ದೇವನಹಳ್ಳಿ: ರೈತರಿಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಕೃತಕ ಅಭಾವ ಸೃಷ್ಟಿಸುವುದು ಮತ್ತು ಸಬ್ಸಿಡಿ ಗೊಬ್ಬರವನ್ನು ಕಾಳಸಂತೆಗೆ ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್ ಮೂರ್ತಿ ಆರೋಪಿಸಿದರು.ದೇವನಹಳ್ಳಿ ಪಟ್ಟಣದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಜಿಲ್ಲಾ ಘಟಕದ ಕಚೇರಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಸೊಸೈಟಿ ಸೇರಿದಂತೆ ಗ್ರಾಮೀಣ ಭಾಗದ ಸೊಸೈಟಿಗಳಲ್ಲಿ ಸಾದಾರಣವಾಗಿ 25-30% ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ಸರ್ಕಾರದ ನಿಗದಿ ಮಾಡಿದ ಧರಕ್ಕಿಂತ ಹೆಚ್ಚು ಲಾಭವನ್ನು ಇಟ್ಟುಕೊಂಡು ರಸಗೊಬ್ಬರ ಮಾರಾಟ ಮಾಡುತಿದ್ದು ಸಂಬಂಧ ಪಟ್ಟವರು ಕ್ರಮ ಈ ಕೂಡಲೇ ಸೊಸೈಟಿಗಳಿಗೆ ಭೇಟಿ ನೀಡಿ ಅಕ್ರಮ ರಸಗೊಬ್ಬರ ವರ್ಷಕ್ಕೆ ಪಡೆದು ಕಾನೂನು ಕ್ರಮ ಜರುಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಲಿಂಕ್ ಪ್ರಾಡಕ್ಟ್ ಹೆಸರಿನಲ್ಲಿ ರೈತರನ್ನು ಸುಲಿಗೆ ಮಾಡುತ್ತಿದ್ದರೂ ಕೂಡ ಸರ್ಕಾರವು ಕಣ್ಮುಚ್ಚಿ ಕುಳಿತಿರುವುದು ದುರದೃಷ್ಟಕರ. ರಸಗೊಬ್ಬರಗಳು ರೈತರಿಗೆ ಸಿಗಬೇಕಾದರೆ ಇವುಗಳ ಜೊತೆ ಸುಮಾರು ರೂ. 500 ರಿಂದ 800 ಬೆಲೆ ಬಾಳುವ ಇತರ ರಸಗೊಬ್ಬರಗಳನ್ನು ಅಗತ್ಯ ಇಲ್ಲದೇ ಇದ್ದರೂ ಲಿಂಕ್ ಪ್ರಾಡಕ್ಟ್ ಆಗಿ ಬಲವಂತವಾಗಿ ಖರೀದಿ ಮಾಡಬೇಕಾಗಿದೆ. ರೈತರಿಗೆ ಅವಶ್ಯವಿಲ್ಲದು ಬಲವಂತವಾಗಿ ಖರೀದಿಸುವಂತೆ ಒತ್ತಡ ಹಾಕುತ್ತಾರೆ. ಅಕ್ರಮ ಮಾರಾಟದ ಫಲವಾಗಿ 500 ಕೋಟಿ ಹಣವನ್ನು ರೈತರಿಂದ ಹಗಲು ದರೋಡೆಗಿಳಿದಿವೆ. ಇಂತಹ ಅಕ್ರಮಗಳನ್ನು ತಡೆದು, ರೈತರನ್ನು ಕಾಪಾಡಬೇಕಾದ ಕೃಷಿ ಮೌನವೇಕೆ. ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಮಾಫಿಯ ಜೊತೆ ನೇರವಾಗಿ ಭಾಗಿಯಾಗಿರುವುದು ಕಂಡು ಬರುತ್ತಿದೆ. ಈ ಅವ್ಯವಹಾರಗಳು ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಸಮಯಕ್ಕೆ ಸರಿಯಾಗಿ ರಸಗೊಬ್ಬರ ಸಿಕ್ಕರೆ ಸಾಕು ಎಂದು ಕಾಯು ತ್ತಿರುವ ರೈತರಿಗೆ ಇದರಿಂದ ಅನ್ಯಾಯ ವಾಗುತ್ತಿದೆ.ಇತ್ತೀಚೆಗೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ ರಸಗೊಬ್ಬರ ಕಂಪನಿಗಳ ಲಿಂಕ್ ಪ್ರಾಡಕ್ಟ್ ಮಾರಾಟಕ್ಕೆ ತಡೆಯೊಡ್ಡುವ ಕ್ರಮ ಜರುಗಿಸಲಾಗಿದೆ. ಆದರೆ ಕರ್ನಾಟಕದಲ್ಲಿ ರಸಗೊಬ್ಬರ ಕಂಪನಿಗಳು ರಾಜಾರೋಷವಾಗಿ ಲಿಂಕ್ ಪ್ರಾಡಕ್ಸ್ ಹಾಗೂ ಒಖP ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ಸುಲಿಗೆ ಮಾಡುವುದಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ರಸಗೊಬ್ಬರವನ್ನು ಮಾರಾಟಗಾರರ ಅಂಗಡಿ /ಸೊಸೈಟಿಗೆ ತಲುಪಿಸುವ ಜವಾಬ್ದಾರಿ ಮತ್ತು ಖರ್ಚು ಕಂಪನಿಯದ್ದಾಗಿರುತ್ತದೆ. ಆದರೆ, ಅದನ್ನು ಮಾರಾಟಗಾರರ ಮೇಲೆ ಹೊರಿಸಲಾಗುತ್ತಿದ್ದೆ. ಜತೆಗೆ, ಲಿಂಕ್ ಪ್ರಾಡಕ್ಟ್’ಗಳನ್ನು ಕಂಪನಿಗಳು ಕಡ್ಡಾಯವಾಗಿ ಖರೀದಿಸಬೇಕೆಂದು ಡೀಲರ್ಗಳ ಮೇಲೆ ಒತ್ತಡ ಹಾಕಿ, ಗೊಬ್ಬರದ ಜೊತೆಗೆ ಕಳುಹಿಸುತ್ತಿದ್ದಾರೆ ಮತ್ತು ಅವನ್ನು ಖರೀದಿಸದಿದ್ದರೆ. ಗೊಬ್ಬರದ ಸರಬರಾಜು ಮಾಡದೆ ಕಿರುಕುಳ ನೀಡುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಈ ಪರಿಸ್ಥಿತಿಯನ್ನು ನಿಭಾಯಿಸದ ಸರ್ಕಾರವು, ಮಾರಾಟಗಾರರು ಮತ್ತು ಕಂಪನಿಗಳು ರೈತರನ್ನು ಸುಲಿಗೆ ಮಾಡಲು ಸ್ವತಃ ತಾನೇ ಲೈಸನ್ಸ್ ನೀಡಿದಂತಾಗಿದೆ ಎಂದು ಆರೋಪಿಸಿದರು.