ಹಿರಿಯ ತಂತ್ರಜ್ಞ ಜಿ.ಕೆ.ಮುದ್ದುರಾಜ್ ಗ್ಯಾಪ್ ನಂತರ `ಎಜುಕೇಟಡ್ ಬುಲ್ಸ್’ ಸಿನಿಮಾಕ್ಕೆ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಎಂ.ಎಸ್.ಎಂಟರ್ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದ ಹಾಗೆ ಇವರು ನಿರ್ದೇಶನದ 41ನೇ ಸಿನಿಮಾ ಎಂಬುದು ವಿಶೇಷ.
ಸಿನಿಮಾವು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಅಂಶಗಳನ್ನು ಒಳಗೊಂಡಿದೆ. ಜಾಣರಾಗಿರಿ, ಜಾಗೃತರಾಗಿರಿ ಎಂಬ ವಿಷಯಗಳ ಮೇಲೆ ಸನ್ನಿವೇಶಗಳು ಸಾಗುತ್ತದೆ. ನಾವು ಎಷ್ಟೇ ಬುದ್ದಿವಂತರಾಗಿದ್ದರೂ, ಸ್ಪಲ್ಪ ಯಾಮಾರಿದರೆ. ನಮ್ಮ ಬದುಕು ಹಾಳಾಗುತ್ತದೆ. ಇದಕ್ಕೆ ಕಣ್ಣ ಮುಂದೆ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದಾರೆ. ವಿದ್ಯೆ ಮುಖ್ಯವಲ್ಲ. ಅದರ ಜತೆಗೆ ಬು ದ್ದಿಯೂ ಇರಬೇಕು. ಆಗ ಮಾತ್ರ ಜೀವನ ನೆಮ್ಮದಿಯಾಗಿರುತ್ತದೆ. ನೋಡುಗರಿಗೆ ಇದು ಹಾಸ್ಯ ವೆನಿಸಿದರೂ ದೃಶ್ಯಗಳು ಗಂಭೀರ ವಾಗಿರುತ್ತದೆ. ಇದನ್ನೆ ಚಿತ್ರದಲ್ಲಿ ಹೇಳಲಾಗಿದೆ. ನೀರಜ್, ಅಜಯ್ಕುಮಾರ್, ತೇಜಸ್ಕುಮಾರ್, ರಾಕೇಶ್, ಪೂರ್ವಿಕಾ, ಹಿರಿ ಯ ನಟಿ ಭವ್ಯ, ಪಾಪಾ ಪಾಂಡು ಚಿದಾನಂದ, ದೊಂಬರ ಕೃಷ್ಣ ಸುರೇಶ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಸೂರಜ್ ಜೋಯಿಸ್, ಛಾಯಾ ಗ್ರಹಣ ರತಿನ್ಗೌಡ, ಸಾಹಸ ಥ್ರಿಲ್ಲರ್ ಮಂಜು ಅವರದಾಗಿದೆ. ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಇದೇ ಶುಕ್ರವಾರದಂದು `ಎಜುಕೇಟಡ್ ಬುಲ್ಸ್’ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
ತೆರೆಗೆ ಬರಲು ಸಿದ್ದವಾದ ಎಜುಕೇಟಡ್ ಬುಲ್ಸ್



