ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಆರಂಭಿಸಿದ್ದು ನಾನೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪುನರ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಒಟ್ಟು ಐದು ಟೌನ್ಶಿಪ್ಗಳ ಯೋಜನೆಗೆ ಚಾಲನೆ ಕೊಟ್ಟಿದ್ದು ನನ್ನ ಅಧಿಕಾರದಲ್ಲೇ ಎಂದು ಈಗಾಗಲೇ ಹೇಳಿದ್ದೇನೆ. ಈಗಲು ಅದನ್ನೇ ಹೇಳುತ್ತೇನೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಚಾಲನೆ ಕೊಟ್ಟೆ ಎಂದು ಹೇಳಿದ ಅವರು ಈ ಬಗ್ಗೆ ಮುಖ್ಯಮಂತ್ರಿಯವರು ನೀಡಿರುವ ಹೇಳಿಕೆ ಬಗ್ಗೆ ತೀವ್ರವಾಗಿ ಅಸಮಾಧಾನದಿಂದ ಮಾತನಾಡಿದರು.
ಐದು ಟೌನ್ಶಿಪ್ ನಿರ್ಮಾಣಕ್ಕೆ ನಾನು ಮುಂದಾಗಿದ್ದೆ. ಈ ಬಗ್ಗೆ 2007ರ ಜುಲೈನಲ್ಲಿ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಆಗ ಏನೇನು ಮಾತುಕತೆ ನಡೆಯಿತು ಎಂದು ದಾಖಲೆಗಳಲ್ಲಿದೆ. ಇದಿಗ ಮುಖ್ಯಮಂತ್ರಿಯವರು ತರಾತುರಿಯಲ್ಲಿ ಬಹಳ ಸ್ಪೀಡಾಗಿ ಈ ಯೋಜನೆ ಜಾರಿಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.ಬಿಡದಿ ಟೌನ್ಶಿಪ್ ಪಿತಾಮಹ ಎಂದು ನನ್ನನ್ನು ಕರೆಯುತ್ತಾರೆ. ನಿನ್ನೆ ಸಿಎಂ ಕಚೇರಿಯಿಂದ ಟೈಂಲೈನ್ ಬಿಡುಗಡೆ ಮಾಡಿದ್ದಾರೆ. ನಾನು ಟೌನ್ಶಿಪ್ಗೆ ಚಾಲನೆ ಕೊಟ್ಟಿದ್ದಾಗ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅಲ್ಲಿಗೆ ಕೈಬಿಟ್ಟಿದ್ದೆ ಎಂದು ಸುದೀರ್ಘವಾಗಿ ಯೋಜನೆ ಬಗ್ಗೆ ಇದುವರೆಗೂ ನಡೆದಿರುವ ಬೆಳವಣಿಗೆಯನ್ನು ವಿವರಿಸಿ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಟೌನ್ಶಿಪ್ ದಾಖಲೆ ಅ¸ ಬಿಡದಿ ಯೋಜನೆ ಬಗ್ಗೆ ಸುದೀರ್ಘ ವಿವರಣೆ ನೀಡಿದ ಎಚ್ಡಿಕೆ



