LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದಿಂದ ರಾಜ್ಯೋತ್ಸವ, ನೂತನ ಸಂಘ ಉದ್ಘಾಟನೆ

ಬೆಂಗಳೂರು: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ನೂತನ ಸಂಘದ ಉದ್ಘಾಟನಾ ಸಮಾರಂಭ.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಲೋಕೋ ಪಯೋಗಿ ಇಲಾಖೆಯ ಮುಖ್ಯ ಅಭಿಯಂತರಾದ ಸಿ.ಮಂಜಪ್ಪರವರು, ಚಿತ್ರ ನಿರ್ದೇಶಕಾದ ಓಂ ಸಾಯಿಪ್ರಕಾಶ್, ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲ,ನಟಿ ಸಂಜನಾ ಗಲ್ರಾನಿ, ಚಿತ್ರ ಸಂಗೀತ ನಿರ್ದಶಕ ರಾಜೇಶ್ ರಾಮನಾಥ್, ನಟಿ ಕುಮಾರಿ ಮೋಕ್ಷಾ ಕುಶಾಲ್ ರವರು. ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎ.ಸೋಮಶೇಖರ್ ಉದ್ಘಾಟನೆ ನೇರವೆರಿಸಿದರು.

ನಿರ್ದೇಶಕ ಓಂಪ್ರಕಾಶ್ ರವರು ಮಾತನಾಡಿ ಚಲನಚಿತ್ರ ರಂಗಕ್ಕೆ ಸಾಯಿಬಾಬರ ಆಶೀರ್ವಾದ ಇರಲಿ, ಪ್ರೀತಿ ಎಲ್ಲಿ ಇರುತ್ತದೆ ಅಲ್ಲಿ ನಾವು ಇರುತ್ತೇವೆ. ಆಂಧ್ರ ಹುಟ್ಟಿ ನಂತರ ಕರ್ನಾಟಕದಲ್ಲಿ ಬಂದು ನೆಲಸಿದೆ ಕನ್ನಡಿಗರ ಪ್ರೀತಿ ನಾನು ಮನಸೋತೆ.ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ 24 ವಿವಿಧ ಕೆಲಸಗಳಲ್ಲಿ ಚಿತ್ರನಿರ್ಮಾಣ ಕಾರ್ಯದಲ್ಲಿ ತೊಡಗಿರುತ್ತಾರೆ, ಅವರಿಗೆ ಅನ್ನ ಹಾಕುವವರು ನಿರ್ಮಾಪಕರು. ನಿರ್ಮಾಪಕರು ಅನ್ನದಾತರು ಎಂದು ಡಾ||ರಾಜ್ ಕುಮಾರ್ ರವರು ಹೇಳಿದ್ದರು. ಚಿತ್ರರಂಗದಲ್ಲಿರುವ ನಾವೆಲ್ಲರು ಒಂದೇ.

ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಅಚರಣೆ ಮಾಡುವುದಿಲ್ಲ ಅದರೆ ಕರ್ನಾಟಕದಲ್ಲಿ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ನನ್ನ ಕೊನೆ ಉಸಿರು ಇರುವರಗೆ ನಾನು ತಾಯಿ ಭುವನೇಶ್ವರಿಯ ಸೇವೆ ಮಾಡುತ್ತೇನೆ, ಬಾಯಿ ಮಾತಲ್ಲಿ ಕನ್ನಡ ಏನ್ನಬೇಡಿ, ಹೃದಯದಿಂದ ಕನ್ನಡದಲ್ಲಿ ಮಾತಾಡಿ ಎಂದು ಹೇಳಿದರು.
ಮುಖ್ಯ ಅಭಿಯಂತರ ಸಿ.ಮಂಜಪ್ಪ ರವರು ಮಾತನಾಡಿ ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ ಓದಿದ್ದು, ನಂತರ ಸರ್ಕಾರಿ ಸೇವೆ ಸೇರಿದೆ ನಮ್ಮ ಇಲಾಖೆಯಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ವ್ಯವಹಾರ ನಡೆಯುತ್ತಿದೆ. ವಿಧಾನಸೌಧ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹೇಳಿದರು.

ಸಾಧುಕೋಕಿಲ ರವರು ಮಾತನಾಡಿ ಕನ್ನಡ ಭಾಷೆ ಉಳಿಯಲು ಕನ್ನಡ ಚಲನಚಿತ್ರಗಳನ್ನು ನೋಡಿ, ಅಂತರಾಷ್ಟ್ರೀಯ ಚಲನಚಿತೋತ್ಸವ ಬೆಂಗಳೂರಿನಲ್ಲಿ ನಡೆಯಲಿದೆ 250ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.ಡಾ||ಎ.ಸೋಮಶೇಖರ್ ರವರು ಮಾತನಾಡಿ ಕರ್ನಾಟಕ ರಾಜ್ಯ ಲೋಕಪಯೋಗಿ ಇಲಾಖೆಗೆ 169ಗಳ ಇತಿಹಾಸವಿದೆ. ರಾಜ್ಯದ ಉತ್ತಮ ರಸ್ತೆ ಸಂಪರ್ಕ ಮತ್ತು ಅಭಿವೃದ್ದಿಗಳನ್ನು ಮಾಡುತ್ತಿರುವ ನಮ್ಮ ಇಲಾಖೆ ಅಧಕಾರಿ ಮತ್ತು ನೌಕರರಿಗೆ ಉಪಯೋಗಕ್ಕೆ ಸಮುದಾಯ ಭವನವಿಲ್ಲ. ಸಚಿವರಾದ ಜಾರಕಿಹೊಳಿ ರವರಿಗೆ ಮನವಿ ನೀಡಲಾಗಿದೆ 250ಅಡಿ ಅಗಲ ಮತ್ತು ಉದ್ದವಿರುವ ಸಂಘಕ್ಕೆ ನೀಡಿದರೆ ಸಮುದಾಯ ಭವನ ಮಾಡಲಾಗುವುದು ಎಂದು ಹೇಳಿದರು.

ಕಡಬಗೆರೆ ಮುನಿರಾಜು ತಂಡದವರಿಂದ ಸುಗಮ ಸಂಗೀತ ಮತ್ತು ಗಣ್ಯ ಮಹನೀಯರುಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ವಿ.ವಿ.ಶಿವರುದ್ರಯ್ಯ,ಸಹಾಯಕ ಕಾರ್ಯಪಾಲಕ ಅಭಿಯಂತರಾದ ಪ್ರಿಯದರ್ಶಿನಿಗೆ ರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಪ್ರಧಾನ ಅಭಿಯಂತರಾದ ಪ್ರದೀಪ್ ಮಿತ್ರ ಮಂಜುನಾಥ್, ಮುಖ್ಯ ಯೋಜನಾಧಿಕಾರಿಗಳಾದ ಶಂಕರಗೌಡ ಎಫ್ ಪಾಟೀಲ್, ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್, ಯೋಜನಾ ನಿರ್ದೇಶಕರಾದ ಪುರುಷೋತ್ತಮ್ ದಾಸ್ ಹೆಗ್ಗಡೆ, ಮುಖ್ಯ ಯೋಜನಾಧಿಕಾರಿಗಳಾದ ಜಗನ್ನಾಥ್ ಹಲಿಂಗೆ, ಮುಖ್ಯ ಅಭಿಯಂತರುಗಳಾದ ಪ್ರಕಾಶ್ ಶ್ರೀಹರಿ, ಸಂಜೀವ್ ರೆಡ್ಡಿ ವಿ.ಮರಡ್ಡಿ, ಹೆಚ್.ಸಿ.ರಮೇಂದ್ರ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು