ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವೆ ಮೈದಾನದಲ್ಲಿ ಜಗಳವಾ ಗಿರುವ ಘಟನೆ ಡಂಬುಲಾದಲ್ಲಿ ನಡೆದಿದೆ. ಟೈ ಆದ ಪಂದ್ಯವನ್ನು ಶ್ರೀಲಂಕಾ ತಂಡ ಸೂಪರ್ ಓವರ್ ನಲ್ಲಿ ಗೆದ್ದುಕೊಂಡ ಬಳಿಕ ಭಾರತದ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರನ ನಡುವೆ ಜಗಳವಾಗಿದ್ದು ಈ ಪಂದ್ಯ ಈ ರೀತಿ ಕೊನೆಗೊಳ್ಳಬಾರದಿತ್ತು ಎಂದು ಮಾತನಾಡಿಕೊಳ್ಳುವಂತಾಗಿದೆ.ಇನ್ನು ಪಂದ್ಯ ಮುಗಿದ ಕ್ಷಣದಿಂದಲೇ ಅಂಪೈರ್ಗಳೊಂದಿಗೆ ಸತತ ಜಗಳಕ್ಕಿಳಿದ ತಂಡದ ನಾಯಕ ತಿಲಕ್ ವರ್ಮಾ ಅವರೇ ಈ ಜಗಳಕ್ಕೆ ಕೆಟ್ಟ ಮುನ್ನುಡಿ ಬರೆದಿದ್ದರು. ಇದು ಸಹ ಬಹಳಷ್ಟು ಬೇಸರಕ್ಕೆ ಕಾರಣವಾಯಿತು. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಆಟಗಾರರು ತಾಳ್ಮೆ ಕಳೆದುಕೊಂಡರೆ ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸಿತು.ವೈಭವ್ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಶ್ರೀಲಂಕಾದ ಆಟಗಾರರೊಬ್ಬರು ಅನಗತ್ಯವಾಗಿ ಅವರನ್ನು ಮತ್ತೆ ನಿಂದಿಸಿದರು. ಅದು ಮಿತಿ ಮೀರಿತು. ವೈಭವ್ ಅದಕ್ಕೆ ಪ್ರತಿಕ್ರಿಯಿಸುವ ಮೂಲಕ ಸರಿಯಾದ ಕೆಲಸವನ್ನು ಮಾಡಿದರು.ರಂಗಿರಿ ಡಂಬುಲಾದ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜೂನ್ 15ರ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 48.2 ಓವರ್ ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು ಅಷ್ಟೇ ರನ್ ಗಳನ್ನು ಪೇರಿಸಲು ಶಕ್ತವಾಯಿತು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ಆಡಿಸಲಾಯಿತು. ಈವೇಳೆ ಲಂಕಾ ತಂಡ 1 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್ ಪೇರಿಸಿತು. ಭಾರತ ಕೇವಲ 9 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ಹೀಗಾಗಿ ಶ್ರೀಲಂಕಾ ವಿಜಯಿ ಎಂದು ಘೋಷಿಸಲಾಯಿತು.ಈ ಸೋಲಿನಿಂದಾಗಿ ಇಂಡಿಯಾ ‘ಎ’ ತಂಡವು ಫೈನಲ್ ತಲುಪುವ ಅವಕಾಶವನ್ನು ಕೈತಪ್ಪಿಸಿಕೊಳ್ಳುವ ಅಪಾಯದಲ್ಲಿದೆ. ಪಂದ್ಯಾವಳಿಯಲ್ಲಿ ತಂಡವು ಈಗ ಸತತ ಎರಡು ಪಂದ್ಯಗಳನ್ನು ಸೋತಿದ್ದು, ಜೂನ್ 17 ರಂದು ಅಫ್ಘಾನಿಸ್ತಾನ ‘ಎ’ ವಿರುದ್ಧ ನಡೆಯಲಿರುವ ಮುಂದಿನ ಪಂದ್ಯವು ಅತ್ಯಂತ ನಿರ್ಣಾಯಕವಾಗಿದೆ.ಪಂದ್ಯದ ಬಳಿಕ ಏನಾಯ್ತು?ಸೂಪರ್ ಓವರ್ ಮುಕ್ತಾಯದ ಬೆನ್ನಲ್ಲೇ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ತೀವ್ರ ಕೋಪಗೊಂಡು ಶ್ರೀಲಂಕಾದ ಆಟಗಾರನೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ತಾಳ್ಮೆ ಕಳೆದುಕೊಂಡ ವೈಭವ್ ಸೂರ್ಯವಂಶಿ ಎದುರಾಳಿ ಆಟಗಾರನನ್ನು ತಳ್ಳುತ್ತಿರುವುದು ಮತ್ತು ಇಬ್ಬರ ನಡುವೆ ಕಟು ಮಾತುಗಳ ವಿನಿಮಯ ನಡೆದಿರುವುದು ಗೋಚರವಾಗಿದೆ.



