ಗಣೇಶ ನಟಿಸಿದ್ದ ಮೊದಲ ಚಿತ್ರ “ಚೆಲ್ಲಾಟ” ಬಿಡುಗಡೆಯಾಗಿ ಏಪ್ರಿಲ್ 21ಕ್ಕೆ ಇಪ್ಪತ್ತು ವರ್ಷಗಳಾಗಿದೆ. ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಅದೇ ವರ್ಷ ಗಣೇಶ್ ಅಭಿನಯದ ಕನ್ನಡದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ “ಮುಂಗಾರು ಮಳೆ” ಸಹ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿತ್ತು. ಆನಂತರ “ಗಾಳಿಪಟ”, ” ಚೆಲುವಿನ ಚಿತ್ತಾರ”, “ಕೃಷ್ಣ” ದಿಂದ ಹಿಡಿದು ಇತ್ತೀಚೆಗೆ ತೆರೆಕಂಡ “ಕೃಷ್ಣಂ ಪ್ರಣಯ ಸಖಿ”ವರೆಗೂ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಣೇಶ್ ತಮ್ಮ ಅಮೋಘ ಅಭಿನಯದಿಂದ ರಂಜಿಸಿದ್ದಾರೆ. ಗಣೇಶ್ ನಾಯಕರಾಗಿ ಇಪ್ಪತ್ತು ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.



