ಐಪಿಎಲ್ ವೇಳೆ ಆಟಗಾರರ ಸುರಕ್ಷತೆ ಮತ್ತು ಪಂದ್ಯದ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇರಿಸಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬAದ ಕೆಲವು ಅಶಿಸ್ತಿನ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಎಲ್ಲಾ 10 ಫ್ರಾಂಚೈಸಿಗಳಿಗೆ 7 ಪುಟಗಳ ವಿಸ್ತೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹನಿ ಟ್ರ್ಯಾಪ್ ಬಗ್ಗೆ ಎಚ್ಚರಿಕೆ: ಆಟಗಾರರು ಮತ್ತು ಸಿಬ್ಬಂದಿಗಳು `ಹನಿ ಟ್ರಾ÷್ಯಪ್ ಜಾಲಕ್ಕೆ ಬೀಳದಂತೆ ಬಿಸಿಸಿಐ ಎಚ್ಚರಿಸಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹೊರಗಡೆ ವ್ಯವಹರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.
ಹೋಟೆಲ್ ಕೊಠಡಿಗಳಿಗೆ ನಿರ್ಬಂಧ: ತಂಡದ ವ್ಯವಸ್ಥಾಪಕರ ಪೂರ್ವಾನುಮತಿ ಇಲ್ಲದೆ ಯಾವುದೇ ಹೊರಗಿನ ವ್ಯಕ್ತಿಗಳು ಆಟಗಾರರ ಅಥವಾ ಕೋಚಿಂಗ್ ಸಿಬ್ಬಂದಿಯ ಹೋಟೆಲ್ ಕೊಠಡಿಗಳಿಗೆ ಪ್ರವೇಶಿಸುವಂತಿಲ್ಲ. ಭೇಟಿಗಾಗಿ ಹೋಟೆಲ್ನ ಸಾರ್ವಜನಿಕ ಸ್ಥಳಗಳನ್ನು ಮಾತ್ರ ಬಳಸಲು ಸೂಚಿಸಲಾಗಿದೆ.
ಸಂಚಾರಕ್ಕೆ ಅನುಮತಿ ಕಡ್ಡಾಯ: ಆಟಗಾರರು ಅಥವಾ ಸಿಬ್ಬಂದಿ ಹೋಟೆಲ್ ಆವರಣದಿಂದ ಹೊರಗೆ ಹೋಗಬೇಕಾದಲ್ಲಿ, ನಿಯೋಜಿತ ಭದ್ರತಾ ಸಂಪರ್ಕ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡುವುದು ಕಡ್ಡಾಯ.
ಮಾನ್ಯತಾ ಕಾರ್ಡ್ಗಳ ಬಳಕೆ: ಸ್ಟೇಡಿಯಂ, ಹೋಟೆಲ್ ಮತ್ತು ಅಭ್ಯಾಸದ ಅವಧಿಯಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ತಮ್ಮ ಮಾನ್ಯತಾ ಕಾರ್ಡ್ಗಳನ್ನು ಧರಿಸಿರಬೇಕು. ಇದು ಭದ್ರತಾ ತಪಾಸಣೆಯನ್ನು ಸುಗಮಗೊಳಿಸಲು ಸಹಕಾರಿ.
ಮಾಲೀಕರಿಗೆ ಡಗೌಟ್ ನಿರ್ಬಂಧ: ಪಂದ್ಯ ನಡೆಯುತ್ತಿರುವ ಸಮಯದಲ್ಲಿ ತಂಡದ ಮಾಲೀಕರು ಡಗೌಟ್ನಲ್ಲಿರುವ ಆಟಗಾರರು ಅಥವಾ ಮ್ಯಾನೇಜರ್ಗಳೊಂದಿಗೆ ಸಂವಹನ ನಡೆಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಂದ್ಯದ ಮೇಲೆ ಯಾವುದೇ ಬಾಹ್ಯ ಪ್ರಭಾವ ಬೀರದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಐಪಿಎಲ್ನಂತಹ ದೊಡ್ಡ ಮಟ್ಟದ ಟೂರ್ನಿಯಲ್ಲಿ ಭ್ರಷ್ಟಾಚಾರ ಮತ್ತು ಫಿಕ್ಸಿಂಗ್ನAತಹ ಚಟುವಟಿಕೆಗಳು ನಡೆಯದಂತೆ ತಡೆಯುವುದು ಬಿಸಿಸಿಐನ ಮುಖ್ಯ ಉದ್ದೇಶವಾಗಿದೆ.