ಕರ್ನಾಟಕ ರಾಷ್ಟ್ರ ಸಮಿತಿ ದೇವನಹಳ್ಳಿ ತಾಲೂಕು ಅಧ್ಯಕ್ಷ ಮದುಕುಮಾರ್, ಮಾತನಾಡಿ, ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ಅಸಹಾಯ ಕತೆಯನ್ನು ತೋಡಿಕೊಳ್ಳುತ್ತಾರೆ. ಇವೆಲ್ಲವೂ ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಎಲ್ಲವೂ ಕಾನೂನುಬದ್ದವಾಗಿದೆ ಎನ್ನುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿದೆ. ಇಂತಹ ವಿಚಾರಗಳನ್ನು ಜನರ ಮುಂದಿಡ ಬೇಕಾದ ಅಧಿಕಾರಿಗಳು ಮತ್ತು ಸಚಿವರು ಇದರ ಭಾಗವಾಗಿ. ಭ್ರಷ್ಟಾಚಾರದಲ್ಲಿ ಪಾಲು ಪಡೆಯುತ್ತಿದ್ದಾರೆ. ರಾಜ್ಯದಲ್ಲಿನ ಇಂತಹ ಪರಿಸ್ಥಿತಿ ಯಿಂದ ಈಗಾಗಲೇ ಬೆಳೆ ಹಾನಿ, ಬೆಲೆ ಕುಸಿತದಿಂದ ಬೇಸತ್ತಿರುವ ರೈತರಿಗೆ ಗಾಯಗಳ ಮೇಲೆ ಬರೆಗಳನ್ನು ಎಳೆಯಲಾಗುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಏಖS ಪಕ್ಷ ಮಾತ್ರ ಈ ರೈತರ ಸಹಾಯಕ್ಕೆ ನಿಂತಿದ್ದು ಇಂತಹ ಅಕ್ರಮಗಳನ್ನು ನಿಲ್ಲಿಸಲು ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ದೂರು ನೀಡುವ ರೈತರಿಗೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದರ ಮೂಲಕ ಪರಿಹಾರ ಒದಗಿಸಲಾಗುತ್ತಿದೆ. ಈ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಖS ಪಕ್ಷವು. ಕೃಷಿ ಇಲಾಖೆಯ ಆಯುಕ್ತರಿಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನಿರಂತರವಾಗಿ ಪತ್ರ ಮುಖೇನ ಕ್ರಮ ವಹಿಸಲು ಒತ್ತಾಯ ಮಾಡುತ್ತಾ ಬಂದಿದೆ. ಆದರೆ ಕೃಷಿ ಇಲಾಖೆಯ ಮುಖ್ಯಸ್ಥರುಗಳು ಕೂಡಾ ಈ ಅಕ್ರಮ ತಡೆಯುವ ನಿಟ್ಟಿನಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರುವ ಕಾರಣ, ಕೊನೆಯದಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಯ ಆಯುಕ್ತರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಏಖS ಪಕ್ಷ ಒಂದು ವಾರ ಸಮಯದ ಗಡುವು ನೀಡಿ ಕಳೆದವಾರದಲ್ಲಿ ಪತ್ರ ನೀಡಲಾಗಿತ್ತು. ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಧರಿಸಿ ಅನ್ಯಾಯವಾಗುತ್ತಿರುವ ರೈತರಿಗೆ ಸಬ್ಸಿಡಿ ದರದಲ್ಲಿ ರಸ ಗೊಬ್ಬರ ದೊರೆಯುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಆಗ್ರಹಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿ ಕಾರಿಗಳಾದ ವೆಂಕಟೇಶ್ ಮೂರ್ತಿ, ಶಿವಪ್ಪ, ಮುನಿ ರಾಜು, ಲೋಕೇಶ್, ಹರ್ಶಿತ, ಮಲ್ಲಪ್ಪ, ವಿಜಯ ಕುಮಾರ್, ಸುಬ್ರ ಮಣಿ, ಸೇರಿದಂತೆ ಇತರರು ಹಾಜರಿದ್ದರು.
ಕೃತಕ ಅಭಾವ ಸೃಷ್ಟಿಸಿ ರಸಗೊಬ್ಬರ ಮಾರಾಟದಲ್ಲಿ ಅವ್ಯವಹಾರ: ಕೆಆರ್ಎಸ್ ಟೀಕೆ



