ಬೆಂಗಳೂರು: ವಿಶ್ವಪ್ರಸಿದ್ಧ ಅರ್ಜೇಂಟೀನಾ ಫುಟ್ಬಾಲ್ ಅಸೋಸಿಯೇಷನ್ನ ಭಾರತದ ಅಧಿಕೃತ ಲೈಸೆನ್ಸಿ ಆಗಿ ಜಗದಾಳೆ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಹಯೋಗವನ್ನು ಘೋಷಿಸಿದೆ. ಅರ್ಜೆಂಟೀನಾದ ಫುಟ್ಬಾಲ್ನ ಜಾಗತಿಕ ಪರಂಪರೆ ಮತ್ತು ಜಗದಾಳೆ ಸಂಸ್ಥೆಯ ಶ್ರೇಷ್ಠತೆ ಹಾಗೂ ನಾವೀನ್ಯತೆ ಈ ಪಾಲುದಾರಿಕೆಯ ಮೂಲಕ ಒಂದಾಗುತ್ತಿವೆ. ಇದು ಜಗದಾಳೆ ಕಂಪನಿಯ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ವಿಶ್ವಾಸಾರ್ಹ ಸಂಬAಧ ಮತ್ತು ಜವಾಬ್ದಾರಿಯುತ ವ್ಯವಹಾರದ ಮೂಲಕ ಮೌಲ್ಯವನ್ನು ಸೃಷ್ಟಿಸುವುದನ್ನು ಮುಂದುವರೆಸುತ್ತದೆ. ಇದರ ಪ್ರಮುಖ ಉತ್ಪನ್ನಗಳಲ್ಲಿ ಡಾರ್ಟ್ ಮಾತ್ರೆ ಇದ್ದು, ವಿಶ್ವಾಸಾರ್ಹ ನೋವು, ಜ್ವರ ನಿವಾರಕ ಮಾತ್ರೆ ಆಗಿದೆ. ಇದು ರೋಗಿಗಳ ಆರೈಕೆಯಲ್ಲಿ ವೇಗ ಮತ್ತು ನಿಖರತೆಯನ್ನು ನೀಡುವ ಜಗದಾಳೆ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಪೋರ್ಟ್ಫೋಲಿಯೊದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರೆಡಿ-ಟು-ಡ್ರಿಂಕ್ ಪೌಷ್ಠಿಕ ಪಾನೀಯ ಮಲ್ಮಿನಾ ಮತ್ತು ವೈಜ್ಞಾನಿಕವಾಗಿ ರೂಪಿಸಲಾದ ಹೈಡ್ರೇಶನ್ ಪಾನೀಯ ಒನೆಲ್ ಕೂಡ ಇದೆ.
ವಿಶ್ವದ ಅತ್ಯಂತ ಪ್ರಸಿದ್ಧ, ಜನಪ್ರಿಯ ಫುಟ್ಬಾಲ್ ಒಕ್ಕೂಟಗಳಲ್ಲಿ ಒಂದಾದ ಎಎಫ್ಎ ಶ್ರೀಮಂತ ಕ್ರೀಡಾ ಪರಂಪರೆ, ಜಾಗತಿಕ ಮನ್ನಣೆ ಮತ್ತು ಬಲವಾದ ಅಂತರರಾಷ್ಟ್ರೀಯ ಅಸ್ತಿತ್ವವನ್ನು ಪ್ರತಿನಿಧಿಸುತ್ತದೆ. ಈ ಸಹಯೋಗದ ಪ್ರಯೋಜನವನ್ನು ಪಡೆದುಕೊಂಡು, ಜಗದಾಳೆ ಸಂಸ್ಥೆಯು ಆರೋಗ್ಯ ವೃತ್ತಿಪರರು, ಕೆಮಿಸ್ಟ್ಗಳು, ಸಾಂಸ್ಥಿಕ ಗ್ರಾಹಕರು ಮತ್ತು ಮಾರಾಟ ತಂಡಗಳೊAದಿಗೆ ಸಂಬAಧವನ್ನು ಬಲಪಡಿಸಲು ಹಲವು ಉಪಕ್ರಮಗಳನ್ನು ಪರಿಚಯಿಸಲು ಯೋಜಿಸಿದೆ. ಈ ಉಪಕ್ರಮಗಳು ಕಂಪನಿ ಜೊತೆ ಗುರುತಿಸಿಕೊಂಡಿರುವ ಎಲ್ಲರಿಗೂ ಹಲವು ಅನನ್ಯ ಅವಕಾಶಗಳನ್ನು ಸೃಷ್ಟಿಸಲಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಜಗದಾಳೆ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ನಾಗರಾಜ ರಾವ್ ಜಗದಾಳೆ, ವಿಶ್ವದ ಅತ್ಯಂತ ಪ್ರಸಿದ್ಧ ಫುಟ್ಬಾಲ್ ಸಂಸ್ಥೆಗಳಲ್ಲಿ ಒಂದಾದ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಜೊತೆ ಈ ಸಹಯೋಗವನ್ನು ಪ್ರಾರಂಭಿಸಲು ನಾವು ಅತ್ಯಂತ ಹೆಮ್ಮೆಪಡುತ್ತೇವೆ ಎಂದಿದ್ದಾರೆ.
ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ನ ಮುಖ್ಯ ವಾಣಿಜ್ಯ ಮತ್ತು ಮಾರ್ಕೆಟಿಂಗ್ ಅಧಿಕಾರಿ ಲಿಯಾಂಡ್ರೊ ಪೀಟರ್ಸನ್ ಅವರು, ಭಾರತದಲ್ಲಿ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ನ ಅಧಿಕೃತ ಲೈಸೆನ್ಸಿ ಆಗಿ ಜಗದಾಳೆ ಇಂಡಸ್ಟ್ರೀಸ್ ಅನ್ನು ಖುಷಿಯಿಂದ ಸ್ವಾಗತಿಸುತ್ತೇವೆ. ವಿಶ್ವದ ಅತ್ಯಂತ ಕ್ರಿಯಾತ್ಮಕ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಎಎಫ್ಎ ಸಂಸ್ಥೆ ಬೆಳೆಸಿಕೊಳ್ಳುತ್ತಿದ್ದು, ಜಗದಾಳೆ ಸಂಸ್ಥೆಯು ನಮ್ಮ ಅತ್ಯಂತ ಸೂಕ್ತ ಪಾಲುದಾರರಾಗಲಿದ್ದಾರೆೆ ಎಂದು ಹೇಳಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ ಡ್ರೂಯಿಡ್ ಸ್ಪೋರ್ಟ್್ಸನ ಮಧ್ಯಪ್ರಾಚ್ಯ ಮತ್ತು ಭಾರತದ ಅಧ್ಯಕ್ಷರಾದ ಪ್ರಣವ್ ಮಣಿ ಚಿನ್ನಸ್ವಾಮಿ, ಭಾರತದಲ್ಲಿ ಜಗದಾಳೆ ಇಂಡಸ್ಟ್ರೀಸ್ ಅನ್ನು ಎಎಫ್ಎ ಕುಟುಂಬಕ್ಕೆ ಅಧಿಕೃತ ಲೈಸೆನ್ಸಿಯಾಗಿ ಸ್ವಾಗತಿಸಲು ನಾವು ರೋಮಾಂಚನಗೊAಡಿದ್ದೇವೆ. ಜಗದಾಳೆ ಸಂಸ್ಥೆಯು ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದಾರೆ. ಭಾರತೀಯ ಉಪಖಂಡದಲ್ಲಿ ಎಎಫ್ಎನ ವಿಶೇಷ ವಾಣಿಜ್ಯ ಪ್ರತಿನಿಧಿಯಾಗಿ, ಫಿಫಾ ವಿಶ್ವಕಪ್ 2026ರ ಮುನ್ನ ಈ ಸಹಯೋಗವನ್ನು ಸುಗಮಗೊಳಿಸಲು ಸಹಾಯ ಮಾಡಿದ್ದಕ್ಕಾಗಿ ಡ್ರೂಯಿಡ್ ಸ್ಪೋರ್ಟ್ ಹೆಮ್ಮೆಪಡುತ್ತದೆ ಎಂದಿದ್ದಾರೆ.
ಅರ್ಜೇಂಟೀನಾ ಫುಟ್ಬಾಲ್ ಜೊತೆ ಜಗದಾಳೆ ಸಹಯೋಗ! ಭಾರತದಲ್ಲಿ ಸಂಸ್ಥೆಗೆ ವಿಶೇಷ ಲೈಸೆನ್ಸಿಂಗ್!



