ಚಳ್ಳಕೆರೆ: ವಿಶ್ವದಲ್ಲಿ ಅತ್ಯಂತ ದೊಡ್ಡ ರಾಜಕೀಯ ಪಾರ್ಟಿ ಭಾರತೀಯ ಜನತಾ ಪಾರ್ಟಿ, ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿರುವ, ಶಿಸ್ತಿನ ಪಾರ್ಟಿ ನಮ್ಮ ಬಿಜೆಪಿ ಪಾರ್ಟಿ ಎಂದು ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯ ಕ್ಷ ಬಿ.ಎಂ.ಸುರೇಶ್ ಅವರು ಚಳ್ಳಕೆರೆ ಬಿಜೆಪಿ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದ ಶ್ರೀರಾಮ ಮಂದಿರದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆ ಪಿ ಮಂಡಲ ಹಾಗೂ ವಿವಿಧ ಬಿಜೆಪಿ ಮೋರ್ಚಾಗಳ ಪಾದಧಿಕಾರಿಗಳ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಪ್ರಸ್ತು ತ ಮುಂದೆ ಇರುವ ಸವಾಲ್, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಮತ್ತು ಸ್ಥಳೀಯ ನಗರಸಭೆ ಚುನಾವಣೆಗಳು ಶೀಘ್ರವಾಗಿ ಬರುವುದ ರಿಂದ,ಇಂದಿನಿಂದಲೇ ಚುನಾವಣೆಗಳನ್ನು ಎದುರಿಸಲು ನಾವೆಲ್ಲ ಸಿದ್ದ ರಾಗಬೇಕು. ಪಕ್ಷದಲ್ಲಿ ಜವಾಬ್ದಾರಿ ಹೊತ್ತ ಪದಾಧಿಕಾರಿಗಳು ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು,ನಮ್ಮ ಗುರಿ ಒಂದೆ ಚುನಾವ ಣೆಗಳಲ್ಲಿ ಗೆಲುವು ಸಾಧಿಸುವುದು ಎಂದು ಹೇಳಿದರು.ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ:ಮಂಜುನಾಥ್ ಮಾತನಾಡಿ,ಪಕ್ಷದಲ್ಲಿ ಇರುವ ಪದಾಧಿಕಾರಿಗಳು ಮೊದಲು ತಮಗೆ ಪಕ್ಷ ಕೊಟ್ಟ ಜವಾಬ್ದಾರಿ ಸ್ಥಾನಗಳ ಮಹತ್ವ ಮೊದಲು ತಿಳಿಯಬೇಕು,ಹುದ್ದೆಗ ಳು ಕೇವಲ ಅಲಂಕಾರವಾಗ ಬಾರದು,ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಸಂಘ ಟನೆಯನ್ನು ಕಾರ್ಯಕರ್ತರ ಜೊತೆ ಸೇರಿ ಮಾಡಬೇಕು, ಚಳ್ಳಕೆರೆ ವಿಧಾ ನಸಭಾ ಕ್ಷೇತ್ರಲ್ಲಿ 13ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿ ಇಲ್ಲ,ಪಕ್ಷದ ಕಾರ್ಯಕರ್ತರು ನೊಂದಿದ್ದಾರೆ,ಇAದಿನಿAದ ಪಕ್ಷವನ್ನು ನಾವೆಲ್ಲ ಸಂಘ ಟನೆ ಮಾಡಿದರೆ, 2028ರಲ್ಲಿ ಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ಹೇಳಿದರು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ಸಾಧ ನೆ ಹಾಗೂ ಮಹತ್ವದ ಯೋಜನೆಗಳು,ಅವರ ಜನರ ಪರ ಆಡಳಿತದ ಕಾರ್ಯವೈಖರಿಯನ್ನು ಜನರಿಗೆ ತಲಿಪಿಸುವ ಕೆಲಸ ಪಕ್ಷದ ಪದಾಧಿಕಾರಿ ಗಳು ಮಾಡಬೇಕು ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಕೆಲಸಗ ಳು,ಆಡಳಿತ ವೈಫಲ್ಯಗಳನ್ನು ಹಾಗೂ ಈ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ನಿಗಮಗಳಲ್ಲಿ ನೆಡೆದ ಹಣದ ಲೂಟಿಯಂತಹ ಹಗರಣಗಳನ್ನು ಮನೆ ಮನೆ ಗೆ ಕಾರ್ಯಕರ್ತರು ಮುಖಂಡರು ಹೋಗಿ ತಲಿಪಿಸುವ ಕೆಲಸವಾಗ ಬೇ ಕು ಎಂದು ಹೇಳಿ, ಸಭೆಯಲ್ಲಿ ಪದಾಧಿಕಾರಿಗಳು ತಾವು ಪಕ್ಷದ ಸಂಘಟನೆ ಮಾಡುವಲ್ಲಿ ತಾವು ನಿರ್ವಹಿಸಬೇಕಾದ ಕಾರ್ಯವೈಖರಿಯ ಬಗ್ಗೆ ಸಲಹೆ ಸೂಚನೆ ನೀಡಿದರು.ಈ ಕಾರ್ಯಕ್ರಮದಲ್ಲಿ ಚಳ್ಳಕೆರೆ ಬಿಜೆಪಿ ಮಂಡಲದ ಅಧ್ಯಕ್ಷರಾದ ಬಿ. ಎಂ.ಸುರೇಶ್,ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಾಳೆಕಾಯಿ ರಾಮದಾಸ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಬಿಜೆಪಿ ಜಿಲ್ಲಾ ಕೋಶಧ್ಯಕ್ಷ ಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಅಲ್ಲಾ ಬಸವರಾಜ್ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರುಶುರಾಮ್, ಒಬಿಸಿ ಮೋರ್ಚಾ ಜಿಲ್ಲಾ ಧ್ಯಕ್ಷ ಬಾಲರಾಜ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಓಬಳೇಶ ಸುರೇಶ್, ಉಪಾದ್ಯಕ್ಷರಾದ ರುದ್ರಮುನಿ, ತಿಮ್ಮಪ್ಪ, ಕಾಂತರಾಜ್, ಖಜಾಂಚಿ ಶ್ರೀನಿವಾಸ್, ಬಿಜೆಪಿ ನಗರ ಅಧ್ಯಕ್ಷ ಡಿಶ್ ಕೃಷ್ಣಪ್ಪ, ಪ್ರಧಾನಕಾರ್ಯದ ರ್ಶಿ ಡಾ.ರಾಮರಾಜು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷಮಕ್ಕ, ಶಾಂತಮ್ಮ, ಬಿ.ಎಲ್.ಒ ದಯಾನಂದ, ಎಸ್ಟಿ ಮೋರ್ಚಾ ಅಧ್ಯಕ್ಷ ದೊರೆನಾಗರಾಜು, ಎಸ್ಸಿ ಮೋರ್ಚಾ ಅಧ್ಯಕ್ಷ ವೀರಭದ್ರಪ್ಪ, ಯುವ ಮೋರ್ಚಾ ಅಧ್ಯಕ್ಷ ಸಿದ್ದೇಶ್ ಪಾಟೀಲ್, ಉಪಾಧ್ಯಕ್ಷ ಪುಟ್ಟ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಮುಖಂಡರಾದ ಶಿವಪುತ್ರಪ್ಪ, ದಿನೇಶ್ ರೆಡ್ಡಿ, ಶಶಿಧರ್ ರೆಡ್ಡಿ, ರೈತ ಮೋರ್ಚಾ ಉಪಾಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಬಿಜೆಪಿ ಕೋಟ್ಯಂತರ ಕಾರ್ಯಕರ್ತರನ್ನು ಹೊಂದಿರುವ ವಿಶ್ವದ ದೊಡ್ಡ ಪಕ್ಷ ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯ ಕ್ಷ ಬಿ.ಎಂ.ಸುರೇಶ್ ಅಭಿಪ್ರಾಯ



