ಚಳ್ಳಕೆರೆ: ತಾಲ್ಲೂಕಿನ ದುರ್ಗಾವರ ಗ್ರಾಮದಲ್ಲಿ ಭಗೀರಥ ಜಯಂತಿ ಕಾರ್ಯಕ್ರ ಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಭಾಗವಹಿಸಿ ಮಾತ ನಾಡಿ,ಭಗೀರಥ ಮಹರ್ಷಿಗಳು ಸಾಕ್ಷಾತ್ ಶಿವನ ಜಟೆಯಲ್ಲಿ ಇರುವ ಗಂಗೆಯನ್ನು ಭೂಮಿಗೆ ಇಳಿಸಿದ ಮಹಾಋಷಿಮುನಿ,ಸಮಾಜಕ್ಕೆ ಸ ಮಾನತೆ ಸಂದೇಶ ನೀಡಿ,ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದ ನಾ ಯಕ,ಪ್ರಸ್ತುತ ಉಪ್ಪಾರ ಸಮಾಜಕ್ಕೆ ರಾಜಕೀಯ,ಸಾಮಾಜಿಕಾ,ಶೈಕ್ಷಣಿ ಕ ಪ್ರಾತಿನಿಧ್ಯ ಸ್ಥಾನಮಾನ ದೊರೆಯಬೇಕಿದೆ.ರಾಜ್ಯದಲ್ಲಿ ಹಲವಾರು ಸಣ್ಣ ಸಮುದಾಯಗಳು ಇಂದಿಗೂ ಸ್ಥಾನಮಾ ನಕ್ಕಾಗಿ,ಹೋರಾಟ ನಡೆಸುತ್ತಿವೆ.ಅದರಲ್ಲಿ ಉಪ್ಪಾರ ಸಮಾಜವು ಸೇರಿ ದೆ.ಆರ್ಥಿಕ,ಸಾಮಾಜಿಕ,ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿ ರುವ ಜನಾಂಗಕ್ಕೆ ಸೂಕ್ತ ಮೀಸಲಾತಿ ಕಲ್ಪಿಸುವ ಮೂಲಕ,ಜನಾಂಗದ ಒಳಿತಿಗೆ ನೆರವಾಗಬೇಕು.ಹಿಂದುಳಿದ ವರ್ಗವಾದ ಉಪ್ಪಾರ ಸಮಾಜಕ್ಕೆ ನ್ಯಾಯ ಒದಗಿಸಲು ಮೀಸಲಾತಿ ನೀಡಿ ಸಮಾಜದ ಉದ್ದಾರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದರು.ಭಗೀರಥಿ ಜಯಂತಿ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭ ಗೀರಥ ಭಾವಚಿತ್ರ ವನ್ನು ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಯಲ್ಲಿ ವಿವಿಧ ಕಲಾತಂಡಗಳು, ಮಹಿಳೆ ಯರು ಕುಂಭವನ್ನು ಹೊತ್ತು ಸಾಗಿದರು. ಗ್ರಾಮವೂ ಸೇರಿದಂತೆ ನೂರಾರು ಉಪ್ಪಾರ ಸಮುದಾಯ ದ ಜನರು ಭಾಗಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದಕೆ.ಟಿ.ಕುಮಾರಸ್ವಾಮಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿವೆಂಕಟೇಶ ಯಾದವ್,ಗುತ್ತಿ ಗೆದಾರ ರಂಗಸ್ವಾಮಿ, ಬಂಡೆರAಗಣ್ಣ, ಪಾಪಣ್ಣ,ತಿಪ್ಪೇಸ್ವಾಮಿ,ಸೇರಿದಂತೆ ಗ್ರಾಮದ ನೂರಾರು ಜನರು ಹಾಗೂ ಉಪ್ಪಾರ ಸಮಾಜದವರು ಭಾಗ ವಹಿಸಿದ್ದರು.



