LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಲಕ್ಷ್ಮೀಪುತ್ರ' ಸಿನಿಮಾದ ಮೊದಲ ಹಾಡು ಬಿಡುಗಡೆ ಚಿಕ್ಕಣ್ಣ ನಾಯಕನಾಗಿರುವ ಸಿನಿಮಾ `ಲಕ್ಷ್ಮೀಪುತ್ರ'.

ಡೈರೆಕ್ಟರ್ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.ನಿರ್ಮಾಪಕ ಎಪಿ ಅರ್ಜುನ್ ಮಾತನಾಡಿ, ಯಾವಾಗಲೂ ಮಾತನಾಡುವ ಪದದಿಂದ ಹಾಡು ಶುರುವಾಗಬೇಕು. ಹಾಡು ಎಲ್ಲರ ಬಾಯಲ್ಲಿ ಇರಬೇಕು ಅನ್ನೋದು ನನ್ನ ತಲೆಯಲ್ಲಿ ಇತ್ತು. ಲವರ್ಸ್್ಸ ಮಾತನಾಡುವಾಗ ಇನ್ನೇಲೆ, ಆಮೇಲೆ ಅಂತಾರೆ ಮಾತನಾಡುತ್ತಾರೆ. ಅದನ್ನು ಇಟ್ಕೊಂಡು ಮಾಡಿದ ಹಾಡು ಇದು. ಇದನ್ನು ಕರ್ನಾಟಕ ಜನತೆಗೆ ಅರ್ಪಿಸಿದ್ದೇವೆ. ಅಪ್ಪಟ ಕನ್ನಡ ಹಾಡು. ಮಂಡ್ಯ ಸೊಗಡು ಇರುವ ಗೀತೆ. ಇದನ್ನು ಹಾಡಿರುವವರು ದರ್ಶನ್, ಸರಿಗಮಪ ರನ್ನರ್ ಅಪ್. ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಅವರ ಜೊತೆ ಪೃಥ್ವಿ ಭಟ್ ಹಾಡಿದ್ದಾರೆ. ಎಂದರು.ನಟ ಚಿಕ್ಕಣ್ಣ ಮಾತನಾಡಿ, ಎಪಿ ಅರ್ಜುನ್ ಸಾಹಿತ್ಯ ಬರೆಯುತ್ತಾರೆ, ಅರ್ಜುನ್ ಜನ್ಯ ಮ್ಯೂಸಿಕ್ ಮಾಡ್ತಾರೆ ಎಂದಾಗ ಭಯ ಆಗಿತ್ತು. ನನ್ನ ಮೊದಲ ಚಿತ್ರದ ನನಗೆ ನೀನು ಹಾಡು ಹಿಟ್ ಕೊಟ್ಟ ಜೋಡಿ. ಮತ್ತೆ ಒಂದಾಗ್ತಾರೆ ಎಂದಾಗ ಆ ನಿರೀಕ್ಷೆ ತಲುಪುತ್ತೇವಾ ಎಂಬ ಭಯವಿತ್ತು. ಆ ನಿರೀಕ್ಷೆ ತಲುಪಿದ್ದೇವೆ. ಅದಕ್ಕಿಂತ ದೊಡ್ಡ ಮಟ್ಟದ ಯಶಸ್ಸು ಕೊಡ್ತಿರಾ ಎಂದು ಭಾವಿಸಿದ್ದೇನೆ. ಒಂದು ಚಿತ್ರದ ಮೊದಲ ಇನ್ವಿಟೇಷನ್ ಎಂದರೆ ಹಾಡು. ಹಾಡುಗಳು ಪ್ರೇಕ್ಷಕರನ್ನು ತಲುಪಲು ಬೇಕಿರೋದು ಆಡಿಯೋ ಕಂಪನಿಗಳು. ನಮ್ಮಚಿತ್ರದ ಆಡಿಯೋ ಹಕ್ಕನ್ನು ಡಿಬೀಟ್ಸ್ ಕಂಪನಿ ಕೊಂಡುಕೊAಡಿದೆ ಎಂದು ಸಂತಸ ಹಂಚಿಕೊಂಡರು.`ಲಕ್ಷ್ಮೀಪುತ್ರ' ಸಿನಿಮಾದ ಮೊದಲ ಹಾಡು ಬಿಡುಗಡೆಚಿಕ್ಕಣ್ಣ ನಾಯಕನಾಗಿರುವ ಸಿನಿಮಾ `ಲಕ್ಷ್ಮೀಪುತ್ರ'. ಚಿತ್ರವನ್ನು ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ನಿರ್ಮಾಣ ಮಾಡಿದ್ದಾರೆ. `ಲಕ್ಷ್ಮೀಪುತ್ರ' ಸಿನಿಮಾದ ಮೊದಲ ಹಾಡು ಬಿಡುಗಡೆಚಿಕ್ಕಣ್ಣ ನಾಯಕನಾಗಿರುವ ಸಿನಿಮಾ `ಲಕ್ಷ್ಮೀಪುತ್ರ'. ಮೂಲಕ ಯುವ ನಟಿ ವಂದಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST