LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವಚನ ಭ್ರಷ್ಟನಾಗಲಾರೆ: ಶಾಸಕ ಪ್ರಿಯಾ ಕೃಷ್ಣ

ಬೆಂಗಳೂರು: ಕಾಮಾಕ್ಷಿಪಾಳ್ಯದ ವೀರಶೈವ ಸಮಾಜ ಕ್ಷೇಮಾಭಿವೃದ್ದಿ ಟ್ರಸ್ಟ್ ಗೆ ನಿವೇಶನ ನೀಡುವುದಾಗಿ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಚುನಾ ವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದೇನೆ. ಮಾತು ಕೊಟ್ಟಿದ್ದೇನೆ. ಅದರಂತೆ ತಮ್ಮ ಸಹಕಾರವು ನನಗೆ ಸಿಕ್ಕಿದೆ.ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ.ನೀವೇ ನುವೇಶನ ಹುಡುಕಿ.

ಅದು ಸಿಗದಿದ್ದರೇ ನನ್ನ ಸ್ವಂತ ಖರ್ಚಿನಿಂದ ನಿವೇಶನ ಕೊಡಿಸುತ್ತೇನೆ.ಎಂದು ತಿಳಿಸಿದರು.ವಚನಭ್ರಷ್ಟನಾಗಲಾರೆ ಎಂದರು.ಮಕ್ಕಳನ್ನ ಮಾಲಿಗೆ ಕರೆದುಕೊಂಡು ಹೋಗುವಂತೆ ಮಠಗಳಿಗೂ ದೇವಸ್ಥಾನಗಳಿಗೂ ಕರೆದುಕೊಂಡು ಹೋಗಿ ಮಕ್ಕಳಿಗೆ ಸಂಸ್ಕಾರ ನೀಡಿ ಎಂದು ಕಿವಿಮಾತು ಹೇಳಿದರು.ವೀರಶೈವ ಕ್ಷೇಮಾಭಿವೃದ್ದಿ ಟ್ರಸ್ಟ್ ನ ಆಶ್ರಯದಲ್ಲಿ 22 ನೇ ವಾರ್ಷಿಕೋತ್ಸವ ಹಾಗೂ ಶ್ರಾವಣ ಮಾಸದ ಪ್ರಯುಕ್ತ ಸಂಜೆನಡೆದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು ತುಮಕೂರಿನ ತಪೋವನದ ಷ.ಬ್ರ.ಡಾ.ಶಿವಾನಂದಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಪೂಜೆ ಮಾಗಡಿ ಮುಖ್ಯರಸ್ತೆ ಯಲ್ಲಿರುವ ಧನಂಜಯ ಪ್ಯಾಲೇಸ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ ಉದ್ಗಾಟಿಸಿದರು.ಪಾಲಾಕ್ಷಯ್ಯ ಗುರೂಜಿ ರವರು ವೇದಘೋಷ ಮಾಡಿದರು. ಪ್ರಾರ್ಥನೆಯನ್ನು ಶ್ರೀಮತಿ ವಿಜಯಲಕ್ಷ್ಮಿ.ಮಾಡಿದ್ರು. ಕಾರ್ಯದರ್ಶಿಗಳಾದ ರೇಣುಕಪ್ರಸಾದ್ ವೇದಿಕೆಯ ಮೇಲಿದ್ದ ಗಣ್ಯರುಗಳನ್ನು ಸ್ವಾಗತಿಸಿದರು. ಟ್ರಸ್ಟ ನ ಅದ್ಯಕ್ಷರಾದ ಕೆ.ಆರ್.ಸಿದ್ದಲಿಂಗ ಆರಾದ್ಯ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.

22 ವರ್ಷದಿಂದ ಟ್ರಸ್ಟ್ ನಡೆದುಬಂದಿರುವ ಹಾದಿಯ ಬಗ್ಗೆ ಪ್ರಸ್ತಾಪಿಸಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಪ್ರಿಯಾಕೃಷ್ಣ ರವರು ಬಸವೇಶ್ವರ ದೇವಾಲಯಕ್ಕೆ ನೀಡಿರುವ ಆರ್ಥಿಕ ಸಹಾಯವನ್ನು ಸ್ಮರಿಸಿದರು. ಟ್ರಸ್ಟ ಗೆ ನಿವೇಶನವನ್ನು ನೀಡಬೇಕೆಂದು ಮನವಿ ಸಲ್ಲಿಸಿದರು. ಪ್ರಧಾನಕಾರ್ಯದರ್ಶಿಯಾದ ವಸಂತಕುಮಾರ್ ರವರು ಗಣ್ಯರುಗಳಿಗೆ ಶಾಲನ್ನಹಾಕುವ ಮೂಲಕ ಬರಮಾಡಿಕೊಂಡರು.

ಚನ್ನಪಟ್ಟಣದಣ ತಾಲ್ಲೂಕಿನ ಬೇವೂರಿನ ಷ.ಬ್ರ.ಮೃತ್ಯುಂಜಯಸ್ವಾಮೀಜಿ, ಮಳವಳ್ಳಿ ತಾಲ್ಲೂಕಿನಹೊಸಮಠ ಸರಗೂರಿನ ಶ್ರೀಗಳಾದ ಬಸವರಾಜೇಂದ್ರ ಶ್ರೀ, ಮತ್ತು ಮಾಗಡಿ ತಾಲ್ಲೂಕಿ ನಜಠದೇವರ ಮಠದ ಶ್ರೀಗಳಾದ ಇಮ್ಮಡಿ ಬಸವ ರಾಜ ಸ್ವಾಮಿಗಳು ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.ವಿಶ್ವಗಿನ್ನಿಸ್ ದಾಖಲೆ ಮಾಡಿರುವ ರಕ್ತಧಾನಿಗಳಾದ ಶ್ರೀಮತಿ ಮದುರಾ ಅಶೋಕ ಕುಮಾರ್ ರವರಿಗೆ ಮಾಜಿ ಮಹಾಪೌರರಾದ ಗಂಗಾಂಬಿಕೆ ಮಲ್ಲಿಕಾರ್ಜುನ್ ರವರು ಪ್ರಶಸ್ತಿಯನ್ನು ಪ್ರದಾನಮಾಡಿದರು.ಮದುರ ಅಶೋಕ್ ಕುಮಾರ್ ರವರ ಪರಿಚಯವನ್ನು ಟ್ರಸ್ಟ ನ ಖಜಾಂಚಿಯಾದ ಬಿ.ಎನ್.ಸಿದ್ದಲಿಂಗಪ್ಪಮಾಡಿದರು.

ಪ್ರತಿಭಾವಂತ ಮಕ್ಕಳಿಗೆ ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜ್ ವಿತರಿಸಿದರು ಸಿಟ್ರಿಕ್ ಸೌಲಭ್ಯಗಳ ಹಿರಿಯ ನಿರ್ದೇಶಕರಾದ ಕುಮಾರಶಿವಣ್ಣ.ಸಮಾಜ ಮುಖಂಡರಾದ ವಿಶ್ವನಾಥಯ್ಯ ಮತ್ತು ರವಿನಂದನ ವಿದ್ಯಾಸಂಸ್ಥೆಯ ಶಿವಣ್ಣ ಭಾಗವಹಿಸಿದ್ದರು. ನೂರಾರು ಸಮಾಜದ ಬಂಧುಗಳು ಹಾಜರಿದ್ದರು. ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ ರಕ್ತಧಾನ ಮಾಡುವಂತೆ ಸಭಿಕರಿಗೆ ಕರೆನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು