ನವದೆಹಲಿ: ನೀಟ್ ಮರುಪರೀಕ್ಷೆ ಹಿನ್ನೆಲೆ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ಇದೀಗ ತೆರವುಗೊಳಿಸಲಾಗಿದ್ದು, ಮೊದಲಿನಂತೆ ಬಳಕೆದಾರರಿಗೆ ಟೆಲಿಗ್ರಾಂ ಸೇವೆ ಲಭ್ಯವಾಗುತ್ತಿದೆ.ಸದ್ಯ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ನಲ್ಲಿ ಟೆಲಿಗ್ರಾಂ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಮೊದಲಿನಂತೆ ಮೆಸೇಜ್ ಕಳಿಸಬಹುದು ಎಂದು ಬಳಕೆದಾರರು ತಿಳಿಸಿದ್ದಾರೆ. ಇನ್ನೂ ಕೆಲ ಬಳಕೆದಾರರು ಚಾಟ್ ಓಪನ್ ಮಾಡಲು ಹಾಗೂ ಮೆಸೇಜ್ ಕಳುಹಿಸಲು ಸಮಸ್ಯೆ ಎದುರಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಸಲು ಆಪ್ ರಿಫ್ರೆಶಿಂಗ್ ಪ್ರಕ್ರಿಯೆ ನಡೆಯುತ್ತಿದೆ.



