರವರೆಗೆ. ಈ ಅವಧಿಯಲ್ಲಿ ಕೆಎಲ್ ರಾಹುಲ್ ಲಭ್ಯರಿರುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.ಹೀಗಾಗಿಯೇ ಟೂರ್ನಿಗೆ ಲಭ್ಯರಿರದ ಆಟಗಾರನಿಗೆ ಹಣ ವ್ಯಯಿಸಿ, ತಂಡದ ಒಂದು ಸ್ಲಾಟ್ ವ್ಯರ್ಥ ಮಾಡಿಕೊಳ್ಳಲು ಫ್ರಾಂಚೈಸಿಗಳು ಮುಂದಾಗಿಲ್ಲ. ಅಂದರೆ ಮಹಾರಾಜ ಟೂರ್ನಿಯ ಹರಾಜಿನ ದಿನಾಂಕಕ್ಕಿಂತ ಮುಂಚೆಯೇ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಾಹುಲ್ ಅವರು ಕರ್ನಾಟಕದ ಆಟಗಾರನಾಗಿರುವುದರಿಂದ ಆರಂಭದಲ್ಲಿ ತಮ್ಮ ರಾಜ್ಯದ ಟೂರ್ನಿಯಲ್ಲಿ ಆಡುವ ಆಸಕ್ತಿಯಿಂದ ಹೆಸರು ನೀಡಿದ್ದರು.
ಇದಾದ ಬಳಿಕವಷ್ಟೇ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯ ದಿನಾಂಕ ನಿಗದಿಯಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಕೆಎಲ್ ರಾಹುಲ್ ಅನ್ಸೋಲ್ಡ್ ಆಗಲು ಇದುವೇ ಅಸಲಿ ಕಾರಣ!



