ಅಹ್ಮದಾಬಾದ್: ಪ್ರತಿಷ್ಠಿತ ಟಿ20 ವಿಶ್ವಕಪ್ಗಾಗಿ ಭಾರತೀಯ ಕ್ರಿಕೆಟ್ ತಂಡದ ನೂತನ ಜೆರ್ಸಿಯನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ನಾಯಕ ರೋಹಿತ್ ಶರ್ಮ ಸಮ್ಮುಖದಲ್ಲಿ ಜೆರ್ಸಿ ಅನಾವರಣಗೊಳಿಸಲಾಯಿತು.
`ನಮ್ಮ ತಂಡದ ಹೊಸ ಬಣ್ಣಗಳನ್ನು ಸ್ವಾಗತಿಸುವ ಸಮಯವಿದು ಎಂದು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿ’ಕೊಂಡಿದೆ. ಅದರಂತೆ, ಭುಜದ ಭಾಗದಲ್ಲಿ ಕೇಸರಿ ಬಣ್ಣ, ಕಾಲರ್ ಸಮೀಪ ತ್ರಿವರ್ಣ ಮತ್ತು ಇನ್ನುಳಿದಂತೆ ನೀಲಿ ಬಣ್ಣದಲ್ಲಿರುವ ಡ್ರೀಮ್11 ಪ್ರಾಯೋಜಕತ್ವದಲ್ಲಿರುವ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.