ಬೆಂ.ಗ್ರಾ,ಮೇ,ದೇವನಹಳ್ಳಿ.: ಇತ್ತೀಚೆಗೆ ಮುದುಗುರ್ಕಿ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು,ಅದೇ ಸ್ಥಳದಲ್ಲಿ ಈ ಹಿಂದೆ ಅನೇಕ ಅಪಘಾತಗಳಲ್ಲಿ ಹಲವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂಡರ್ ಪಾಸ್ (ಕೆಳಸೇತುವೆ)ಗೆ ಆಗ್ರಹಿಸಿದ ಆ ಭಾಗದ ಮುಖಂಡರು ಸಾರ್ವಜನಿಕರು ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ರವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವರು, ಮುದಗುರ್ಕಿ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ,ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಂಧ್ರದ ಪೆನುಗೊಂಡ ವರಗೆ 2400 ಕೋಟಿ ರೂ ವೆಚ್ಚದಲ್ಲಿ 10 ಪಥದ ರಸ್ತೆ ನಿರ್ಮಾಣ ಮಾರ್ಚ್ ನಿಂದ ಆರಂಭಗೊಳ್ಳುತಿದ್ದು, ಎಲ್ಲಾ ಪ್ರಮುಖ ಗ್ರಾಮಗಳಲ್ಲಿ ಬೆಂಗಳೂರು ಮೈಸೂರು ಹೈವೇ ಮಾದರಿಯಲ್ಲಿ ಅಂಡರ್ ಪಾಸ್ ಗಳು ಆಗಲಿದ್ದು ಶಾಶ್ವತ ಪರಿಹಾರ ಸಿಗಲಿದೆ ಎಂ ದರು.
ತಕ್ಷಣದ ಕ್ರಮವಾಗಿ ಮುದುಗುರ್ಕಿಯಿಂದ ಆವತಿವರಗೆ ರಸ್ತೆ ಬದಿಯಲ್ಲಿ ಲಾರಿ ಸೇರಿದಂತೆ ಇತರೆ ವಾಹನಗಳ ನಿಲುಗಡೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗುವುದು.
ಕಾನೂನಿನ ಪ್ರಕಾರ ರಸ್ತೆಯನ್ನು ಈ ರೀತಿ ತೆರವು ಮಾಡಲು ಅವಕಾಶವಿಲ್ಲ, ತಾತ್ಕಾಲಿಕವಾಗಿ ಟ್ರಾಪಿಕ್ ಪೊಲೀಸ್ ಟ್ರಾಪಿಕ್ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ ಎಂದರು. ಹಾಗೂ ಹೈಮಾಸ್ಟ್ ದೀಪಕ್ಕೂ ವ್ಯವಸ್ಥೆ ಮಾಡಲು ಸೂಚಿಸಲಾಗುವುದೆಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ ಜಯಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಾಜಣ್ಣ ಉಪಾಧ್ಯಕ್ಷ ನಾರಾಯಣ ಸ್ವಾಮಿ, ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಪಘಾತ ತಡೆಗೆ ಕ್ರಮ: ವರ್ಷದೊಳಗೆ ಮುದುಗುರ್ಕಿಗೆ ವ್ಯವಸ್ಥಿತ ರಸ್ತೆ ಸಂಪರ್ಕ- ಕೆ.ಹೆಚ್.ಎಂ



