ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ ಮತ್ತು ಅಮಿತ್ ಬೆಹ್ಲ್ ಅಭಿನಯದ September 21, ಮೇ 12-23, 2026ರ 79ನೇ ಕ್ಯಾನ್ಸ್ ಚಲನಚಿತ್ರೋತ್ಸವದ ಮಾರ್ಶೆ ಡು ಫಿಲ್ಮ್ ವಿಭಾಗಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.ವಿಸಿಕಾ ಫಿಲ್ಮ್ಸ್, ಎಫ್ಎಂಡಿ ಪ್ರೊಡಕ್ಷನ್ಸ್, ಹಮಾರಾಮೂವಿ ಮತ್ತು ಫಿಲ್ಮ್ಸ್ ಮ್ಯಾಕ್ಸ್ ನಿರ್ಮಿಸಿ ರುವ ಚಿತ್ರವು ಮೇ 16, 2026ರಂದು ಸಂಜೆ 5:45ಕ್ಕೆ ಪಲೈಸ್ ಥಿಯೇಟರ್ನಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ.ಭಾರತೀಯ ಚೊಚ್ಚಲ ಚಿತ್ರಗಳಿಗೆ ಇದು ಮೊದಲು, September 21 ಥಿಯೇಟರ್ ಬಿಡುಗಡೆಗೂ ಮುನ್ನ 12 ನಗರಗಳಲ್ಲಿ ಪ್ರೀಮಿಯರ್ ಕಾಣಲಿದೆ: ಮುಂಬೈ ಪಶ್ಚಿಮ, ಮುಂಬೈ ಸೆಂಟ್ರಲ್, ಪುಣೆ, ಔರಂಗಾಬಾದ್, ಹೈದರಾಬಾದ್, ಬೆಂಗಳೂರು, ಮಂಗಳೂರು, ದೆಹಲಿ-ನೋಯ್ಡಾ, ಲಕ್ನೋ, ಕೋಲ್ಕತ್ತಾ, ದುಬೈ, ಮತ್ತು ನ್ಯೂಯಾರ್ಕ್.22 ವರ್ಷದ ಲೇಖಕಿ-ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಚಿತ್ರಕ್ಕೆ ಬೆಂಬಲವಿದೆ. `ಆಲ್ಝೆöಮರ್ ರೋಗಿಗಳಿಗಿಂತ ಅವರನ್ನು ನೋಡಿಕೊಳ್ಳುವವರ ಸಂಕಷ್ಟ ಬಹಳ ದೊಡ್ಡದು. ಪ್ರೇಕ್ಷಕರಿಗೆ ಆ ಮೌನ ಮತ್ತು ಭಾವನಾತ್ಮಕ ಭಾರವನ್ನು ಅನುಭವಿಸುವಂತೆ ಮಾಡಬೇಕೆಂದುಕೊಂಡೆ’ ಎನ್ನುತ್ತಾರೆ ಕರೆನ್.ರಾಜಶೇಖರ್ ಬರೆದು ವಿನಯ್ ಚಂದ್ರಾ ಸಂಗೀತ ನೀಡಿರುವ ಚಿತ್ರವು, ಬುದ್ಧಿಮಾಂದ್ಯತೆಯಿAದ ಬಳಲುವ ತಂದೆ ಮತ್ತು ಮಹತ್ವಾಕಾಂಕ್ಷೆ-ಕರ್ತವ್ಯದ ನಡುವೆ ಸಿಲುಕಿದ ಮಗನ ಕಥೆ ಹೇಳುತ್ತದೆ. ಹಮಾರಾಮೂವಿ, ಇಮ್ತಿಯಾಜ್ ಅಲಿ ಅವರ ಪತ್ನಿ ಪ್ರೀತಿ ಅಲಿ ಮತ್ತು ವಿನಯ್ ಮಿಶ್ರಾ ಪಾಲುದಾರಿಕೆಯ ಸಂಸ್ಥೆ, ಈ ಹಿಂದೆ Followers ಮತ್ತು tortise Under the earth ನಂತಹ ಫೆಸ್ಟಿವಲ್ ಚಿತ್ರಗಳನ್ನು ಬೆಂಬಲಿಸಿದೆ.September 21 ಕ್ಯಾನ್ಸ್ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಅತ್ಯಂತ ಕಿರಿಯ ಭಾರತೀಯ ನಿರ್ದೇಶನಗಳಲ್ಲಿ ಒಂದಾಗಿದೆ.



