ಬೆಂಗಳೂರು: ರಾಜ್ಯದ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಈವರೆಗೂ ಮಹಿಳಾ ಖೋಟಾದಡಿಯಲ್ಲಿ ಸ್ಥಾನ ಭರ್ತಿ ಮಾಡಲು ಆಗದೇ ವಿಲವಿಲ ಎಂದು ಒದ್ದಾಡುತ್ತಿರುವಾಗಲೇ, ಕಾಂಗ್ರೆಸ್ ಪಾಳಯದಲ್ಲಿ ಹೊಸದಾದ ಹೆಸರು, ಮಹಿಳಾ ಸಚಿವ ಸ್ಥಾನಕ್ಕೆ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ Dark Horse ಆಗಿ ಒಬ್ಬ ಮಹಿಳೆ ಗುರುತಿಸಿಕೊಂಡಿದ್ದು ಹೈಕಮಾಂಡ್ ನಾಯಕರ ಕಣ್ಮುಂದೆ ಆಗಾಗ್ಗೆ ಅವರ ಹೆಸರು ಹಾಗೂ ಚಿತ್ರ ಬಂದು ಬಂದು ಹೋಗುತ್ತಿದೆ. ಪಕ್ಷದಲ್ಲಿ ಸದ್ಯ ಕಾರ್ಯಕರ್ತೆಯಾಗಿ ಮಾತ್ರ ಗುರುತಿಸಿಕೊಂಡಿರುವ ಅವರು, ಹೈಕಮಾಂಡ್ ನಾಯಕರ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿರುವ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಕಣ್ಣಲ್ಲಿ Blue Eye Lady ಎಂದೇ ಚರ್ಚೆಗಳು ಆರಂಭವಾಗಿದೆ. ಹಾಗಾದ್ರೆ ಯಾರವರು ಅಂತಾ ಯೋಚನೆ ಮಾಡುತ್ತಿದ್ದೀರಾ? ಅವರೇ ತೇಜಸ್ವಿನಿ ರಮೇಶ್. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನೇ ಚುನಾವಣಾ ಆಖಾಡದಲ್ಲಿ ಸೋಲಿಸಿ, ಸಂಸತ್ ಪ್ರವೇಶಿಸಿದ ಧೀಮಂತ ಮಹಿಳೆ. ಯಾರೂ ಕೂಡ ನಿರೀಕ್ಷೆ ಮಾಡದ ತೇಜಸ್ವಿನಿ ರಮೇಶ್, ಮಾಜಿ ಪ್ರಧಾನಿಗಳನ್ನೇ ಸೋಲಿಸಬಲ್ಲವರು ಆಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಇನ್ನು ಸೋನಿಯಾ ಗಾಂಧಿ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು, ಒಂದು ಬಾರಿ ಸಂಸದೆಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಇನ್ನು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ತೇಜಸ್ವಿನಿ ರಮೇಶ್, ಲೋಕಸಭೆಯಲ್ಲಿ ಮಾಡಿದ ಪ್ರಸ್ತಾಪಗಳನ್ನು ಕಂಡು ಬಿಜೆಪಿಯ ನಾಯಕರುಗಳೇ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ಇತಿಹಾಸ. ಇವರ ಬಗ್ಗೆ ನಾವು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೇಳುತ್ತಿರುವುದಕ್ಕೆ ನಮಗೂ ಒಂದು ಹೆಮ್ಮೆ ಇದೆ. ಅದು ಏನೆಂದರೆ ಅವರು ಮೂಲತಃ ಪತ್ರಕರ್ತರು ಎಂಬುದು. ಖಾಸಗಿ ವಾಹಿನಿಯಲ್ಲಿ ಒನ್ ಟು ಒನ್ ಸಂದರ್ಶನದ ಮೂಲಕ ಘಟಾನುಘಟಿ ರಾಜಕಾರಣಿಗಳಿಗೆ ಮಾತಿನಲ್ಲೇ ಬಾಣಗಳನ್ನು ಬಿಟ್ಟು, ನೇರಾ ನೇರ ಪ್ರಶ್ನೆಗಳನ್ನು ಖಡಕ್ ಆಗಿ ಕೇಳುತ್ತಿದ್ದವರು ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದು ನಮಗೂ ಹೆಮ್ಮೆಯ ವಿಶೇಷವೇ. ಅದು ಒಂದು ಕಡೆ ಇರಲೀ. ಈಗ ಅವರು ಆಚಿಡಿಞ ಊoಡಿse ಏಕೆ? ಎಂಬುದನ್ನೇ ಸೂಕ್ಷ್ಮವಾಗಿ ಗಮನಿಸಿದ್ರೆ, ಸೋನಿಯಾ ಗಾಂಧಿ ಅವರ ಆಪ್ತರಾಗಿ ದೆಹಲಿ ಮಟ್ಟದಲ್ಲಿ ದೊಡ್ಡ ಪ್ರಮಾಣದ ಹೆಸರು ಮಾಡುವುದರ ಜೊತೆಗೆ ಪಕ್ಷದಲ್ಲಿ ಹಿಡಿತ ಸಾಧಿಸಿದ್ದರು ತೇಜಸ್ವಿನಿ ರಮೇಶ್. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರನ್ನು ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ. ಅನಂತ್‌ಕುಮಾರ್ ಅವರು ಕಮಲ ತೆಕ್ಕೆಗೆ ಕರೆ ತಂದಿದ್ದರು. ಬಿಜೆಪಿಯಲ್ಲಿ ಒಕ್ಕಲಿಗ ಹಾಗೂ ಮಹಿಳಾ ಖೋಟಾದಡಿಯಲ್ಲಿ ಅವರಿಗೆ ವಿಧಾನಪರಿಷತ್ ಸದಸ್ಯೆ ಸ್ಥಾನವನ್ನು ಪಕ್ಷ ಕೊಟ್ಟಿತ್ತು. ಒಳ್ಳೆಯ ವಾಗ್ಮಿಗಳಾಗಿ ಮಾಧ್ಯಮಗಳ ಮುಂದೆ ಯಾವುದೇ ಚರ್ಚಾ ವಿಷಯವಾಗಲೀ, ತಮ್ಮ ಪಕ್ಷದ ನಿರ್ಧಾರಗಳು ಹಾಗೂ ನಿರ್ಣಯಗಳನ್ನ ಖಡಕ್ ಆಗಿ ಮಂಡನೆ ಮಾಡುತ್ತಿದ್ರು ತೇಜಸ್ವಿನಿ ರಮೇಶ್. ಇನ್ನು ದಿನ ಕಳೆದಂತೆ ಪಕ್ಷದಲ್ಲಿ ಆದ ಬದಲಾವಣೆಗಳಿಂದ ಕೊಂಚ ಅಸಮಾಧಾನಗೊಂಡಿದ್ದಂತಹ ಅವರನ್ನು ಮತ್ತೆ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಸದ್ಯ ಅವರೊಬ್ಬ ಸಾಮಾನ್ಯ ಕಾರ್ಯಕರ್ತೆಯಂತೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಮಹಿಳಾ ಖೋಟಾದಡಿಯಲ್ಲಿ ಅವರಿಗೆ ಸ್ಥಾನಮಾನ ಸಿಗುವ ನಿರೀಕ್ಷೆಗಳು ಹೆಚ್ಚಾಗಿದ್ದು, ಹಾಲಿ ವಿಧಾನಸಭೆಯ 5 ಮಂದಿ ಕಾಂಗ್ರೆಸ್‌ನ ಶಾಸಕರಿಯರು ಹಾಗೂ 4 ಮಂದಿ ವಿಧಾನಪರಿಷತ್ ಸದಸ್ಯರ ಪಟ್ಟಿಯಲ್ಲಿ ಇರದ ಇವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯತೆಗಳು ದಟ್ಟವಾಗಿದೆ. ಮಂತ್ರಿಗಳಾದವರು