ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ನಡೆಸುತ್ತಿರುವ ಹೋರಾಟದ ಸಂಬಂಧ ಬಹಿರಂಗ ಚರ್ಚೆಯ ವಿಷಯ ಸರ್ಕಾರ ಹಾಗೂ ಜೆಡಿಎಸ್ ನಡುವೆ ಹಗ್ಗಜಗ್ಗಾಟವಾಗಿ ಮಾರ್ಪಾಟ್ಟಿದೆ. ಈ ಸಂಬಂಧ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು. ಈ ಸವಾಲಿಗೆ ಕುಮಾರಸ್ವಾಮಿ ಕರೆದ ಸ್ಥಳಕ್ಕೆ ಬರುವಂತೆ ಮುಖ್ಯಮಂತ್ರಿಯವರಿಗೆ ಕರೆದ ಮುಖ್ಯಮಂತ್ರಿಯವರು ನೀಡುವ ಸ್ಥಳಕ್ಕೆ ಹೋಗಲು ಕುಮಾರಸ್ವಾಮಿ ನಿರಾಕರಿಸುತ್ತಿದ್ದಾರೆ. ಸವಾಲಿನ ವಿಷಯ ಬಹಳ ಕಾಲದಿಂದಲೂ ನಡೆಯುತ್ತಿದ್ದು, ನಿನ್ನೆ ಕುಮಾರಸ್ವಾಮಿ ಅವರು ಹಾಕಿದ್ದ ಚರ್ಚೆಯ ವಿಷಯಕ್ಕೆ ಬರಲು ನಿರಾಕರಿಸಿದ್ದ ಮುಖ್ಯಮಂತ್ರಿ ಸಂಜೆ ವೇಳೆಗೆ ವಿಧಾನಸೌಧಕ್ಕೆ ಈ ತಿಂಗಳ 26ರಂದು ಬರುವಂತೆ ಕರೆ ನೀಡಿದರು. ಆದರೆ ಕೆಲವೇ ಮಂದಿ ಎದುರಿಗೆ ಚರ್ಚೆಗೆ ಬರಲು ತಾವು ಸಿದ್ದರಿಲ್ಲ. ರೈತರೊಂದಿಗೆ ಮುಕ್ತವಾಗಿ ನಡೆಯಬೇಕು. ರೈತ ಮುಂದೆ ಮುಕ್ತವಾಗಿ ಚರ್ಚೆ ನಡೆಸಲು ಬಿಡದಿ ಸಮೀಪದ ಬೈರಮಂಗಲದ ಆಸುಪಾಸಿನ ಸಾರ್ವಜನಿಕ ಸ್ಥಳಕ್ಕೆ ಆಹ್ವಾನಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರು ಕರೆದಿರುವ ದಿನಾಂಕವಾದ 26ರ ಬದಲಿಗೆ 27ಕ್ಕೆ ಕರೆಯುವಂತೆ ಮನವಿ ಮಾಡಿದ್ದಾರೆ. 26ರಂದು ಮೂರುತಿಂಗಳ ಮುಂಚೆಯೇ ಪೂರ್ವನಿಗದಿತ ಕಾರ್ಯಕ್ರಮಗಳಿವೆ ಹಾಗಾಗಿ 27ಕ್ಕೆ ಯಾವುದೇ ಸಮಯ ದಲ್ಲಿ ಕರೆದರೂ ನಾನು ಸಿದ್ದನಿದ್ದೇನೆ ಎಂದಿದ್ದಾರೆ.
ಬಹಿರಂಗ ಚರ್ಚೆಯ ಹಗ್ಗಜಗ್ಗಾಟ



