LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ಕಾಟಾಚಾರಕ್ಕೆ ಬರ ಅಧ್ಯಯನ ಮಾಡುವರಿಗೆ ನಾನು ಉತ್ತರ ಕೊಡಲ್ಲ

ಚಿಂತಾಮಣಿ: ರಾಜ್ಯದ ಹಲವಾರು ದರ್ಗಾಗಳಲ್ಲಿ ಬಹಳ ಹೆಚ್ಚು ಪ್ರಖ್ಯಾತಿ ಪಡೆದಿರುವ ಮುರುಗಮಲ್ಲ ಮತ್ತು ನಿಮ್ಮಕಾಯಲಹಳ್ಳಿ ದರ್ಗಾಗೆ ಅಪಾರ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಬಂದು ತಮಗೆ ಇರುವ ತೊಂದರೆಗಳು ನಿವಾರಣೆಯಾಗಲಿ ಎಂದು ನಂಬಿಕೆ ಇಟ್ಟು ನಿವಾರಣೆಗಳನ್ನು ಬಗೆಹರಿಸಿಕೊಂಡು ಹೋಗುತ್ತಾರೆ.

ಈ ಎರಡು ದರ್ಗಾಗಳು ಸುಮಾರು ನೂರಾರು ವರ್ಷಗಳ ಇತಿಹಾಸವುಳ್ಳ ದರ್ಗಾಗಳು ಆಗಿದ್ದು ಎರಡು ದರ್ಗಾಗಳನ್ನು ಉತ್ತಮ ದರ್ಜೆಗೆ ಏರಿಸಲು ಮೊದಲನೇ ಹಂತದ ವಿನ್ಯಾಸವನ್ನು ಪೂರ್ಣಗೊಳಿಸಲಾಗಿದೆ ಎಂದು  ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು

ತಾಲ್ಲೂಕಿನ ಮುರುಗಮಲ್ಲ ಹೋಬಳಿ ನಂದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿರುವ ಹಜರತ್ ಸೈಯದ್ ಜಲಾಲ್ ಖಾಕಿ(ಞhಚಿಞi)ಷಾ ಮೌಲಾ ಬಾಬಾ ದರ್ಗಾ ಉರುಸ್ ಪ್ರಯುಕ್ತ ದರ್ಗಾ ಗೆ ಬೇಟಿ ನೀಡಿದರು ಈ ಸಂದರ್ಭದಲ್ಲಿ ದರ್ಗಾ ಕಮಿಟಿ ಮುಜಾವರಗಳು ಗ್ರಾಮಸ್ಥರಿಂದ ಅದ್ದೂರಿಯಾಗಿ ಸಚಿವರಿಗೆ ಸ್ವಾಗತ ಕೋರಿದರು.

ನಂತರ ಮಾತನಾಡಿದ ಸಚಿವರು ವಿಸ್ತೃತವಾಗಿ ಮುರುಗಮಲ್ಲ ಮತ್ತು ನಿಮ್ಮಕಾಯಲಹಳ್ಳಿ ದರ್ಗಾ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದ ಅವರು ನಿಮ್ಮಕಾಯಲಹಳ್ಳಿ ದರ್ಗಾ ಗೆ ಬರುವ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ವಕ್ಫ್ ಸಚಿವರೊಂದಿಗೆ ಎಲ್ಲಾ ರೀತಿಯ ಮಾತು ಕಥೆಗಳು ನಡೆದಿವೆ ಎಂದು ಹೇಳಿದರು.

ಬಿಜೆಪಿ ನಾಯಕರು ನಡೆಸಿರುವ ಬರ ಅಧ್ಯಯನ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವರಿಗೆ ಕುಣಿಯಕ್ಕೆ ಬಾರದಂತೆ ಇರುವವರಿಗೆ ನೆಲ ಡೊಂಕು ಎಂಬಂತೆ ಅವರು ಹತಾಶರಾಗಿದ್ದಾರೆ.ಎಲ್ಲಾ ರೀತಿಯಲ್ಲಿ ಬಹಳ ವಿಸ್ಕೃತವಾಗಿ ಕಂದಾಯ ಇಲಾಖೆಯಿಂದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರು ಬರ ಅಧ್ಯಯನವನ್ನು ನಿರ್ವಹಿಸಿದ್ದಾರೆ.ಕೇಂದ್ರ ಸರ್ಕಾರದ ನಿಯಮಗಳಿಂದ ರಾಜ್ಯಕ್ಕೆ ಬಹಳಷ್ಟು ತೊಂದರೆಗಳಾಗುತ್ತಿವೆ ಪದೇ ಪದೇ ಕಾಂಗ್ರೆಸ್ ಸರ್ಕಾರ ನಿಯಮಗಳನ್ನು ಬದಲಾವಣೆ ಮಾಡುವಂತೆ ಹೇಳುತ್ತಿದ್ದರು ಕೇಂದ್ರದಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ಬದಲಾವಣೆ ತರುವ ಯೋಗ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಅಮೀರ್ ಜಾನ್  ದಾದಾಪೀರ್, ಮುಖಂಡರಾದ ಸೋಮಶೇಖರರೆಡ್ಡಿ, ಮೌಲಾ ಜಿ ರಾವ್, ಕಾರ್ತಿಕ್, ವೆಂಕಟ್ ರಾಮರೆಡ್ಡಿ, ವೆಂಕಟೇಶ್, ರವೀಂದ್ರ, ಅಸ್ಲಂ, ಅಟೆಂಡರ್ ಮೆಹಬೂಬ, ದರ್ಗಾ ಮುಜಾವರಗಳಾದ ಎಸ್.ಮೌಲಾಅಲಿ, ಪ್ಯಾರೆಜಾನ್, ಮಹಬೂಬ್ ಸಾಬ್, ತಬರೇಜ್, ಶಫಿವುಲ್ಲಾ, ಸಮೀವುಲ್ಲಾ, ರಫೀಕ್, ಜಿಯಾಉಲ್ಲಾ, ತಾಜ್ ಪೀರ್, ಜಬೀ, ದರ್ಗಾ ಕಮಿಟಿ ಸದಸ್ಯರಾದ ಮುಹಮ್ಮದ್, ಇಮ್ತಿಯಾಜ್, ರಿಯಾಜ್, ಜಬೀರ್, ಶಬ್ಬೀರ್, ವಲಿಜಾನ್, ಸದ್ದಾಂ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಮುಖಂಡರುಗಳು ಗ್ರಾಮಸ್ಥರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು