ಬೆಂಗಳೂರು: ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಯನ್ನು ಮರುಪರಿಷ್ಕರಣೆ ಹೆಸರಿನಲ್ಲಿ ನಿಲ್ಲಿಸುವುದು ಬೇಡ ಎಂದು ಬಿಜೆಪಿಯ ಶಾಸಕ ಡಾ. ಅಶ್ವತ್ಥ್ನಾರಾಯಣ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಈಗಾಗಲೇ ಯೋಜನೆ ಜಾರಿ ಸಂದರ್ಭದಲ್ಲಿ ಹಲವು ಲೋಪಗಳಾಗಿವೆ. ಅನರ್ಹರು ಯೋಜನೆಯ ಲಾಭಪಡೆಯುತ್ತಿದ್ದಾರೆ ಎಂದು ಹೇಳಿ ಫಲಾನುಭವಿಗಳನ್ನು ಮರುಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಆದರೆ ಪರಿಷ್ಕರಣೆ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಯೋಜನೆಯನ್ನು ನಿಲ್ಲಿಸುವುದು ಬೇಡ. ಆರಂಭದಲ್ಲಿ ಎಲ್ಲರಿಗೂ ಯೋಜನೆ ಲಾಭ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಇದೀಗ ಮರುಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲರಿಗೂ ಕೊಡುತ್ತೇವೆ ಎಂದ ಮೇಲೆ ಎಲ್ಲರಿಗೂ ಕೊಡಿ. ಪಿಳ್ಳೆನೆಪ ಹೇಳಿಕೊಂಡು



