ಬೆಂಗಳೂರು: ಆನ್ಲೈನ್ ಜೂಜಾಟದಲ್ಲಿ ಸುಮಾರು 5 ಲಕ್ಷ ಹಣ ಕಳೆದುಕೊಂಡ ಪರಿಣಾಮ ವ್ಯಕ್ತಿಯೊಬ್ಬ ಸಂಪಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಯಲಹಂಕ ನ್ಯೂಟನ್ ಪೊಲೀಸ್ ಠಾಣಾ ವ್ಯಾಪ್ತಿಯ ಮದರ್ ಡೈರಿನಲ್ಲಿ ನಡೆದಿದೆ.
ಗುಲ್ಬರ್ಗ ಮೂಲದ ಲಕ್ಷ್ಮಿಕಾಂತ(22) ಎಂಬ ವ್ಯಕ್ತಿಯು ಗುತ್ತಿಗೆ ಆಧಾರದ ಮೇಲೆ ಮದರ್ ಡೈರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು, ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ತನ್ನ ಜೊತೆ ಕೆಲಸ ಮಾಡುವ ಶಂಕರ್ ಎಂಬ ಆತನಿಗೆ ಮೊಬೈಲ್ ಮೂಲಕ ನಾನು ಆತ್ಮಹತ್ಯೆ ಮಾಡಿ ಕೋಳುತಿದ್ದೇನೆ, ಕಾರಣ ನನಗೆ ಜಿಗುಪ್ಸೆಯಾಗಿದೆ ಎಂದು ಹೇಳಿ ಅಂದಾಜು ಸುಮಾರು ಎಂಟು ಲಕ್ಷ ಲೀಟರ್ನ ನೀರಿನ ಸಾಮಥ್ರ್ಯ ಉಳ್ಳ ಸಂಪ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಶಂಕರ್ ಸಂಪ್ನ ಬಳಿ ಬರುವುದರೊಳಗೆ ಸಂಪಿಗೆ ಬಿದ್ದಿರುವುದನು ನೋಡಿ ಅಲ್ಲಿನ ಅಧಿಕಾರಿಗೆ ತಿಳಿಸಿರುತ್ತಾರೆ ಶಂಕರ್.ಹಣ ಪಡೆದಿದ್ದ ಬ್ಯಾಂಕಿಂದ ಇತನಿಗೆ ಸುಮಾರು ಸಲ ನೋಟಿಸ್ ಹಾಗೂ ಫೋನ್ ಕರೆಗಳು ಬಂದಿದ್ದ ಹಿನ್ನೆಲೆಯಲ್ಲಿ ಭಯಭೀತನಾಗಿ ಈ ಘಟನೆ ಸಂಭವಿಸುತ್ತದೆ ಎಂದು ಅವರ ಚಿಕ್ಕಪ್ಪ ತಿಳಿಸಿರುತ್ತಾನೆ.ಶಂಕರ್ ಎಂಬಾತನು ಈ ಸಂಬಂಧ ಯಲಹಂಕ ನ್ಯೂಟನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುತ್ತಾನೆ.