ಬೆಂಗಳೂರು : 43054 ವಿವಿಧ ಬಗೆಯ ವಾಹನಗಳನ್ನು ಒಂದು ವಾರದಿಂದ ಬೆಂಗಳೂರು ನಗರ ಸಂಚಾರಿ ಪೊಲೀಸ್ರು ತಪಾಸಣೆ ನಡೆಸಿದಾಗ 669 ಚಾಲಕರುಗಳು ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸುತ್ತಿರುವುದನ್ನು ಗುರುತಿಸಿ ಪ್ರಕರಣಗಳನ್ನು ದಾಖಲು ಮಾಡಿಕೊಂಡು ವಾಹನಗಳನ್ನು ಮುಟ್ಟು ಗೋಲು ಹಾಕಿಕೊಂಡಿರುತ್ತಾರೆ.ಬೆಂಗಳೂರ್ ನಗರದ 53 ಸಂಚಾರಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆ ಜೂನ್ 8 ರಿಂದ 14 ರವರೆಗೆ ನಡೆಸಿರುತ್ತಾರೆ.ಹಾಗೂ ವಿವಿಧ ಬಗೆಯ ವಾಹನಗಳಲ್ಲಿ ಅತಿ ವೇಗವಾಗಿ ಚಲಾಯಿಸುತ್ತಿದ್ದ 46 ಚಾಲಕರುಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು 46000 ರೂಪಾಯಿ ದಂಡವನ್ನು ಕಟ್ಟಿಸಿಕೊಂಡಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಜಂಟಿ ಪೋಲಿಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿರುತ್ತಾರೆ.



