ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಮತ್ತು ಅನುಮಾನಕ್ಕೆ ಗಲಾಟೆ ಶುರುವಾಗಿ ಬಿಯರ್ ಬಾಟಲಿನಿಂದ ಹೆಂಡತಿಗೆ ಚುಚ್ಚಿ ಕೊಲೆ ಮಾಡಿ ತಾನು ಸಹ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದಲ್ಲಿ ಮಧ್ಯರಾತ್ರಿ ಮೂರುವರೆ ಸುಮಾರಿಗೆ ಜರುಗಿದೆ.ಆಟೋರಿಕ್ಷಾ ಚಾಲಕರಾಗಿರುವ ರಾಘವೇಂದ್ರ (38), ತನ್ನ ಹೆಂಡತಿ ಶ್ರುತಿ (30), ಬಿಯರ್ ಬಾಟಲ್ ನಿಂದ ಚುಚ್ಚಿ ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ಹೆಚ್‌ಎಎಲ್ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ದಾವಣಗೆರೆಯ ಅಜ್ಜ ಅಜ್ಜಿ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.