ರಾಮನಗರ: ದೇಶದ ಪ್ರಧಾನಿಯೇ ರೈತರ ಪ್ರತಿಭಟನೆಗೆ ಮಣಿದು ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹಠವನ್ನು ಬದಿಗಿಟ್ಟು ಕೂಡಲೇ ಬಿಡದಿ ಟೌನ್ ಶಿಪ್ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಬೈರಮಂಗಲ ಗ್ರಾಮದಲ್ಲಿ ಬಿಡದಿ ಟೌನ್ ಶಿಪ್ ವಿರೋದಿಸಿ ನಡೆದ ಬೈರಮಂಗಲ ಚಲೋ ಸಮಾವೇಶದಲ್ಲಿ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರ್ ಡಿನೋಟಿಪಿಕೇಶನ್ ರದ್ದು ಮಾಡಿದರೆ ನಾನು ಜೈಲಿಗೆ ಹೋಗುತ್ತೇನೆ ಎಂದು ರೈತರ ಕಿವಿಗೆ ಹೂ ಮುಡಿಸುತ್ತಿದ್ದಾರೆ. ಹಾಗೇನಾದರೂ ನೀವು ಜೈಲಿಗೆ ಹೋದರೆ ನಾವು ರೈತರು ನಿಮ್ಮ ಜೊತೆ ಜೈಲಿಗೆ ಬರಲು ಸಿದ್ದರಿದ್ದೇವೆ ಎಂದು ತಿಳಿಸಿದರು.ಫಲವತ್ತಾದ ಭೂಮಿಯನ್ನು 26 ಹಳ್ಳಿಯ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇದು ಕೇವಲ 26 ಹಳ್ಳಿಯ ಹೋರಾಟವಲ್ಲ. ಡಿ.ಕೆ. ಶಿವಕುಮಾರ್ ಈ ಜಿಲ್ಲೆಯವರು ಈ ಮಣ್ಣಿನಲ್ಲಿ ಹುಟ್ಟಿದವರು. ಅವರ ಸಂದರ್ಶನಗಳನ್ನು ನೋಡಿದ್ದೇನೆ. ಸಂದರ್ಶನದಲ್ಲಿ ನಾನು ಕೃಷಿ ಕುಟುಂಬದಿAದ ಬಂದವನು ಎಂದು ಹೇಳಿದ್ದಾರೆ, ಅವರು ರೈತನ ಮಗನೇ ಆಗಿದ್ದರೆ ರೈತನ ನೆಲದಲ್ಲಿ ನಿಂತು ತೀರ್ಮಾನ ಮಾಡಲಿ ಎಂದರು.ರೈತರ ಜಮೀನಿಗೆ ಎರಡು ಕೋಟಿ ಕೊಡುತ್ತಾರಂತೆ, ಮುಖ್ಯಮಂತ್ರಿಗಳೇ ರೈತನ ಭೂಮಿ ಕುರಿತು ಬಿಸಿನೆಸ್ ಮೆನ್ ರೀತಿ ಯೋಚನೆ ಮಾಡಬೇಡಿ. ರೈತ ತನ್ನ ಜಮೀನಿನೊಂದಿಗೆ ಭಾವನಾತ್ಮಕ ಸಂಬAಧವನ್ನು ಇಟ್ಟುಕೊಂಡಿರುತ್ತಾನೆ. ಕೇವಲ ಎರಡು ಗುಂಟೆ ಜಮೀನಿರುವ ರೈತ ಗೌರವವಾಗಿ ಜೀವನ ನಡೆಸುತ್ತಿದ್ದಾನೆ ಎಂದರು.ಡಿ.ಕೆ. ಶಿವಕುಮಾರ್ ಅವರು ದೈವ ಭಕ್ತರಾಗಿದ್ದಾರೆ. ದೇವರುಗಳ ಕೂಡ ರೈತರಿಗೆ ಮೊದಲನೆ ಸ್ಥಾನ ನೀಡುತ್ತಾರೆ. ನೀವೇನಾದರೂ ರೈತರ ಜಮೀನನ್ನು ಕಿತ್ತುಕೊಂಡರೆ ದೇವರಗಳು ಕೂಡ ನಿಮಗೆ ಕೈ ಹಿಡಿಯುವುದಿಲ್ಲ, ಅದು ಶಾಪವಾಗುತ್ತದೆ ಎಂದು ಎಚ್ಚರಿಸಿದರು.ಬೆಂಗಳೂರು ಈಗಾಗಲೇ ದೊಡ್ಡದಾಗಿ ಬೆಳೆದಿದೆ, ಬೆಂಗಳೂರು ಪ್ರಸ್ತುತ ಸಂದರ್ಭದಲ್ಲಿ ವಕ್ರವಾಗಿ ಬೆಳೆಯುತ್ತಿದೆ. ಬೆಂಗಳೂರು ಬೆಳೆದರೆ ಮಾತ್ರ ಅಭಿವೃದ್ಧಿ ಎಂಬ ಭ್ರಮೆಯನ್ನು ಮೊದಲು ಬಿಡಿ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಂಗಳೂರು ದೊಡ್ಡ ಸ್ಲಮ್ ಆಗಿ ಪರಿವರ್ತನೆ ಆಗಲಿದೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆಂದು ಬೆಂಗಳೂರಿಗೆ ಕೆಟ್ಟ ಹೆಸರು ತರಲು ಹೋಗಬೇಡಿ ಎಂದರು.