ಮತ್ತೊಂದೆಡೆ ಮಾತನಾಡಿರುವ ವಿಧಾನ ಸಭೆ ವಿಪಕ್ಷ ನಾಯಕ ಆರ್.ಅಶೋಕ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಪರ ಅಡ್ಡ ಮತದಾನ ನಡೆದಿರುವುದು ನಿಜ. ಇದರಲ್ಲೇನು ಮುಚ್ಚುಮರೆಯಿಲ್ಲ. ಈ ಬಗ್ಗೆ ರಾಷ್ಟ್ರೀಯ ವರಿಷ್ಠರಿಗೆ ಮಾಹಿತಿ ಹೋಗಿದೆ. ಅಡ್ಡ ಮತದಾನ ಮಾಡಿರುವವರು ಯಾರು ಎಂಬುದರ ಬಗ್ಗೆ ಪತ್ತೆ ಹಚ್ಚಿ ವರಿಷ್ಠರಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವುದು ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



