ಗದಗ: ಸರ್ಕಾರದ ಅನುದಾನ ಬಿಡುಗಡೆಯಾಗದಿದ್ದಕ್ಕೆ ನೊಂದು, ಕಳೆದ 18 ದಿನಗಳಿಂದ ಗೂಢವಾಗಿ ನಾಪತ್ತೆಯಾಗಿರುವ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಅವರ ಸುಳಿವು ಕೊನೆಗೂ ಸಿಕ್ಕಿದ್ದು, ಅವರು ಮಧ್ಯಪ್ರದೇಶದ ಭೂಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಪ್ರತ್ಯಕ್ಷರಾಗಿದ್ದಾರೆ.ಆಂಧ್ರಪ್ರದೇಶದಿAದ ಭೂಪಾಲ್ ಸೇರಿದ ಎಇಇ: ಪ್ರಕರಣದ ಆರಂಭಿಕ ತನಿಖೆಯಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು.