ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 4.05 ನಿಮಿಷಕ್ಕೆ ರಾಜಭವನ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ನೂತನ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಪ್ರಮಾಣ ವಚನ ಬೋಧಲಿಸಿದ್ದಾರೆ. ಪ್ರಮಾಣ ವಚನಕ್ಕೆ ರಾಜಭವನದಲ್ಲಿ ಈಗಾಲೇ ಸಕಲ ಸಿದ್ಧತೆಗಳು ನಡೆದಿವೆ. ಪ್ರಮಾಣ ವಚನದ ದಿಕ್ಕನ್ನು ಪೂರ್ವ ದಿಕ್ಕಿಗೆ ಬದಲಾಯಿಸಲಾಗಿದೆ. ಸುಮಾರು 10ರಿಂದ 12 ಮಂದಿಗೆ ಹಿರಿಯ ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಲೋಕಭವನದಲ್ಲಿ ಕಳೆದ ಎರಡು ಮೂರು ದಿನಗಳಿಂದ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳು ನಡೆದು ಭರ್ಜರಿ ವ್ಯವಸ್ಥೆ ಮಾಡಲಾಗಿದೆ. ಲೋಕಭವನದ ಹೊರಗಿನ ರಸ್ತೆ, ವಿಧಾನಸೌಧದ ಮುಂದಿನ ರಸ್ತೆ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರ ಕಟೌಟ್ಗಳು, ಬ್ಯಾನರ್ಗಳು ಭಿತ್ತಿಚಿತ್ರಗಳು, ಕಾಂಗ್ರೆಸ್ ಪಕ್ಷದ ಭಾವುಟಗಳು ರಾರಾಜಿಸುತ್ತಿವೆ. ಸಮಾರಂಭದ ಯಶಸ್ವಿಗಾಗಿ ಯಾವುದೇ ಲೋಪವಾಗದಂತೆ ಸುಮಾರು 3500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.
ಇದೇ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕಾರಕ್ಕೆ ಕ್ರಿಶ್ಚಿಯನ್ ಸೇರಿದಂತೆ ಮುಸ್ಲಿಂ ಹಾಗೂ ಹಿಂದೂ ಧಾರ್ಮಿಕ ಮಠಾಧೀಶರರಿಗೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ಪೌರಕಾರ್ಮಿಕರು
ಸೇರಿದಂತೆ ಚಲನಚಿತ್ರ ಮತ್ತಿತರ ಉದ್ಯಮಿಗಳ ಗಣ್ಯರು ಸೇರಿದಂತೆ ಅನೇಕರಿಗೆ ಆಹ್ವಾನ ನೀಡಿದ್ದು, ಅವರ ಸ್ಥಾನಮಾನಕ್ಕೆ ಸಂಬಂಧಪಟ್ಟಂತೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಡಿಕೆ ಪಟ್ಟಾಭಿಷೇಕ ಹಲವು ಮಂದಿ ಸಚಿವರೊಂದಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪದಗ್ರಹಣ



