LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕೌರವ ವೆಂಕಟೇಶ್ ನಿರ್ದೇಶನದ ಕೊಕೇನ್

ಕೌರವ ವೆಂಕಟೇಶ್ ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ, ಇಂದು ದಕ್ಷಿಣ ಭಾರತದ ಹೆಸರಾಂತ ಫೈಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ.ಇದೆಲ್ಲಾ ಅನುಭವದಿಂದ ಈಗ ಹೊಸ ಪ್ರಯತ್ನ ಎನ್ನುವಂತೆ ಕೊಕೇನ್ ಸಿನಿಮಾಕ್ಕೆ ಸಾಹಸ ಮತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ.

ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ.ನಿರ್ದೇಶಕರ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಮೊದಲ ದೃಶ್ಯಕ್ಕೆ ಬಿ.ಸಿ.ಪಾಟೀಲ್ ಕ್ಲಾಪ್ ಮಾಡಿದರೆ, ಹಿರಿಯ ನಿರ್ದೇಶಕ ಓಂ ಪ್ರಕಾಶ್‍ರಾವ್ ಕ್ಯಾಮಾರ ಆನ್ ಮಾಡಿದರು. ಚಿತ್ರದಲ್ಲಿ ಬಿ.ಸಿ.ಪಾಟೀಲ್ ಕೇಂದ್ರ ಸಚಿವ ಹಾಗೂ ಓಂ ಪ್ರಕಾಶ್‍ರಾವ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಪ್ರಥಮ್ ಅವರು ಕಥೆ,ಚಿತ್ರಕಥೆ ಬರೆದು ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳು, ಐದು ಫೈಟ್ ಇರುತ್ತದೆ. ಪ್ರತಿಯೊಂದು ಸನ್ನಿವೇಶಗಳು ಊಹಿಸಲಾಗದಂತೆ ಬರುತ್ತದೆ. ಬೆಂಗಳೂರು, ಮಂಗಳೂರು, ಹಾಡುಗಳಿಗೆ ರಷ್ಯಾಗೆ ಹೋಗುವ ಇರಾದೆ ಇದೆ. ಕಾಮಿಡಿ, ಮಾಸ್, ರೋಮಾನ್ಸ್ ಇರುವುದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ ತೂಕದ ಸಂದೇಶ ಇರುತ್ತದೆ ಎಂದರು.

ಇದೊಂದು ಪ್ಯಾನ್ ದಿಕ್ಕಿನಕಡೆಯ ಕನ್ನಡ ಸಿನಿಮಾ ಎನ್ನಬಹುದು. ಎಲ್ಲರೂ ನಮ್ಮ ಕಡೆ ತಿರುಗಲಿ ಎಂಬ ಅಭಿಲಾಷೆ. ದೇಶಪ್ರೇಮ ಸಾರುವ ಮಹಿಳಾ ಪ್ರಧಾನ ಚಿತ್ರವಾಗಿರುತ್ತದೆ. ಟ್ರಾವೆಲ್ಸ್ ನಡೆಸುತ್ತಿದ್ದು, ನೈಜಿರಿಯಾದಿಂದ 1000 ಕೋಟಿ ಮೌಲ್ಯದ ಕಂಟೈನರ್ ಬರುತ್ತದೆ. ಅದನ್ನು ಬೆಂಗಳೂರಿನಿಂದ ಗೋವಾಗೆ ಸಾಗಿಸಲು ದುರುಳರು ಯೋಜನೆ ಹಾಕಿಕೊಂಡಿರುತ್ತಾರೆ.

ಯಾವುದೇ ಕಾರಣಕ್ಕೂ ಅದು ತಲುಪಬಾರದು ಎನ್ನುವ ಧೋರಣೆ ನನ್ನದಾಗಿರುತ್ತದೆ. ಇದರ ಮಧ್ಯೆ ಇಂಟರ್‍ಪೂಲ್‍ನವರಿಂದಲೂ ಟಾಸ್ಕ್ ಆಗದೆ ಇದ್ದಾಗ, ಕೇಂದ್ರ ಸರ್ಕಾರವು ಮಹತ್ವದ ನಿರ್ಣಯ ತೆಗೆದುಕೊಳ್ಳುತ್ತದೆ. ಕೊನೆಗೆ ನಾಯಕ ಮತ್ತು ನಾಯಕಿ ಇಬ್ಬರು ಚಾಣಾಕ್ಷತನದಿಂದ ಅದನ್ನು ಯಾವ ರೀತಿ ನಾಶ ಮಾಡುತ್ತಾರೆ ಎಂಬುದನ್ನು ಹಾಸ್ಯ, ಆಕ್ಷನ್‍ನಿಂದ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಯುಕ್ತರುಗಳಾಗಿ ಶಶಿಕುಮಾರ್, ರವಿಕಾಳೆ ಇರುತ್ತಾರೆ. ನಿಮ್ಮಗಳ ಬೆಂಬಲ ಸದಾ ಇರಲಿ ಎಂದು ಪ್ರಥಮ್ ಕೋರಿದರು.

ಬಳ್ಳಾರಿ ಮೂಲದ ಆರನ, ಪತ್ರಕರ್ತೆಯಾಗಿ ಅನ್ವಿತಿಶೆಟ್ಟಿ ನಾಯಕಿಯರು. ಉಳಿದಂತೆ ಗೋಕುಲ್, ಮುನಿ, ಕಾಮಿಡಿಕಿಲಾಡಿಗಳು ಖ್ಯಾತಿಯ ಸಂತು, ರವೀಂದ್ರನಾಥ್ ಮುಂತಾದವರು ನಟಿಸುತ್ತಿದ್ದಾರೆ. ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು