ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸುವ ಊಹಾಪೋಹಗಳನ್ನು ತಿರಸ್ಕರಿಸಿರುವ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮ, ನಾನು ಆಡುವವರೆಗೂ ಇಂಥ ಚರ್ಚೆಗಳು ನಿಲ್ಲುವುದಿಲ್ಲ ಎಂಬುದು ತಿಳಿದಿದೆ. ಈ ವಿಷಯಗಳಿಗೆ ಸ್ಪಷ್ಟನೆ ನೀಡಿ ಹೋರಾಟ ನಡೆಸುವ ಬದಲು ರನ್ ಗಳಿಸುವತ್ತ ಗಮನಹರಿಸುತ್ತೇನೆ ಎಂದಿದ್ದಾರೆ.ಭಾನುವಾರ ಇಂಗ್ಲೆಂಡ್ ವಿರುದ್ಧ ಲಾರ್ಡ್್ಸನಲ್ಲಿ ಶತಕ ಸಿಡಿಸುವ ಮೂಲಕ ಮುಂದಿನ ವರ್ಷದ ಏಕದಿನ ವಿಶ್ವಕಪ್ ಆಡುವ ಕನಸಿಗೆ ಬಲ ತುಂಬಿಸಿಕೊAಡಿರುವ 39 ವರ್ಷದ ರೋಹಿತ್ ಶರ್ಮ, ಬಿಸಿಸಿಐ ಹಂಚಿಕೊAಡಿರುವ ವಿಡಿಯೋದಲ್ಲಿ ಮಾತನಾಡಿದ್ದು, ನಾನು ಚೊಚ್ಚಲ ಪಂದ್ಯವನ್ನು ಆಡಿದಾಗಿನಿಂದ ಸಾಮರ್ಥ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ನಾನು ಇಲ್ಲಿಯೇ ಇರುತ್ತೇನೆ ಜತೆಗೆ ಮೈದಾನದಲ್ಲಿ ಏನು ಮಾಡುತ್ತೇನೆ, ತಂಡದ ಯಶಸ್ಸಿಗೆ ಏನು ಕೊಡುಗೆ ನೀಡುತ್ತೇನೆ ಎಂಬುದು ನಿಜವಾಗಿಯೂ ಮುಖ್ಯವಾಗಿರಲಿದೆ. ನನ್ನ ಸಂಪೂರ್ಣ ಗಮನ ಅಲ್ಲೇ ಇರಲಿದ್ದು, ಇಂಥ ವಿಷಯಗಳು ಹರಿದಾಡದಿದ್ದರೆ ಆಡಲು ಮಜಾ ಇರುವುದಿಲ್ಲ ಎಂದಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರಿಯುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಇಂಗ್ಲೆAಡ್ನಲ್ಲಿ ಆಡುವುದನ್ನು ಪ್ರೀತಿಸುತ್ತೇನೆ. ಅಲ್ಲಿನ ವಾತಾವರಣ, ಮೈದಾನ, ಪಿಚ್ನಲ್ಲಿ ಯಾವುದೇ ಸ್ವರೂಪದ ಕ್ರಿಕೆಟ್ ಆಡಲು ಇಳಿದಾಗ ವಿಭಿನ್ನ ರೀತಿಯ ಸವಾಲು ಎದುರಾಗಲಿದೆ. ಕ್ರಿಕೆಟಿಗರಾಗಿ ನಾವು ಬಯಸುವುದು ಅದನ್ನೇ. ಆದ್ದರಿಂದ ಲಾರ್ಡ್್ಸನಲ್ಲಿ ಸಿಡಿಸಿದ ಶತಕವನ್ನು ಎಂಜಾಯ್ ಮಾಡಿದೆ ಎಂದು ಭಾರತಕ್ಕೆ ಎರಡು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿರುವ ರೋಹಿತ್ ಸಂತಸ ವ್ಯಕ್ತಪಡಿಸಿದರು. ಕೊಹ್ಲಿ ಜತೆಗಿನ ಜತೆಯಾಟ ಖುಷಿ ನೀಡಿದೆ ಎಂದಿರುವ ರೋಹಿತ್, ನಾವು (ರೋಹಿತ್-ಕೊಹ್ಲಿ) ಇಡೀ ವೃತ್ತಿಜೀವನದಲ್ಲಿ ಒಟ್ಟಿಗೆ ಆಡಿದ್ದೇವೆ. ಆದ್ದರಿಂದ ಕೊಹ್ಲಿಯೊಂದಿಗಿನ ಜತೆಯಾಟ ಖುಷಿ ನೀಡಿತು. ಇಬ್ಬರು ಪರಸ್ಪರ ತುಂಬ ಅರ್ಥಮಾಡಿಕೊಂಡಿದ್ದೇವೆ. ಒಟ್ಟಿಗೆ ಬ್ಯಾಟಿಂಗ್ ಮಾಡುವುದು ಖುಷಿ ನೀಡುತ್ತದೆ. ಆದರೆ ಸರಣಿ ಸೋಲು ನಿರಾಸೆ ಮೂಡಿಸಿದೆ ಎಂಬುದನ್ನು ಒಪ್ಪಿಕೊಂಡರು.



