ಚಂಡೀಗಢ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳ ರೈತರು ದೆಹಲಿಯ ಕಿಸಾನ್ ಘಾಟ್ನತ್ತ ಬೃಹತ್ ಮೆರವಣಿಗೆ ಆರಂಭಿಸಿದ್ದಾರೆ. ರೈತರ ಸಂಚಾರವನ್ನು ತಡೆಯಲು ಹರಿಯಾಣ ಮತ್ತು ದೆಹಲಿ ಪೊಲೀಸರು ಗಡಿ ಪ್ರದೇಶಗಳಲ್ಲಿ ಭಾರಿ ಬ್ಯಾರಿಕೇಡ್ಗಳನ್ನು ಹಾಕಿ ಕಟ್ಟೆಚ್ಚರ ವಹಿಸಿದ್ದಾರೆ.ರೈತರು ಬೆಳಗಿನ ಜಾವವೇ ದೆಹಲಿಯತ್ತ ಹೊರಟ ಹಿನ್ನೆಲೆಯಲ್ಲಿ, ಅಂಬಾಲಾದ ಶಂಭು ಗಡಿ ಹಾಗೂ ಸೋನಿಪತ್ನ ಸಿಂಘು ಗಡಿಗಳನ್ನು ಪೊಲೀಸರು ಸಂಪೂರ್ಣವಾಗಿ ಮುಚ್ಚಿದ್ದಾರೆ. ಶಂಭು ಗಡಿಯಲ್ಲಿ ರಾತ್ರೋರಾತ್ರಿ ದೊಡ್ಡ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರಿಂದ ದೆಹಲಿ-ಅಮೃತಸರ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.ಕುರುಕ್ಷೇತ್ರದ ಶಹಾಬಾದ್ ಮತ್ತು ಜ್ಯೋತಿಸರ್ ಚೆಕ್ಪೋಸ್ಟ್ಗಳಲ್ಲಿ ದೆಹಲಿಯತ್ತ ಸಾಗುತ್ತಿದ್ದ ರೈತರ ಬಸ್ಗಳನ್ನು ತಡೆದು, ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಲೈನ್ಗಳಿಗೆ ಕರೆದೊಯ್ದಿದ್ದಾರೆ.



