LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಕರಾವಳಿಯತ್ತ ಕಣ್ಣು

ಮಂಗಳೂರು ಸಂಪುಟ ಸಭೆಯ ನಿರ್ಧಾರದತ್ತ ಎಲ್ಲರ ಚಿತ್ತ



ಮಂಗಳೂರು: ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರಗಳತ್ತ ಎಲ್ಲರ ಕುತೂಹಲ ಮೂಡಿಸಿದೆ. 
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಮಂಗಳೂರಿನ ಪ್ರಜಾಸೇವಾ ಕಚೇರಿಯಲ್ಲಿ ನಡೆದಿದೆ. ಸುಮಾರು 16 ಪ್ರಮುಖ ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬರಲಿವೆ. ಸಂಪುಟ ಸಭೆಯಲ್ಲಿ ಏನು ನಿರ್ಧಾರಗಳು ಹೊರಬೀಳಬಹುದು ಎಂಬ ಚರ್ಚೆ ನಡೆದಿದೆ. 
ಸಮಗ್ರ ಕರಾವಳಿ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯ ನಿರ್ಧಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಇಂದು ಚರ್ಚೆ ನಡೆಯಲಿದೆ. 
ಸಭೆಗೂ ಮುನ್ನ ಮಂಗಳೂರಿನ ಸರ್ಕೀಟ್ ಹೌಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾವು ಜನರ ಬದುಕಿಗಾಗಿ ಕೆಲಸ ಮಾಡುತ್ತೇವೆ. ಅವರ ಭಾವನೆಗಳ ಮೇಲಲ್ಲ ಎಂದಿರುವ ಅವರು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜಕೀಯ ನಾಯಕರಿಗೆ ಸೂಕ್ಷö್ಮವಾಗಿ ತಿಳಿಸಿದ್ದಾರೆ. 
ಎಲ್ಲರ ಒಳಿತಿಗಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ಹೇಳಿರುವ ಅವರು, ಸಂಪುಟ ಸಭೆ ನಿರ್ಧಾರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ನಮಗೆ ಜನರ ಬದುಕು ಮುಖ್ಯ, ನಾವು ಎಲ್ಲರ ಒಳಿತಿನ ಮೇಲೆ ಚಿಂತನೆ ನಡೆಸಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. 
ಇದೇ ಸಂದರ್ಭದಲ್ಲಿ ಸಚಿವ ಎಚ್. ಮುನಿಯಪ್ಪ ಮಾತನಾಡಿ, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ರಾಜ್ಯದ ಇತಿಹಾಸದಲ್ಲೇ ಇದು ಮಹತ್ವದ ಸಭೆಯಾಗಿದೆ ಎಂದು ಅವರು ತಿಳಿಸಿದ್ದಾರೆ. 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST