ಬೆಂಗಳೂರು: ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಪೊಲೀಸ್ ಠಾಣೆಗೆ ಬರುವ ಸಮಯದಲ್ಲಿ ಸರಿಯಾಗಿ ಸ್ಪಂದಿಸುವದಿರುವ ಕಾರಣ ಇಲಾಖೆಗೆ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದರವರು ಇಂದು ಬೆಳಿಗ್ಗೆ ನಡೆದ ತಮ್ಮ ಪೆರೇಡ್ನಲ್ಲಿ ಅಭಿಪ್ರಾಯ ಪಟ್ಟರು.
ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ತಲೆಮರೆಸಿಕೊಂಡಿರುವ ರೌಡಿಗಳನ್ನು ಪತ್ತೆ ಹಚ್ಚಬೇಕೆಂದು, ಆದೇಶಿಸಿ ಅಕ್ರಮ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಜುಲೈನಿಂದ ಹೊಸ ಐಪಿಸಿ ಮತ್ತು ಸಿಆರ್ಪಿಸಿ ಕಾನೂನು ಜಾರಿಯಾಗಲಿದ್ದು ಅದರ ಬಗ್ಗೆ ಕುಲಂಕುಶವಾಗಿ ಪರಿಜ್ಞಾನವನ್ನು ಪಡೆಯಬೇಕಿದ್ದು ಸಾಧ್ಯವಾದರೆ ಕಾನೂನು ಮಂಡಳಿಯ ನೆರವನ್ನು ಪಡೆಯಬೇಕೆಂದು ಬೆಂಗಳೂರು ನಗರದ ಎಲ್ಲಾ ಎಸಿಪಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.ಸುಮಾರು 142 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರಿಗೆ ಪ್ರಶಂಸನಾ ಪತ್ರ ಮತ್ತು ಬಹುಮಾನವನ್ನು ಇದೇ ಸಮಯದಲ್ಲಿ ವಿತರಿಸಿದರು.
18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಯಲ್ಲಿ ಯಾವುದೇ ಅಹಿತ ಕರೆ ಘಟನೆ ನಡೆಯದಂತೆ ಬಹಳ ಅಚ್ಚುಕಟ್ಟಾಗಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಪೊಲೀಸರು ಸಾರ್ವಜನಿಕರಿಗೆ ಮೆಚ್ಚುಗೆ ಪ್ರಶಂಸನಿಯರಾಗಿದ್ದಾರೆಂದು ಶ್ಲಾಘಿಸಿದರು.ಆಡುಗೋಡಿಯ ಸಿ ಏ ಆರ್ ಪೆರಿಯಾರ್ ಗ್ರೌಂಡ್ ನಲ್ಲಿ ಇಂದು ಬೆಳೆಗೆ ನಡೆದ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಮತ್ತು ಡಿಸಿಪಿ ಹಾಗು ಎಲ್ಲ ಹಿರಿಯ ಅಧಿಕಾರಿಗಳು ಹಾಜರಿದ್ದರು.