ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದ ಭಾರತದ ವನಿತಾ ಪಡೆಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಗಾಯದಿಂದಾಗಿ ಇಡೀ ಪಂದ್ಯಾವಳಿಯಿAದಲೇ ಹೊರಬಿದ್ದಿದ್ದಾರೆ.
ನೆದರ್ಲಾ್ಯಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಇದರಿಂದಾಗಿ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನ ತೊರೆದಿದ್ದರು. ಇದಾದ ಬಳಿಕ ಶ್ರೇಯಾಂಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೇಯಾಂಕ ಅವರ ಗಾಯ ಗಂಭೀರವಾಗಿರುವುದರಿAದ ಅವರನ್ನು ಪಂದ್ಯಾವಳಿಯಿಂದ ಹೊರಗಿಡಲಾಗಿದೆ. ಶ್ರೇಯಾಂಕ ಅವರ ಅಲಭ್ಯತೆ ತಂಡದ ಸಂಯೋಜನೆಗೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಕೂಡ ಮಾಡುತ್ತಿದ್ದರು. ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಶ್ರೇಯಾಂಕ ಅವರ ಬದಲಿಗೆ ಅನ್ಕ್ಯಾಪ್ಡ್ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಬುಧವಾರ ನಡೆದ ನೆದರ್ಲಾ್ಯಂಡ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ತುತ್ತಾಗಿದ್ದರು. ನೆದರ್ಲಾ್ಯಂಡ್ಸ್ ಇನ್ನಿಂಗ್ಸ್ನ 6ನೇ ಓವರ್ ಬೌಲ್ ಮಾಡಲು ಬಂದ ಶ್ರೇಯಾಂಕ ಎಸೆದ ಮೊದಲ ಎಸೆತವನ್ನು ಸ್ಟೆçöÊಕ್ನಲ್ಲಿದ್ದ ಮೊಲ್ಕೆನ್ಬೋರ್ ಮಿಡ್-ಆನ್ ಕಡೆಗೆ ಆಡಿದರು. ಹೀಗಾಗಿ ಶ್ರೇಯಾಂಕ ಬೌಲಿಂಗ್ ಮಾಡಿದ ಬಳಿಕ ಚೆಂಡನ್ನು ಹಿಡಿಯಲು ಅದರ ಹಿಂದೆ ಓಡಿದರು. ಚೆಂಡಿನ ಬಳಿ ಹೋದ ಶ್ರೇಯಾಂಕ ಅದನ್ನು ತೆಗೆದುಕೊಳ್ಳಲು ಕೆಳಕ್ಕೆ ಬಾಗಿದರು. ಈ ಪ್ರಕ್ರಿಯೆಯಲ್ಲಿ ಶ್ರೇಯಾಂಕ ಸಮತೋಲನ ಕಳೆದುಕೊಂಡರು. ಹೀಗಾಗಿ ಅವರ ಬಲಗಾಲು ಉಳುಕಿತು.
ಇದರಿಂದ ಶ್ರೇಯಾಂಕ ತೀವ್ರ ನೋವಿನಿಂದ ಮೈದಾನದಲ್ಲೇ ಬಿದ್ದು ನರಳಲು ಶುರು ಮಾಡಿದರು. ಶ್ರೇಯಂಕಾ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಅಂಪೈರ್ಗಳು ಮತ್ತು ತಂಡದ ಸದಸ್ಯರು ತಕ್ಷಣವೇ ಫಿಸಿಯೋ ಅವರನ್ನು ಮೈದಾನಕ್ಕೆ ಕರೆಸಿದರು. ಶ್ರೇಯಾಂಕ ಅವರನ್ನು ಪರೀಕ್ಷಿಸಿದ ಫಿಸಿಯೋ ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಡಗೌಟ್ಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಶ್ರೇಯಾಂಕಗೆ ಸರಿಯಾಗಿ ನಿಲ್ಲಲು ಸಹ ಸಾಧ್ಯವಾಗಲಿಲ್ಲ.ಹೀಗಾಗಿ ಕಾರ್ಟ್ ಮತ್ತು ಸ್ಟೆçಚರ್ ಅನ್ನು ತಕ್ಷಣವೇ ಮೈದಾನಕ್ಕೆ ತರಬೇಕಾಯಿತು. ಶ್ರೇಯಂಕಾ ಅವರನ್ನು ಸ್ಟೆçಚರ್ ಮೇಲೆ ಮಲಗಿಸಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.
ಟಿ20 ವಿಶ್ವಕಪ್ನಿಂದ ಹೊರಬಿದ್ದ ಕನ್ನಡತಿ ಶ್ರೇಯಾಂಕ ಪಾಟೀಲ್..!



