ಕ್ರೀಡೆಯಲ್ಲಿ ಒಂದು ಸಣ್ಣ ಹಿನ್ನಡೆಯೂ ಎಷ್ಟು ಟೀಕೆಗೊಳಪಡುತ್ತವೆ ಎಂಬದಕ್ಕೆ ಪೋರ್ಚುಗಲ್ ತಂಡವೇ ಸದ್ಯದ ಅತಿ ದೊಡ್ಡ ನಿದರ್ಶನ. ಪಂದ್ಯ ಪ್ರಾರಂಭಕ್ಕೂ ಮುನ್ನ ಹೀರೋ ಆಗಿ ಕಣಕ್ಕಿಳಿದಿದ್ದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆಯೇ ಇದೇಗ ಪುಂಖಾನುಪುಂಖವಾಗಿ ಟೀಕೆಗಳ ಸುರಿಮಳೆಯಾಗುತ್ತಿದೆ. ಸುಲಭದಲ್ಲಿ ಗೆಲ್ಲಬಹುದು ಎಂದೇ ಎಲ್ಲರೂ ಅಂದುಕೊAಡಿದ್ದ ಡಿಆರ್ ಕಾಂಗೋ ತಂಡದ ವಿರುದ್ಧ ಪ್ರಥಮ ಪಂದ್ಯದಲ್ಲಿ ಪ್ರಯಾಸಕರ ಡ್ರಾ ಸಾಧಿಸಿದ್ದೇ ಇದಕ್ಕೆ ಕಾರಣ.ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಕ್ರಿಸ್ಟಿಯಾನೋ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡದ ಮೊಟ್ಟಮೊದಲ ಬಾರಿಗೆ ಫಿಫಾ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸಿಗೆ ಆರಂಭದಲ್ಲೇ ಹಿನ್ನಡೆಯಾಗಿದೆ. ಬುಧವಾರ (ಜೂನ್ 17) ಹೂಸ್ಟನ್ನಲ್ಲಿ ನಡೆದ ‘ಗ್ರೂಪ್ ಕೆ’ ನ ತಮ್ಮ ಮೊದಲ ಪಂದ್ಯದಲ್ಲಿ ಡಿಆರ್ ಕಾಂಗೋ ತಂಡವನ್ನು ಮಣಿಸುವಲ್ಲಿ ಪೋರ್ಚುಗಲ್ ವಿಫಲವಾಗಿದೆ. ಪಂದ್ಯವು 1- 1 ಗೋಲುಗಳಿಂದ ಡ್ರಾಗೊಂಡಿದ್ದರಿAದ ಪೋರ್ಚುಗಲ್ ತಂಡಕ್ಕೆ ಸುಲಭವಾಗಿ ಸಿಗಬಹುದಾಗಿದ್ದ ಎರಡು ಅಂಕಗಳು ನಷ್ಟವಾಯಿತು. ಇದೇವೇಳೆ 46ನೇ ಶ್ರೇಯಾಂಕಿತ ಕಾಂಗೋ ತಂಡ ವಿಶ್ವಕಪ್ ಇತಿಹಾಸದಲ್ಲೇ ತನ್ನ ಮೊದಲ ಅಂಕವನ್ನು ದಾಖಲಿಸಿತು.ಪಂದ್ಯದ ಆರಂಭದಲ್ಲಿ ಒತ್ತಡ ಹೇರಿದ ಪೋರ್ಚುಗಲ್ ಪರ 5ನೇ ನಿಮಿಷದಲ್ಲೇ ಜೊವಾವೊ ನೆವೆಸ್ ಗೋಲು ಗಳಿಸಿ ಭರ್ಜರಿ ಆರಂಭ ತಂದುಕೊಟ್ಟರು. ಆದರೆ, ಆ ಬಳಿಕ ಪೋರ್ಚುಗಲ್ ತನ್ನ ಲಯ ಕಳೆದುಕೊಂಡಿತು ಮತ್ತು ಕಾಂಗೋ ತಂಡ ಕೌಂಟರ್ ಅಟ್ಯಾಕ್ ಮೂಲಕ ತಿರುಗೇಟು ನೀಡತೊಡಗಿತು. ಅಂತಿಮವಾಗಿ ಮೊದಲಾರ್ಧ ಮುಗಿಯುವ ಮುನ್ನವೇ ಯೋನೆ ವಿಸ್ಸಾ ಗಳಿಸಿದ ಗೋಲಿನ ನೆರವಿನಿಂದ ಆಫ್ರಿಕನ್ ತಂಡ ಪಂದ್ಯವನ್ನು ಸಮಬಲಗೊಳಿಸಿತು.ಇದೀಗ ರೊನಾಲ್ಡೊ ಅವರಿಗೆ ವಿಶ್ವದ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಫ್ರಾನ್ಸ್ ಫುಟ್ಬಾಲ್ ದಂತಕಥೆ ಥಿಯೆರಿ ಹೆನ್ರಿ ಅವರಂತೂ ಇದು ತೀವ್ರ “ಸ್ವಾರ್ಥಿ ಆಟ” ಎಂದು ಜರೆದಿದ್ದಾರೆ. ಪಂದ್ಯದಲ್ಲಿ ರೊನಾಲ್ಡೊ ಕಳಪೆ ಪ್ರದರ್ಶನ ನೀಡಿದ್ದು, ಸುಲಭ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದರು. ಫುಟ್ಬಾಲ್ ತಜ್ಞರಾಗಿ ಹೆನ್ರಿ ಮಾತನಾಡಿ, ರೊನಾಲ್ಡೊ ತಂಡದ ಗೆಲುವಿಗಿಂತ ಸ್ವತಃ ಗೋಲು ಗಳಿಸುವುದರ ಕಡೆಯೇ ಹೆಚ್ಚು ಗಮನ ಹರಿಸಿದ್ದರು. ಅವರು ಬ್ರೂನೋ ಫೆರ್ನಾಂಡಿಸ್ಗೆ ಪಾಸ್ ನೀಡಿದ್ದರೆ ಪೋರ್ಚುಗಲ್ ಸುಲಭವಾಗಿ ಗೋಲು ಗಳಿಸಬಹುದಿತ್ತು ಎಂದು ಹೆನ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆಯಿಂದಲೂ ಬಹುತೇಕ ಇದೇ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.ವಿಶ್ವದ 46ನೇ ಶ್ರೇಯಾಂಕದ ತಂಡದ ವಿರುದ್ಧದ ಪಂದ್ಯವು ಈ ಗುಂಪಿನಲ್ಲಿ ಪೋರ್ಚುಗಲ್(ವಿಶ್ವದ ನಂ 5) ಗೆ ಅತ್ಯಂತ ಸುಲಭದ ಪಂದ್ಯ ಎಂದು ಭಾವಿಸಲಾಗಿತ್ತು. ಆದರೆ ಈ ಫಲಿತಾಂಶದಿAದಾಗಿ ಪೋರ್ಚುಗಲ್ನ ನಾಕೌಟ್ ಹಂತದ ಅರ್ಹತೆಯ ಹಾದಿ ತುಸು ಕಠಿಣವಾಗಿದೆ.



