ವಿನೂತನ ಶೀರ್ಷಿಕೆ `ಸರ್ವೇ ನಂಬರ್ 45′ ಚಿತ್ರವು ಪೋಸ್ಟ್ ಪ್ರೊಡಕ್ಸನ್ ಮುಕ್ತಾಯ ಹಂತದಲ್ಲಿದೆ. ವರನಂದಿ ಸಿನಿ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಆನಂದ್.ಎಸ್.ವಿ ಮತ್ತು ಹನುಮಂತರೆಡ್ಡಿ.ಎಸ್.ಆರ್. ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಶಿವಕುಮಾರ್.ಎಂ.ಶೆಟ್ಟಿಹಳ್ಳಿ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಜಾಗಕ್ಕೆ ಸರ್ವೇ ನಂಬರ್ ಎಂದು ಸರ್ಕಾರವು ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳು ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. `ನಾವುಗಳು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ರದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ’ಎಂಬ ತೂಕದ ಸಂದೇಶವನ್ನು ಹೇಳಲಾಗಿದೆ. ಮುಖ್ಯ ಪಾತ್ರದಲ್ಲಿ `ಕಾಮಿಡಿ ಕಿಲಾಡಿಗಳು’ ಹಾಗೂ ಬಿಗ್ ಬಾಸ್ ಸೀಸನ್-12 ವಿನ್ನರ್ ಗಿಲ್ಲಿನಟ, ಸಂತೋಷ್, ಮಹಾನಟಿ ಖ್ಯಾತಿಯ ಪ್ರಾವಲಿಕ ಮತ್ತು ಮೌನಹಾಸನ್. ಉಳಿದಂತೆ ಕುಮಾರ್ ಅರಸೇಗೌಡ, ಮಾಲತಿ, ಶಿವಣ್ಣ, ಮನು ಕಲ್ಲಹಳ್ಳಿ, ಜ್ಯೂ.ದ್ವಾರಕೀಶ್, ವೀರೇಶ್, ಮಂಜು, ರಾಘವೇಂದ್ರ ಕುಮಾರ್, ಹನುಮಂತಪ್ಪ ಮುಂತಾದವರು ನಟಿಸಿದ್ದಾರೆ. ಸಂಗೀತ ವಿಶಾಲ್ ಅಲಾಪ್, ಛಾಯಾಗ್ರಹಣ ದೀಪಕ್ ಕುಮಾರ್.ಜಿ.ಕೆ, ಸಂಕಲನ ರಾಮಾರ್ಜುನ್, ಸಂಭಾಷಣೆ ಚಕ್ರಿ ಕಿರಿಸಾವೆ, ನೃತ್ಯ ರಘು.ಆರ್.ಜೆ ಅವರದಾಗಿದೆ. ಹುಣಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ಗಿಲ್ಲಿ ನಟನ `ಸರ್ವೇ ನಂಬರ್ 45′ ಪೋಸ್ಟ್ ಪ್ರೊಡಕ್ಸನ್ ಮುಕ್ತಾಯ



