ಬೆಂಗಳೂರು: ಕಳೆದ 18ರಂದು ನಡೆದ ವಿಧಾನಪರಿಷತ್ ಚುನಾವಣಾ ಸಂಬAಧ ನಡೆದಿರುವ ಅಡ್ಡಮತ ದಾನದ ಸಂಬಂಧ ವಿವರವಾಗಿ ಮಾಹಿತಿ ಪಡೆಯಲು ರಾಜ್ಯಘಟಕದ ಹಲವರನ್ನು ಕೇಂದ್ರ ವರಿಷ್ಠರು ದೆಹಲಿಗೆ ಬುಲಾವ್ ಮಾಡಿದ್ದಾರೆ. ಚುನಾವಣಾ ಪ್ರಕ್ರಿಯೆ ಆರಂಭವಾದಗಿನಿಂದಲೂ ಫಲಿತಾಂಶ ಹೊರ ಬೀಳುವವರೆಗೂ ನಡೆದ ಘಟನಾವಳಿಗಳ ಬಗ್ಗೆ ಸುದೀರ್ಘ ವಿವರ ಪಡೆಯಲು ತೀರ್ಮಾನಿಸಿರುವ ವರಿಷ್ಠರು ಹಲವರನ್ನು ದೆಹಲಿಗೆ ಕರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತದಾನವಾದ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಬೂತ್ ಏಜೆಂಟ್ಗಳಾಗಿದ್ದವರನ್ನು ಸಹ ಕರೆಸಲಾಗಿದೆ ಎಂದು ಹೇಳಲಾಗಿದೆ. ಇಂದು ಮಧ್ಯಾಹ್ನ ಅಥವಾ ನಾಳೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ತೆರಳಲಿದ್ದಾರೆ. ಇವರಿಬ್ಬರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಸಂಬAಧ ಸುದೀರ್ಘ ಮಾಹಿತಿ ನೀಡಿದ ನಂತರ ವರಿಷ್ಠರು ಕೈಗೊಳ್ಳುವ ಕ್ರಮ ಏನೆಂಬುದು ನಿರ್ಧಾರವಾಗಲಿದೆ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಡ್ಡಮತದಾನ ಮಾಡಿದವರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ನಡೆಸಿ ಆಣೆ ಪ್ರಮಾಣ ಮಾಡಿಸುವ ಬಗ್ಗೆ ಕೈಗೊಳ್ಳಲಾದ ತೀರ್ಮಾನ ಸಂಬಂಧ ಪಕ್ಷದ ಕೆಲ ಕಿರಿಯರಿಂದಲೇ ಆಕ್ಷೇಪದ ಮಾತುಗಳು ಕೇಳಿಬಂದಿವೆ