ಸದನದ ಎರಡು ಮನೆಗಳ ಪೈಕಿ ಒಂದರಲ್ಲಿ ಸದಸ್ಯರಾಗಿರಬೇಕು. ಹೀಗಾಗಿ, ಸದ್ಯ ಸರ್ಕಾರ ನಾಮನಿರ್ದೇಶನ ಮಾಡಬೇಕಾಗಿರುವ ಖಾಲಿಯಿರುವ 4 ವಿಧಾನಪರಿಷತ್ ಸ್ಥಾನಗಳ ಪೈಕಿ ಇವರನ್ನು ಆಯ್ಕೆ ಮಾಡಬಹುದು. ಮಂತ್ರಿ ಮಂಡಲಕ್ಕೆ ಸಲೀಸಾಗಿ ಅವರನ್ನು ಸೇರ್ಪಡೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗಿದೆ. ಒಂದು ವೇಳೆ ಏನಾದರೂ ಇದು ನಡೆದಿದ್ದೇ ಆದ್ರೆ, ಪಕ್ಷಕ್ಕೆ ಅದು ಆನೆ ಬಲ ಬಂದAತಾಗುವ ವಾತಾವರಣ ಸೃಷ್ಠಿಸುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ತೇಜಸ್ವಿನಿ ರಮೇಶ್ ಅನುಭವಿ ರಾಜಕಾರಣಿ. ಒಮ್ಮೆ ಸಂಸದೆಯಾಗಿ, ಒಮ್ಮೆ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದವರು. ಸಂಘಟನೆಗೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಸಮುದಾಯವನ್ನು ಒಗ್ಗೂಡಿಸುವ ಶಕ್ತಿ ಇರುವವರು. ಇನ್ನು ಇದೆಲ್ಲದರ ಜೊತೆಗೆ ಹೈಕಮಾಂಡ್ ನಾಯಕರ ಮುಂದೆ ಹೆಸರನ್ನು ಯಶಸ್ವಿಯಾಗಿ ಉಳಿಸಿಕೊಂಡಿದ್ದು, ಅವರ ಕಣ್ಣಲ್ಲೂ ಒಳ್ಳೆಯ ಮಹಿಳೆ ಎಂಬ ಸರ್ಟಿಫಿಕೇಟ್ ಇದೆ. ಇದೇ ನಡೆದ್ರೆ, ವಿಧಾನಸಭೆಯ 5 ಮಂದಿ ಶಾಸಕಿಯರು ಹಾಗೂ ವಿಧಾನಪರಿಷತ್‌ನ 4 ಮಹಿಳಾ ಸದಸ್ಯರ ಜೊತೆಗೆ ಇವರು ಕೂಡ ಸೇರ್ಪಡೆ ಆಗಲಿದ್ದು, ಮಂತ್ರಿ ಆಗಿ ಕಾರ್ಯನಿರ್ವಹಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.ಒಟ್ಟಾರೆ, ಮಾಜಿ ಸಂಸದೆಯಾಗಿ, ಮಾಜಿ ವಿಧಾನಪರಿಷತ್ ಸದಸ್ಯೆಯಾಗಿ ಅನುಭವ ಪಡೆದಿರುವ ತೇಜಸ್ವಿನಿ ರಮೇಶ್ ಬಗ್ಗೆ ಪಕ್ಷದಲ್ಲಿ ಗುಸುಗುಸು ಆರಂಭವಾಗಿದ್ದು, ಇವರು ಮಂತ್ರಿ ಸ್ಥಾನಕ್ಕೆ ಆರ್ಹರು ಎಂಬ ಮಾತುಗಳು ಪಕ್ಷದ ಚೌಕಟ್ಟಿನಲ್ಲಿ ಚರ್ಚೆಯಾಗುತ್ತಿದೆ.ಇನ್ನು ಸದ್ಯದ ಪರಿಸ್ಥಿತಿಯಲ್ಲಿ ತೇಜಸ್ವಿನಿ ರಮೇಶ್ Dark Horse ಆಗಿದ್ದು ಅವರು ಕ್ಯಾಬಿನೆಟ್ ಸೇರ್ಪಡೆ ಆಗುತ್ತಾರೋ, ಇಲ್ಲವೋ ಮುಂದೆ ತಿಳಿಯಬೇಕಿದೆ. ಅದೇನೇ ಇರಲಿ, ಪತ್ರಕರ್ತರೊಬ್ಬರು ಮಂತ್ರಿ ಸ್ಥಾನಕ್ಕೆ ಬರುತ್ತಾರೆ ಎಂಬುದೇ ಅತಿ ಹೆಚ್ವು ಖುಷಿ ಕೊಡುವ ವಿಚಾರ.