ನೀವು ಕೊಡುವ ಎರಡು ಕೋಟಿ ಹಣದಿಂದ ಭೂಮಿಯ ಬೆಲೆಯನ್ನು ಕಟ್ಟಲಾಗುವುದಿಲ್ಲ. ಭೂಮಿಯನ್ನು ನಮ್ಮ ತಾಯಿ ಎನ್ನುತ್ತೇವೆ, ನಮ್ಮ ತಾಯಿಗೆ ಬೆಲೆ ಕಟ್ಟಲು ಆಗುತ್ತದೆಯೆ ಎಂದು ಪ್ರಶ್ನಿಸಿದರು.
ಬಿಡದಿ ಟೌನ್ ಶಿಪ್ ಯೋಜನೆಗೆ ಶೇ.80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದೀರಿ. ಹಠಕ್ಕೆ ಬಿದ್ದು, ಸ್ವಾರ್ಥಕ್ಕಾಗಿ ಈ ಯೋಜನೆಯನ್ನು ಮಾಡಬೇಡಿ, ರೈತರ ತಂಟೆಗೆ ಬಂದವರು ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಈ ಭಾಗದ ಅಭಿವೃಧ್ಧಿಗಾಗಿ ಬೇರೆ ಯೋಜನೆ ರೂಪಿಸಿ ಎಂದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಕೂಡಲೇ ಈ ಯೋಜನೆಯನ್ನು ಕೈಬಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ತಿಳಿಸಿದರು.ನೊಯಿಡಾದಲ್ಲಿ ರೈತರು ಜಮೀನು ಕೊಟ್ಟು ಕೋಟಿ ಕೋಟಿ ಹಣ ಪಡೆದವರು ಹಣ ಖಾಲಿ ಮಾಡಿಕೊಂಡು ಇಂದು ಅದೇ ಕಂಪನಿ ಮುಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆಯಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದರು.
ರೈತ ಸಂಘದ ಪದಾಧಿಕಾರಿಗಳಾದ ಕೆ. ಮಲ್ಲಯ್ಯ, ಲಕ್ಷಿ÷್ಮÃನಾರಾಯಣ ರೆಡ್ಡಿ, ಎನ್.ಡಿ. ವಸಂತ್ ಕುಮಾರ್, ಗೋವಿಂದರಾಜು, ನೇತ್ರಾವತಿ, ರಾಮಯ್ಯ, ಕೆಂಪರಾಜು, ಚೀಲೂರು ಮುನಿರಾಜು, ಕುಮಾರಸ್ವಾಮಿ, ಕೃಷ್ಣಯ್ಯ, ಗೋಪಾಲ್, ಶ್ರೀಶೈಲಾ, ಮಹೇಶ್ ಪ್ರಭು, ವಸಂತ್ ಕುಮಾರ್, ಹೊಸಕೋಟೆ ಬಸವರಾಜು, ರಮ್ಯಾ ರಾಮಣ್ಣ, ಕರ್ನಾಟಕ ಪ್ರಾಂತ ರೈಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್, ಕನಕಪುರ ನಗಸಭೆ ಸದಸ್ಯ ಸ್ಟುಡಿಯೋ ಚಂದ್ರು ಹಾಗೂ ಇತರರು ಪಾಲ್ಗೊಂಡಿದ್ದರು. ಬಿಡದಿ ಪಟ್ಟಣದ ಬಿಜಿಎಸ್ ವೃತ್ತದಿಂದ ಬೈರಮಂಗಲ ವೃತ್ತದವರೆಗೆ ನೂರಾರು ರೈತರು ಬೈಕ್ ಮತ್ತು ಟ್ರಾ÷್ಯಕ್ಟರ್ ಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯದ 25 ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಬಿಡದಿ ಟೌನ್ ಶಿಪ್ ಭೂ-ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ರೈತ ಸಂಘ ಆಗ್ರಹ



