ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹಿಜಾಬ್ ಧರಿಸುವ ಸಂಬAಧ ಕಿಡಿ ಹೊತ್ತಿಕೊಂಡಿದೆ. 2022ರಲ್ಲಿ ಅಂದಿನ ರಾಜ್ಯ ಸರ್ಕಾರ ಹಿಜಾಬ್ ಧರಿಸುವ ಸಂಬಂಧ ವಸ್ತ್ರ ಸಂಹಿತೆಯೊAದನ್ನು ಜಾರಿಗೆ ತರುವ ಮೂಲಕ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಇದೀಗ ಈಗಿನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ, ಇದನ್ನು ವಿರೋಧಿಸಿ ಇಂದು ಸಂಘಟನೆಗಳವರು ಹಾಗೂ ವಿಪಕ್ಷಗಳವರು ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ರಾಜ್ಯ ಸರ್ಕಾರ ಹಿಂಪಡೆದಿರುವ ಆದೇಶದಿಂದಾಗಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ, ಶಿವಗಾರ, ಜನಿವಾರ, ರುದ್ರಾಕ್ಷಿ, ಧರಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಪೇಟಾ ಧರಿಸುವುದಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದು ಅವರು, ಕೇಸರಿ ಪೇಟಾ, ಕೇಸರಿ ಶಾಲು ಧರಿಸಲು ಅವಕಾಶವಿಲ್ಲ ಎಂದಿದ್ದಾರೆ. ಈ ಹಿಂದೆ ಇದ್ದ ಪೇಟಾ ಧರಿಸುವ ಪದ್ಧತಿ ಜಾರಿಯಲ್ಲಿರುತ್ತದೆ. ಹೊಸ ಪೇಟಾಗಳಿಗೆ ಅವಕಾಶವಿಲ್ಲ ಎಂದರು.
ಸರ್ಕಾರದ ನಿಲುವನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಸಮರ್ಥಿಸಿ ಮಾತನಾಡಿದ್ದಾರೆ. ಶಿಕ್ಷಣದಲ್ಲಿ ಯಾರೂ ತಲೆ ಹಾಕಬೇಡಿ, ಅದೊಂದು ಪದ್ಧತಿ, ಅದೊಂದು ಧರ್ಮ ಎಂದಿದ್ದಾರೆ. ಶಿಕ್ಷಣದಲ್ಲಿ ಮೂಗು ತೂರಿಸುವುದು ಬೇಡ ಎಂದು ವಿಪಕ್ಷಗಳಿಗೆ ಕೋರಿರುವ ಅವರು, ಜನಿವಾರ ಕಟ್ ಮಾಡಿದಾಗ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಇವರೆಲ್ಲಾ ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರದ ನಿಲುವಿನ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹಿಂದುಸAಘಟನೆ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ. ಆದರೆ ಹಿಂದು ಸಂಘಟನೆಗಳು-ವಿಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಸುನೀಲ್ಕುಮಾರ್ ಮಾತನಾಡಿ, ಸರ್ಕಾರದ ಈ ನಿಲುವು ಸಂವಿಧಾನ ವಿರೋಧಿ ಹಾಗೂ ನ್ಯಾಯಾಂಗ ನಿಂದನೆ ರೀತಿಯಾದ್ದಾಗಿದೆ. ಹಿಜಾಬ್ ವಿವಾದ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಅಂತಿಮವಾಗಿ ತೀರ್ಪು ಹೊರ ಬಂದಿಲ್ಲ. ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವು ಸರಿಯಲ್ಲ ಎಂದಿರುವ ಅವರು, ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಮುಸ್ಲೀಮರು ಮುನಿಸಿಕೊಂಡ ಕಾರಣ ಈ ಕ್ರಮ ಜರುಗಿಸಿದ್ದಾರೆ ಎಂದು ದೂರಿದ್ದಾರೆ.
ಒಟ್ಟಾರೆ ಮತ್ತೆ ರಾಜ್ಯದಲ್ಲಿ ಹಿಜಾಬ್ನ ವಿವಾದ ಎದುರಾಗಿದೆ. ಆಡಳಿತ ವಿಪಕ್ಷಗಳ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಮತ್ತೆ ಹಿಜಾಬ್ ಕಿಡಿ 2022ರ ವಸ್ತ್ರ ಸಂಹಿತೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ ವಿಪಕ್ಷಗಳು, ಹಿಂದೂಸಂಘಟನೆಗಳ ಆಕ್ರೋಶ



