ಬೆಂಗಳೂರು: ಶ್ವಾನ ಸಾಕಾಣಿಕೆ ಮಾಲೀಕವೆಂಕಟೇಶ್(45) ಎಂಬಾತನನ್ನು ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿರುತ್ತಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಚಂದ್ರಪುರ ಆಟದ ಮೈದಾನದ ಬಳಿ ನಿನ್ನೆ ಸಂಜೆ ಮೃತ ವೆಂಕಟೇಶ್ ವಾಯು ವಿಹಾರ ನಡೆಸುತ್ತಿದ್ದಾಗ ಆರೋಪಿಗಳಾದ ನಂದ ಮತ್ತು ಪವನ್ ಕುಮಾರ್ ರವರ ನಡುವೆ ಮಾತಿನ ಚಟುವಕಿ ನಡೆದು ಈ ಘಟನೆ ಸಂಭವಿಸಿರುತ್ತದೆ.
ಆರೋಪಿಗಳಾದ ಪವನ್ ಕುಮಾರ್ ಬಿಕಾಂ ಓದಿದ್ದು, ಮತ್ತು ನಂದ ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಡ್ಯಾನ್ಸರ್ ಆಗಿ ವೃತ್ತಿ ನಡಸುತ್ತಿದ್ದರು.ಆರೋಪಿಗಳಿಬ್ಬರು ನಿನ್ನೆ ಸಂಜೆ ಬಿಯರ್ ಕುಡಿಯುತ್ತಿದ್ದಾಗ ಮೃತ ವೆಂಕಟೇಶ್ ತಿಳುವಳಿಕೆ ಹೇಳಲು ಕರೆದಾಗ ಗಲಾಟೆ ಸಂಭವಿಸಿ ಕೊಲೆ ಮಾಡಿರುತ್ತಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ತಿಳಿಸಿರುತ್ತಾರೆ.