‘ರೈತರ ಮಕ್ಕಳಿಗೆ ಹೆಣ್ಣು ಕೊಡಿ’ ಚಿತ್ರಕ್ಕೆ ಕೆಂಪರಾಮ್ ಹೆಡಿಯಾಲ ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವ ಜತೆಗೆ ಮೆಲ್ಲುಲಿಗಾನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ.
ಇಲ್ಲಿನ ನೆಲದ ಮಣ್ಣಿನ ಜೀವನಗಾಥೆಯನ್ನು ಎಳೆಎಳೆಯಾಗಿ ಹಳ್ಳಿಸೊಗಡಿನ ಸನ್ನಿವೇಶಗಳನ್ನು ತೋರಿಸಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಸಿಗುವುದಿಲ್ಲ ರಾಜ್ಯವ್ಯಾಪ್ತಿ ಮಾರ್ದನಿಸಿ ಅವರ ಬದುಕಿನಲ್ಲಿ ತಲ್ಲಣವನ್ನು ಉಂಟು ಮಾಡುತ್ತಿದೆ. ಚಿತ್ರವು ವಿಭಿನ್ನ ಹಾಗೂ ವಿಶಿಷ್ಟವಾದ ಅನುಭವಗಳನ್ನು ತೋರಿಸಿಕೊಡುತ್ತದೆ. ಅವರ ಬದುಕಿನ ಸೂಕ್ಷತೆಗಳು, ಅಲ್ಲಿನ ಗಂಭೀರ ಅಂಶಗಳು ಗಮನ ಸೆಳೆದು, ಬುದ್ದಿ, ಭಾವ ಚಿತ್ತ ಜಾಗೃತಗೊಳ್ಳುವಂತೆ ಮಾಡುತ್ತಾ, ನೋಡುಗರ ಮನಸ್ಸನ್ನು ಒಳಹೊಕ್ಕಿಸಿ, ಸನ್ನಿವೇಶಗಳಲ್ಲಿ ಕಾಣುವ ಪಾತ್ರಗಳು ನಮ್ಮ ಜೀವನದ ಪ್ರತಿಬಿಂಬವಾಗುವAತೆ ಮಾಡುತ್ತದೆ. ಗೆಲ್ಲುತ್ತಾ ಹೋಗುವವರು ಇತಿಹಾಸ ಸೃಷ್ಟಿಸುತ್ತಾರೆ. ಆದರೆ ಸೋತು ಗೆಲ್ಲುವವರು ಇತಿಹಾಸವನ್ನು ಬದಲಾಯಿಸುತ್ತಾರೆ ಎನ್ನುವಂತ ತೂಕದ ಸಂದೇಶವನ್ನು ಹೇಳಲಾಗಿದೆ.
ಜೈ ಜಗದೀಶ್ ಮುಕಿ ನಾಯಕ. ದಿವ್ಯಾಶ್ರೀ ನಾಯಕಿ. ಉಳಿದಂತೆ ಅಮೋಫ್ದಾಸ್, ಅಗಸ್ಯ ಪ್ರೇಮ್, ಸಂಗನಗೌಡ, ಸಂತೋಷ್ ಜೋಗುಳ್, ಅಶ್ವಿನಿ ಮುಂತಾದವರು ನಟಿಸಿದ್ದಾರೆ.
ರೋಹನ್.ಎಸ್.ದೇಸಾಯಿ, ಸಾಹಸ ಸಂಗೀತ-ಛಾಯಾಗ್ರಹಣ-ಸಂಕಲನ ಸಂತೋಷ್ ರಾಥೋಡ್, ನೃತ್ಯ ಅಕುಲ್ ಮಾಸ್ಟರ್-ಅಜಯ್ ಜೈಕೃಷ್ಣ-ಸಾಕ್ಷಿ ಅವರದಾಗಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಂದ ಹಾಗೆ ಚಿತ್ರವು ಇದೇ ಶುಕ್ರವಾರ ತೆರೆ ಕಾಣಲಿದೆ.
ತೆರೆಗೆ ಸಿದ್ದ `ರೈತರ ಮಕ್ಕಳಿಗೆ ಹೆಣ್ಣು ಕೊಡಿ’



