ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ಮೂಡಿಬಂದಿರುವ `ಜೆರಾಕ್ಸ್’ ವೆಬ್ ಸರಣಿ 24ರಿಂದ zee5ನಲ್ಲಿ ಸ್ಟ್ರಿಮಿಂಗ್ ಆಗ್ತಿದೆ. ಪತ್ರಕರ್ತರ ಜೊತೆ ಮಾತನಾಡಿದ ನಿರ್ಮಾಪಕ ಡಾಲಿ ಧನಂಜಯ, ಜೆರಾಕ್ಸ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಈ ಸಿರೀಸ್ ನಲ್ಲಿ ಒಳ್ಳೊಳ್ಳೆ ಕಲಾವಿದರ ದಂಡು ಕೆಲಸ ಮಾಡಿದೆ. ಹೊಸ ಪ್ರತಿಭೆಗಳು ಅನುಭವಿ ಪ್ರತಿಭೆಗಳು ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ.
ಸಿರೀಸ್ ಮೊದಲು ನೋಡಿದಾಗ ಬಹಳ ಖುಷಿಯಾಯ್ತು. ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. ಬಹಳ ಖುಷಿಯಿಂದ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ. Zee5ನಿಂದ ಒಳ್ಳೊಳ್ಳೆ ಪ್ರತಿಭೆಗಳಿಗೆ ಫ್ಲಾಟ್ ಫಾರ್ಮ್ ಸಿಗ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ ಎಂದು ಹಾರೈಸಿದರು. Zee5 ಕನ್ನಡದ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ವೆಬ್ ಸರಣಿಯ ಮುಖ್ಯಸ್ಥ ಆರ್.ಜೆ.ಪ್ರದೀಪ್ ಮಾತನಾಡಿದರು.
ನಟ ನಾಗಭೂಷಣ್ ಮಾತನಾಡಿ, ಕನ್ನಡದಲ್ಲಿ ಸಿನಿಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಒಟಿಟಿಗಳು ಹಿಂದೇಟು ಹಾಕುತ್ತಿದ್ದಾರೆ. ಅವರು ಅದಕ್ಕೆ ಕೊಡುವ ಕಾರಣ ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು. ಆದರೆ ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀವರ್ಸ್ ಇದ್ದಾರೆ ಅನ್ನೋದನ್ನು zee5 ತೋರಿಸಿಕೊಟ್ಟಿದೆ. ಜೆರಾಕ್ಸ್ ವೆಬ್ ಸರಣಿಯಲ್ಲಿ ನನ್ನದು ಪ್ರಕಾಶ್ ಪಾತ್ರ. ಶ್ರೀನಿಧಿ ಅದ್ಭುತ ಟೆಕ್ನಿಷಿಯನ್. ಒಳ್ಳೆ ಕಥೆಗಾರ. ಸೋಲು ಗೆಲುವು ತಲೆಕೆಡಿಸಿಕೊಳ್ಳದೆ ಕಂಟಿನ್ಯೂ ಆಗಿ ಧನಂಜಯ್ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಅದ್ಭುತ ಪ್ರಾಡಕ್ಟ್ ಹೊರತರಲು ಸಹಕರಿಸಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು.
ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿರುವ `ಜೆರಾಕ್ಸ್’ ಸರಣಿಯನ್ನು ನಾಗಭೂಷಣ್, ಪಾಯಲ್ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣದ ಜೆರಾಕ್ಸ್ ವೆಬ್ ಸಿರೀಸ್.. 24ರಿಂದ



