ಆಸ್ಟಿನ್: ವಿಂಬರ್ಲಿ ಬಳಿ ಪಿಕಲ್ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಮರಗಳಿಗೆ ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದ್ದಾರೆ.
ಸೆಸ್ನಾ 421ಅ ವಿಮಾನವು ಅಮರಿಲ್ಲೊದಿಂದ ಹೊರಟು ನ್ಯೂ ಬ್ರೌನ್ಫೆಲ್ಸ್ ರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಆಸ್ಟಿನ್ನಿಂದ ನೈಋತ್ಯಕ್ಕೆ ಸುಮಾರು 40 ಮೈಲುಗಳಷ್ಟು ದೂರದಲ್ಲಿರುವ ವಿಂಬರ್ಲಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ವಿಮಾನವು ಅರಣ್ಯ ಪ್ರದೇಶದಲ್ಲಿ ನಾಶವಾಗಿರುವುದನ್ನು ದೃಶ್ಯದ ಚಿತ್ರಗಳು ವೈರಲ್ ಆಗಿವೆ.
ಪೈಲಟ್ ಮತ್ತು ವಿಮಾನದಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಹೆಸರನ್ನು ಬಹಿರಂಗಪಡಿಸಿಲ್ಲ.
ವಿಮಾನ ಪತನ: ಐವರು ದುರ್ಮರಣ



