ಎ.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ, ಶ್ರೀನಿವಾಸ್ ಜಯರಾಮ್ ರಚನೆ & ನಿರ್ದೇಶನದ “ಪತ್ತೇದಾರಿ” ಚಿತ್ರದ ಪೋಸ್ಟರ್ ಅನಾವರಣಗೊಂಡಿತು.ಶೀರ್ಷೀಕೆಯೇ ತಿಳಿಸುವಂತೆ ಇದೊಂದು ಕ್ರೈಂ ಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕ್ರೈಂ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಚಿತ್ರಕಥೆ ಬೇರೆ ರೀತಿಯಲ್ಲಿರುತ್ತದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಶ್ರೀನಿವಾಸ್ ಜಯರಾಮ್ ತಿಳಿಸಿದರು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ. ಕನ್ನಡ ಚಿತ್ರಗಳನ್ನು ನೋಡಿ ನಟನೆ ಕಲಿತಿದ್ದೇನೆ. ಎಂದರು ನಾಯಕ!!, ಕಥೆ ಹಾಗೂ ನನ್ನ ಪಾತ್ರ ಎರಡು ಚೆನ್ನಾಗಿದೆ ಎಂದು ನಟಿ ರೂಪ ಹೇಳಿದರು.
ಈ ಹಿಂದೆ ನಿರ್ದೇಶಕರು ಹಾಗೂ ನಾಯಕರ ಜೊತೆಗೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲೂ ನಟಿಸುತ್ತಿದ್ದೇನೆ ಎಂದು ನಟ ಕಾಕ್ರೋಜ್ ಸುಧೀ ತಿಳಿಸಿದರು.
`ಪತ್ತೇದಾರಿ’ ಪೋಸ್ಟರ್ ಅನಾವರಣ



