ಸಿಲ್ಹೆಟ್ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ವನಿತಾ ಟಿ20 ಸರಣಿಯನ್ನು ಭಾರತ ಗೆಲುವಿನೊಂದಿಗೆ ಆರಂಭಿಸಿದೆ. ರವಿವಾರ ನಡೆದ ಮೊದಲ ಪಂದ್ಯವನ್ನು 44 ರನ್ನುಗಳಿಂದ ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 145 ರನ್ ಮಾಡಿದರೆ, ಬಾಂಗ್ಲಾ 8 ವಿಕೆಟಿಗೆ ಕೇವಲ 101 ರನ್ ಗಳಿಸಿತು. ಭಾರತದ ಪರ ಯಾಸ್ತಿಕಾ ಭಾಟಿಯಾ 36, ಶಫಾಲಿ ವರ್ಮ 31, ನಾಯಕಿ ಹರ್ಮನ್ಪ್ರೀತ್ ಕೌರ್ 30 ಹಾಗೂ ರಿಚಾ ಘೋಷ್ 23 ರನ್ ಮಾಡಿದರು. ಚೇಸಿಂಗ್ ವೇಳೆ ಬಾಂಗ್ಲಾ ನಾಯಕಿ ನಿಗಾರ್ ಸುಲ್ತಾನಾ ಏಕಾಂಗಿಯಾಗಿ ಹೋರಾಡಿ ಈ ಪಂದ್ಯದ ಏಕೈಕ ಅರ್ಧ ಶತಕ ದಾಖಲಿಸಿದರು (51).